spot_img
spot_img

ಚುನಾವಣೆ ಹೊಸ್ತಿಲಲ್ಲಿರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಿ; ಡಿಸಿ

Must Read

- Advertisement -

ಸಿಂದಗಿ: ಚುನಾವಣೆ ಹೊಸ್ತಿಲಲ್ಲೆ ಇರುವುದರಿಂದ ಅಧಿಕಾರಿಗಳು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು ಮತ್ತು ಮತಗಟ್ಟೆಯಲ್ಲಿ ಮೂಲ ಸೌಕರ್ಯ ಬಗ್ಗೆ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ವಿಜಯಮಹಾಂತೇಶ ದಾನಮ್ಮನವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬುಧವಾರ ಬೆಂಗಳೂರಿನಿಂದ ಆಗಮಿಸಿದ ಜಿಲ್ಲಾಧಿಕಾರಿಗಳು ಕಲಬುರ್ಗಿಯಿಂದ ವಿಜಯಪುರ ಮಾರ್ಗವಾಗಿ ಬರುವಾಗ ಮೋರಟಗಿ ಗ್ರಾಮದ ಮತಗಟ್ಟೆ ಸಂಖ್ಯೆ 112,113,114,115,116 ಮತ್ತು 117 ಮತಗಟ್ಟೆಗಳು ಸೇರಿದಂತೆ ಪಕ್ಕದ ಗ್ರಾಮಗಳಾದ ಗಬಸಾವಳಗಿ, ಚಿಕ್ಕ ಯರಗಲ್, ಸೇರಿದಂತೆ ಎನ್ ಎಚ್ ಹೈವೇ ರಸ್ತೆ ಪಕ್ಕದ ಗ್ರಾಮಗಳ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿ ಅವರು ಮಾತನಾಡಿದರು.

- Advertisement -

ಮತಗಟ್ಟೆಗಳ ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಕೊಠಡಿ ಒಳಗಡೆ ವಿದ್ಯುತ್ ಸಂಪರ್ಕ, ಟೇಬಲ್ ಗಳ ವ್ಯವಸ್ಥೆ, ಶೌಚಾಲಯ, ಮತ್ತು ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ಅನೇಕ ಮೂಲ ಸೌಕರ್ಯಗಳನ್ನು ಒದಗಿಸುವ ಕಾರ್ಯ ಅಚ್ಚುಕಟ್ಟಾಗಿ ಆಗಬೇಕು ಎಂದು ಹೇಳಿದರು.

ವಿದ್ಯಾರ್ಥಿಗ ಜೊತೆ ಚರ್ಚೆ:  

ಚಿಕ್ಕ ಯರಗಲ್ ಹಾಗೂ ಗಬಸಾವಳಗಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದ ಕುರಿತು ಚರ್ಚಿಸಿದರು ಮಕ್ಕಳು ಜಿಲ್ಲಾಧಿಕಾರಿಗಳು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು ಶಾಲೆಯಲ್ಲಿ ಮಕ್ಕಳ  ಸಂಖ್ಯೆ ಕಡಿಮೆ ಇರುವುದರಿಂದ ಶಿಕ್ಷಕರಿಗೆ ಕೇವಲ ಶಾಲೆಯಲ್ಲಿ ಶಿಸ್ತು ಕಾಪಾಡಿದರೆ ಸಾಲದು ಗ್ರಾಮೀಣ ಭಾಗದಲ್ಲಿ ಅನಕ್ಷರ ಹೊಡೆದೋಡಿಸುವ ನಿಟ್ಟಿನಲ್ಲಿ ಪಾಲಕರನ್ನು ಭೇಟಿ ಮಾಡಿ ಮಕ್ಕಳಿಗೆ ಹೊಲಗದ್ದೆಗಳಿಗೆ ಕಳಿಸಬೇಡಿ ನಿಮ್ಮ ಮಕ್ಕಳನ್ನು ತಿಳಿಹೇಳಿ ಶಾಲೆಗೆ ಕಳುಹಿಸಬೇಕು ಎಂದರು.

ವಿಶೇಷವಾಗಿ ಚಿಕ್ಕ ಯರಗಲ್ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿ  ಕಣ್ಣು ಕುರುಡು ಇರುವುದನ್ನು ಗಮನಿಸಿ ಜಿಲ್ಲಾಧಿಕಾರಿಗಳು ಜಿಲ್ಲಾ ಅರೋಗ್ಯ ಅಧಿಕಾರಿಗೆ ಫೋನ ಕರೆ ಮಾಡಿ ತಕ್ಷಣ ವಿದ್ಯಾರ್ಥಿಯ ನೇತ್ರ ಪರಿಶೀಲಿಸಲು ವೈದ್ಯರನ್ನು ಕಳುಹಿಸಿ ಎಂದು ಎಚ್ಚರಿಕೆ ನೀಡಿದರು ಮತ್ತು ಚಿಕ್ಕ ಸಿಂದಗಿಯ ಶಾಲೆಯಲ್ಲಿ ಸುಗಲಾಬಾಯಿ ಹಿರೇಮಠ ವಿದ್ಯಾರ್ಥಿನಿ ಸಂಪೂರ್ಣ ಅಂಗವಿಕಲ ಇರುವುದನ್ನು ಗಮನಿಸಿ ಕೂಡಲೇ ಸೈಕಲ್ ವ್ಯವಸ್ಥೆ ಮಾಡಿಕೊಡುವುದಾಗಿ  ಭರವಸೆ ನೀಡಿದರು.

- Advertisement -

ಮತಗಟ್ಟೆ ಪರಿಶೀಲನೆ ಕಾರ್ಯಕ್ರಮದಲ್ಲಿ  ತಾಲೂಕ ದಂಡಾಧಿಕಾರಿ ನಿಂಗಣ್ಣ ಬಿರಾದಾರ, ಗ್ರೇಡ್ 2 ಪ್ರಕಾಶ ಸಿಂದಗಿ, ಕಂದಾಯ ನಿರೀಕ್ಷಕರು ಐ. ಎ. ಮಕಾನದಾರ, ಕಂದಾಯ ನಿರೀಕ್ಷಕರು ಆಲಮೇಲ ಎಂ. ಎ. ಅತ್ತಾರ, ಸಿ. ಬಿ. ಬಾಬಾನಗರ ಚುನಾವಣಾ ಶಿರಸ್ತೇದಾರರು, ಗ್ರಾಮ ಲೆಕ್ಕಧಿಕಾರಿ ಮಾರುತಿ ಸಾಳಂಕಿ ಸೇರಿದಂತೆ ಗ್ರಾ. ಪಂ. ಅಧಿಕಾರಿಗಳು ಇದ್ದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group