spot_img
spot_img

ಅಷ್ಟಾವರಣ, ಪಂಚಾಚಾರ, ಷಟಸ್ಥಲಗಳು ಲಿಂಗಾಯತ ಧರ್ಮದ ಶ್ರೇಷ್ಠ ಕೊಡುಗೆಗಳು – ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ

Must Read

- Advertisement -

ಬೆಳಗಾವಿ: ಗುರು ಬಸವಣ್ಣನವರ ಸಮಷ್ಠಿ ಪ್ರಜ್ಞೆಯ, ಸಮ ಸಮಾಜದ ನಿರ್ಮಾಣಕ್ಕೆ  ಸ್ತ್ರೀ ಸಮಾನತೆ, ದಲಿತೋದ್ದಾರ, ಕಾಯಕ, ದಾಸೋಹ ತತ್ವಗಳನ್ನು ಆಚರಣೆಗೆ ತರುವುದು ಅತಿ ಅಗತ್ಯ ಅಷ್ಟಾವರಣಗಳು ಅಂಗವಾಗಿ, ಪಂಚಾಚಾರಗಳು ಪ್ರಾಣವಾಗಿ ಮತ್ತು  ಷಟಸ್ಥಲಗಳು ಆತ್ಮವಾಗಿ ಶರಣರ ಬದುಕಿಗೆ  ದಾರಿದೀಪವಾಗಿವೆ ಎಂದು ಡಾ. ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿ ಹೇಳಿದರು.

ದಿ.22 ರಂದು ಬೆಳಗಾವಿಯ ಮಹಾಂತೇಶ  ನಗರದ ಲಿಂಗಾಯತ ಸಂಘಟನೆಯ ವಾಷಿ೯ಕೋತ್ಸವ ಜಗಜ್ಯೋತಿ ಬಸವೇಶ್ವರ ಜಯಂತಿ ನಿಮಿತ್ತ ಏರ್ಪಡಿಸಿದ್ದ ಮೂರು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ  ಚಿತ್ತರಗಿ ವಿಜಯ ಮಹಾಂತೇಶ, ತೀಥ೯,ಶಿರೂರದ  ಪೂಜ್ಯರಾದ ಮ.ನಿ.ಪ್ರ. ಬಸವಲಿಂಗ ಸ್ವಾಮೀಜಿಗಳು ಗುರು ಬಸವಣ್ಣನವರ ಸಮಾಜೋ-ದಾಮಿ೯ಕ ಕ್ರಾಂತಿ  ಕುರಿತಾದ ತಮ್ಮ ಪ್ರವಚನ ನೀಡಿ ಮಾತನಾಡಿದರು.      

ಅನುಭಾವ ನೀಡಲು  ಆಗಮಿಸಿದ್ದ  ಬೆನಸ್ಮಿತ್ ಕಾಲೇಜಿನ ಉಪನ್ಯಾಸಕರಾದ ಶ್ರೀಕಾಂತ್ ಶಾನವಾಡವರು  ಮಾತನಾಡುತ್ತಾ, ವಚನಗಳಲ್ಲಿರುವ ಜೀವನ ಮೌಲ್ಯಗಳನ್ನು ನಾವು ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಜೀವನದಲ್ಲಿ ಅಳವಡಿಸಿಕೊಂಡು ಮಾದರಿಯಾಗಬೇಕು. ಬರೀ ತೋರಿಕೆಗಾಗಿ ನಮ್ಮ ಆಚರಣೆಗಳು ಮತ್ತು  ಸಂಘಟನೆಯ ಕೆಲಸಗಳು ಆಗಬಾರದು. ಧರ್ಮದ  ಅಸ್ಥಿತ್ವಕ್ಕೆ ಸೂಕ್ತವಾದ ಯೋಜನೆ ಮತ್ತು ಒಗ್ಗಟ್ಟಿನ ಕಾರ್ಯಾಚರಣೆ ಸದ್ಯದ ಸ್ಥಿತಿಯಲ್ಲಿ ಅತಿ ಅಗತ್ಯವಾಗಿದೆ ಎಂಬುದನ್ನು ಒತ್ತಿ ಹೇಳಿದರು.

- Advertisement -

ಸಾನ್ನಿಧ್ಯ ವಹಿ‌ಸಿ ಮಾತನಾಡಿದ ಬೆಳಗಾವಿಯ ಕಾರಂಜಿ ಮಠದ ಪೂಜ್ಯರಾದ ಮ.ನಿ.ಪ್ರ. ಗುರುಸಿದ್ಧ ಸ್ವಾಮೀಜಿಯವರು ಲಿಂಗಾಯತ ಸಂಘಟನೆಯ ಮೂಲಕ  ಸುಮಾರು ಎರಡು ದಶಕಗಳಿಂದ ನೆರವೇರುತ್ತಿರುವ ವಿಧಾಯಕ ಕಾರ್ಯಕ್ರಮಗಳ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುತ್ತಾಶರಣರ ಸಂದೇಶಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ಪಾಲಿಸುವಂತೆ ಪೂಜ್ಯರು ತಿಳಿಯಪಡಿಸಿದರು.

ಇಂದಿನ ಪ್ರಸಾದ ದಾಸೋಹ ಸೇವೆಗೈದ ವೀರೇಶ ಕಿವುಡಸನ್ನವರ ಸಾಮಾಜಿಕ ಸೇವಾ ಕಾರ್ಯಗಳ ಅಗತ್ಯತೆ ಕುರಿತು ತಮ್ಮ ಮಾತುಗಳ ಮೂಲಕ ಬೆಳಕು ಚೆಲ್ಲಿದರು. ಸಂಸದರಾದ ಶ್ರೀಮತಿ ಮಂಗಲಕ್ಕ ಅಂಗಡಿ, ಮಾಜಿ ನಗರ ಸೇವಕರಾದ ಶಿವನಗೌಡ ಪಾಟೀಲ, ಸುಭಾಸ ಗೂಳಶೆಟ್ಟಿ , ಕಿರಣ್ ಅಗಡಿ ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

- Advertisement -

ನಗರ ಸೇವಕರಾದ ಹಣಮಂತ ಕೊಂಗಾಲಿ ಕೂಡ ತಮ್ಮ ಮಾತುಗಳನ್ನು ಹಂಚಿಕೊಂಡರು. ಸಂಘಟನೆಯ ಅಧ್ಯಕ್ಷರಾದ ಈರಣ್ಣ ದೇಯನ್ನವರ ಸಂಘಟನೆಯ ಬೆಳೆದು ಬಂದ ದಾರಿ ಮತ್ತು ಅದರ ನೇತೃತ್ವದಲ್ಲಿ ಆದ ಸಾಮಾಜಿಕ ಸೇವೆಗಳ ಕುರಿತು ಮಾತನಾಡಿದರು. 

ಸಂಘಟನೆಯ ಸೇವಾ ಕಾರ್ಯಗಳಿಗೆ ತನು, ಮನ, ದನದ  ಮೂಲಕ ಸಹಾಯ ಮಾಡಿದ ಶರಣರನ್ನು ಪೂಜ್ಯರ ಸಾನ್ನಿಧ್ಯದಲ್ಲಿ ಸನ್ಮಾನಿಸಲಾಯಿತು. ಶಂಕರ ಗುಡಗನಟ್ಟಿ. ಗಿರೀಶ್ ಹತ್ತರಕಿ. ರುದ್ರಕುಮಾರ ಹಾಲಪ್ಪನವರ ವಿ.ಕೆ. ಪಾಟೀಲ್.ಬಸವರಾಜ ಬಿಜ್ಜರಗಿ, ಮಲ್ಲಿಕಾರ್ಜುನ ಮುoಗರವಾಡಿ, ಕೆಂಪಣ್ಣ ರಾಮಾಪುರಿ,ಕಮಲಾ ಗಣಾಚಾರಿ, ರಘು ದೊಡಮನಿ, ,ದುಂಡಪ್ಪ, ನಾಗೇಶ ನಾಯಕ್, ಮಹಾಂತೇಶ ಮೆಣಸಿನಕಾಯಿ, ಬಾಬಣ್ಣ ತಿಗಡಿ, ಮಲ್ಲಿಕಾಜು೯ನ ಶಿರಗುಪ್ಪಿ ಸಿದ್ದಪ್ಪ ಸಾರಾಪುರೆ, ಲಕ್ಷ್ಮೀ ಘಾಟೆ, ಪ್ರಸಾದ ಹಿರೇಮಠ, ದೀಪಾ ಪಾಟೀಲ್, ಲಕ್ಷ್ಮೀ ಜೇವನಿ, ರಾಜು ಪಾಟೀಲ್, ಸಾಕ್ಷಿ ಮೇಡಂ ಹಾಗೂ ಗೀತಾ ತಿಗಡಿ.

ಹೀಗೆ ಇವರೆಲ್ಲ ಪೂಜ್ಯರಿಂದ ಸನ್ಮಾನಕ್ಕೆ ಪಾತ್ರರಾದವರು. ನಿಕಟಪೂರ್ವ ಅಧ್ಯಕ್ಷರಾಗಿದ್ದ  ಶರಣ ಸದಾಶಿವ ದೇವರಮನಿ ಸ್ಟಾಗತಿಸಿದರು. ಮಹಾದೇವಿ ಅರಳಿಯವರ  ನೇತೃತ್ವದಲ್ಲಿ ಪ್ರಾರ್ಥನೆ ನೆರವೇರಿತು. ಸಂಘಟನೆಯ ಶರಣೆಯರ ಬಳಗದಿಂದ ವಚನ ನೃತ್ಯ ರೂಪಕ ಪ್ರದರ್ಶನ, ದೇಶಭಕ್ತಿ ಗೀತೆಯ ನೃತ್ಯ ಪ್ರದರ್ಶನ,ವಚನ ಗಾಯನ, ಜಾನಪದ ಹಾಡು  ಹೀಗೆ ಹಲವಾರು ಕಾರ್ಯಕ್ರಮಗಳ ಮೂಲಕ ವೇದಿಕೆ ಶೋಭಿಸುವಂತಾಗಿತ್ತು.

ಸಂಘಟನೆಯ ನಿಕಟಪೂರ್ವ ಅಧ್ಯಕ್ಷರಾಗಿದ್ದ ಶರಣರಾದ ಸದಾಶಿವ ದೇವರಮನಿ ಕಾರ್ಯಕ್ರಮದ ನಿರೂಪಣೆಗೈದರು. ಸಂಘಟನೆಯ ಉಪಾಧ್ಯಕ್ಷರಾದ ಸoಗಮೇಶ ಅರಳಿ ಕಾರ್ಯದರ್ಶಿಗಳಾದ ಸುರೇಶ ನರಗುಂದ, ನಿಕಟಪೂರ್ವ ಅಧ್ಯಕ್ಷರಾದ ಶಶಿಭೂಷಣ ಪಾಟೀಲ್,ಅಶೋಕ ಇಟಗಿ, ಸತೀಶ ಪಾಟೀಲ, ಶoಕರ ಶೆಟ್ಟಿ,ರಮೇಶ ಕಳಸನ್ನವರ, ಪ್ರಭು ಪಾಟೀಲ, ವಿಜಯ ಹುದಲಿಮಠ, ಶಂಕರ ಗುಡಸ, ಹೀಗೆ ಸಂಘಟನೆಯ ಸರ್ವ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group