ಈರಣ್ಣ ಕಡಾಡಿ ಕಾರಿನ ಮೇಲೆ ಹಲ್ಲೆ : ನಿಂಗಪ್ಪ ಫಿರೋಜಿ ಖಂಡನೆ

Must Read

ಮೂಡಲಗಿ – ಪಂಚಮಸಾಲಿ ಮೀಸಲಾತಿ ಸಮಿತಿಯ ಗೌರವಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿಯವರ ಕಾರಿನ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದನ್ನು ಪಂಚಮಸಾಲಿ ಬೆಳಗಾವಿ ಜಿಲ್ಲಾ ಕಾರ್ಯಾಧ್ಯಕ್ಷ ನಿಂಗಪ್ಪ ಫಿರೋಜಿ ಖಂಡಿಸಿದ್ದಾರೆ.

ಈ ಬಗ್ಗೆ ಪ್ರಕಟಣೆಯೊಂದನ್ನು ನೀಡಿರುವ ಅವರು, ಕಡಾಡಿಯವರ ಮೇಲೆ ‘ ಸತೀಶ ಜಾರಕಿಹೊಳಿಗೆ ಜೈ ‘ ಎನ್ನುತ್ತ ಹಲ್ಲೆ ಮಾಡಿದ್ದನ್ನು ಅಖಿಲ ಭಾರತ ಪಂಚಮಸಾಲಿ ಸಮಾಜ ಖಂಡಿಸುತ್ತದೆ ಎಂದಿದ್ದಾರೆ.

ಪಂಚಮಸಾಲಿ ಸಮಾಜವು ಎಲ್ಲಾ ಒಳ ಸಮಾಜದ ಜೊತೆ ಹಾಗೂ ಸೋದರ ಸಮಾಜಗಳಾದ ಕುರುಬ, ಹಾಲುಮತ, ಉಪ್ಪಾರ, ದಲಿತ ಹಾಗೂ ಮುಸ್ಲಿಮ್ ಸಮಾಜಗಳ ಜೊತೆ ಸಾಮರಸ್ಯದಿಂದ ಇರುತ್ತದೆ. ನೀವು ಹೋರಾಟ ಮಾಡಬೇಕಿದ್ದರೆ ಪಕ್ಷದ ಕಚೇರಿ ಮುಂದೆ ಮಾಡಬೇಕಿತ್ತು ಆದರೆ ಕಡಾಡಿಯವರು ಸಮಾರಂಭದಿಂದ ಹೊರಗೆ ಬಂದ ಮೇಲೆ ಹಲ್ಲೆ ಮಾಡಿದ್ದು ನೋಡಿದರೆ ಪಂಚಮಸಾಲಿ ಸಮಾಜಕ್ಕೆ ೨ಎ ಮೀಸಲಾತಿ ಸಿಗದಂತೆ ವ್ಯವಸ್ಥಿತ ಹುನ್ನಾರ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಫಿರೋಜಿ ಆರೋಪಿಸಿದ್ದಾರೆ.

ನಮ್ಮ ಸಮಾಜದ ರಾಷ್ಟ್ರೀಯ ಅಧ್ಯಕ್ಷರ ಮೇಲೆ ಹಲ್ಲೆ ಮಾಡಿದ್ದನ್ನು ನಾವು ಎಂದೂ ಮರೆಯುವುದಿಲ್ಲ ಇದಕ್ಕೆ ತಕ್ಕ ಉತ್ತರವನ್ನು ಪಂಚಮಸಾಲಿ ಸಮಾಜವು ಸಂದರ್ಭ ಬಂದಾಗ ನೀಡುತ್ತದೆ ಎಂದಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group