ಕರ್ನಾಟಕ ರಾಜ್ಯ ಬರಹಗಾರರ ಸಂಘ (ರಿ) ಹೂವಿನ ಹಡಗಲಿ ಇವರ ವತಿಯಿಂದ ಹೊಸಪೇಟೆಯಲ್ಲಿ ಭಾನುವಾರ ನಡೆದ ಕರ್ನಾಟಕ ಧ್ವನಿ ಸಂಚಿಕೆ ಒಂದರ ಅಂತಿಮ ಹಂತದ ಸ್ಪರ್ಧೆ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷರು ಮಧುನಾಯ್ಕ ಲಂಬಾಣಿ ರಚನೆಯ ಸಿಂಗಾರ ಹಾಡನ್ನು ಹೊಸಪೇಟೆಯ ಖ್ಯಾತ ಗಾಯಕಿ ಶ್ರೀಮತಿ ಕಮಲಾ ಕುಲಕರ್ಣಿಯವರು ಬಿಡುಗಡೆಗೊಳಿಸಿದರು.
ಈ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಗಾಯಕಿ ಶ್ರೀಮತಿ ಲಲಿತ ಸಿದ್ದಿ ಹಾಗೂ ಈ ಹಾಡಿಗೆ ಸಂಗೀತ ಸಂಯೋಜನೆ ಶ್ರೀನಿವಾಸನಾಯ್ಕ ಡೈರೆಕ್ಷನ್ ರವಿಕಿರಣ, ಎಡಿಟಿಂಗ್ ಅಭಿಷೇಕ ಎಮ್. ನೃತ್ಯ ಪಲ್ಲವಿ ಎಲ್. ಇವರದ್ದಾಗಿದೆ
ರಾಜ್ಯದಾದ್ಯಂತ ಈ ಹಾಡಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು ಪೋಸ್ಟರ್ ಬಿಡುಗಡೆ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಬರಹಗಾರರ ಸಂಘದ ರಾಜ್ಯ ಅಧ್ಯಕ್ಷರಾದ ಮಧುನಾಯ್ಕ ಲಂಬಾಣಿ, ಗೌರವ ಅಧ್ಯಕ್ಷರು ಮತ್ತು ಲೇಖಕರು ಗೊರೂರು ಅನಂತರಾಜು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಉಪಾಧ್ಯಕ್ಷರು ವಿರುಪಾಕ್ಷಪ್ಪ ಯು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ ಎಸ್ ನಾಯ್ಕ ಕರುನಾಡ ಕಲಿಗಳ ಕ್ರಿಯಾಶೀಲ ಸಮಿತಿ ಅಧ್ಯಕ್ಷರು, ಪಿ ವಿ ವೆಂಕಟೇಶ, ಸಂಘದ ತಾಲೂಕು ಘಟಕದ ಅಧ್ಯಕ್ಷರು ಉದೇದಪ್ಪ, ನಿವೃತ್ತ ಪೋಲಿಸ್ ಅಧಿಕಾರಿ ಡಿ. ಎಸ್.ಗಜೇಂದ್ರ ನಾಯ್ಕ, ನಭಿಸಾಬ್ ಕುಷ್ಟಗಿ, ಕರೋಕೆ ಹಾಡುಗಾರಿಕೆ ಸ್ಪರ್ಧೆಯ ತೀರ್ಪುಗಾರರಾದ ಕುಬೇರನಾಯ್ಕ, ದಾವಣಗೆರೆ ಹಾಗೂ ಸ್ವರೂಪ ಭಾರದ್ವಾಜ, ಚಿಕ್ಕಮಗಳೂರುರವರು ವೇದಿಕೆಯಲ್ಲಿದ್ದರು.
ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀಮತಿ ಆಶಾರಾಣಿ ನಡೋಣಿ ಸದಸ್ಯರು, ಕರ್ನಾಟಕ ಲಲಿತಕಲಾ ಅಕಾಡೆಮಿ, ಬೆಂಗಳೂರು ಹಾಗೂ ರಾಷ್ಟ್ರಮಟ್ಟದ ಚಿತ್ರ ಕಲಾವಿದರು ಬೆಳಗಾವಿ ನೆರವೇರಿಸಿ ಮಾತನಾಡಿದರು.
ಕಾರ್ಯಕ್ರಮದ ನಿರೂಪಣೆ ಎಲ್ ವಾಲ್ಯನಾಯ್ಕ ಸ್ವಾಗತ ಜೂಟೂರು ರಾಘವೇಂದ್ರ ವೇದಿಕೆ ನಿರ್ವಹಣೆಯನ್ನು ಶ್ರೀಮತಿ ಜಿ ನೀಲಗಂಗಮ್ಮ ಶ್ರೀಮತಿ ಆರ್ ಪ್ರಿಯಾಂಕಾ ಹಾಗೂ ಶ್ರೀಮತಿ ಹೆಚ್ ಲಕ್ಷ್ಮಿ ನಿರ್ವಹಿಸಿದರು. ಕರೋಕೆ ಯುಗಳ ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಗಾಯಕ/ಗಾಯಕಿಯರು ಕಮಲಾ ಕುಲಕರ್ಣಿ, ಅಶ್ವಿನಿ ಅರಕಲಗೂಡು, ವಿಜಯ್ ಕುಮಾರ್ ಸಿ. ಆರ್., ಪ್ರಿಯಾಂಕ, ಸುಮಂಗಲಾ ದೇಸಾಯಿ, ಪ್ರಶಾಂತ ಕುಲಕರ್ಣಿ, ಕಾಂಚನಾ ವಿಜಯ ಕುಮಾರ್. ಉಮೇಶ ಕುಮಾರ ಎಚ್. ಎನ್. ಲಲಿತಾ ಸಿದ್ದಿ. ಜೂಟೂರು ರಾಘವೇಂದ್ರ, ಪೂಜಾ ಕುಲಕರ್ಣಿ. ರಮೇಶ್ ಲಮಾಣಿ, ಟಿ. ದೀಪ ತಿಮ್ಮಾ ನಾಯ್ಕ್, ಕವಿತಾಬಾಯಿ ವೈ. ಪಿ. ಮಲ್ಲಿಕಾರ್ಜುನ. ಎಚ್. ಲಕ್ಷ್ಮಿ. ಬಿ. ಎನ್. ನಾಗೇಶ್ ಭಾಗ್ಯ. ಎಸ್, ಡಾ. ಅಶೋಕ್ ಬಾಬು ಎ. ಆರ್, ವಾಸವಿ ಸತೀಶ್. ಶಶಿಧರ್ ಹಿರೇಮಠ
ವಿಜಯಶಾಂತಿ. ಕೆ.ಎಚ್. ಶ್ರೀನಿವಾಸ್. ಜಿ.ನೀಲಗಂಗಮ್ಮ, ವಾಲ್ಯನಾಯ್ಕ ಎಲ್ ಸ್ನೇಹ ತೀರ್ಥಹಳ್ಳಿ, ರಾಮನಾಥ್ ಜೆ ನಾಯ್ಕ,  ಗೌರಿ ಅರಸ್. ಹನುಮಂತ ನಾಯ್ಕ್ ಸಿ.
ಶ್ರೀದೇವಿ ತೇರದಾಳ, ರಾಕೇಶ್ ಸಿಂಗ್ ಡಾ. ವಿದ್ಯಾ. ಕೆ.ಎಲ್. ಗಣೇಶ್, ಎನ್ ಗಂಗಾಧರ ಉಪಸ್ಥಿತರಿದ್ದರು



