Times of ಕರ್ನಾಟಕ
ಕವನ
ಗಜಲ್ ಗಳು
ಹಡೆದ ಮಕ್ಕಳಿಗೆ ಹೆರವಾದಮ್ಯಾಲ ಹೋಗಾಕೆಲ್ಲೈತಿ ಜಾಗ
ಸುಡುಗಾಡು ಬಾ ಅಂತ ಕರದಿಲ್ಲಂದಮ್ಯಾಲ ಇರಾಕೆಲ್ಲೈತಿ ಜಾಗ
ಹೊಟ್ಟ್ಯಾಗಿನ ಬೆಂಕಿ ದಿಗ್ಗಂತ ಉರುದು ಭರೋಸಾ ಸುಟ್ಟು ಹೋಗ್ಯಾವು
ಕಣ್ಣೀರು ಕೋಡಿ ಹರದ್ರೂ ಕನಿಕರಿಲ್ಲಂದಮ್ಯಾಲ ಪ್ರೀತಿಗೆಲ್ಲೈತಿ ಜಾಗ
ಬದುಕು ಅತಂತ್ರಾಗಿ ಎದ್ದು ಬಿದ್ದು ಇನ ಪಾಜಿಗಟ್ಟಿ ಮುಟ್ಟುದೈತಿ
ಕತ್ತು ಹಿಡದು ಬೀದಿಗಿ ನೂಕಿದಮ್ಯಾಲ ಬದುಕಾಕೆಲ್ಲೈತಿ ಜಾಗ
ಬದುಕಿನ ಆಟಕ್ಕ ತೆರಿ ಬೀಳುತನಕ ಬಣ್ಣ ಹಚ್ಚಿ ಜೀವ ತುಂಬುತೀನಿ...
ಕವನ
ರವಿವಾರದ ಕವನಗಳು
ನಮ್ಮೂರು ಬದಲಾಗಿದೆ
ಟಿವಿಗಳು ಬಂದ ಮೇಲೆ
ಹಂತಿಪದ ಬೀಸುವಪದ
ಡಪ್ಪಿನಾಟ ಬಯಲಾಟ
ಕೋಲಾಟ ಡೊಳ್ಳಿನಪದ
ಪುರಾಣ ಕೀರ್ತನ ಭಜನೆ
ಕೇಳದಂತಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಟ್ರಾಕ್ಟರ್ ಬಂದಮೇಲೆ
ಜೋಡೆತ್ತುಗಳಿಗೆ
ಗೆಜ್ಜೆ ಗಗ್ಗರಿ ಕೋಡಣಸು ಜೂಲ
ಹಾಕಿ ಸವಾರಿ ಬಂಡಿಯಲಿ
ಜಾತ್ರೆಗೆ ಹೋಗುವ
ಮಜಾ ಮಾಯವಾಗಿದೆ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಕಾನ್ವೆಂಟ ಶಾಲೆಗಳು ತೆರೆದ ಮೇಲೆ
ಹಿರೀಕರು ಹೇಳುತಿದ್ದ
ಗಾದೆ ಒಡಪು ಒಡವು
ಬಾಯಿಲೆಕ್ಕ ಸಮಸ್ಯಾಗಣಿತ
ಜಾನಪದಕಥೆಗಳನ್ನು
ಹೇಳುವರಿಲ್ಲ ಕೇಳುವರಿಲ್ಲ
ಆಗಿನಂತಿಲ್ಲ
ಈಗ ನಮ್ಮೂರು ಬದಲಾಗಿದೆ
ಕ್ರಿಕೆಟ್ ಬಂದ ಮೇಲೆ
ಹುಲಿಮನೆ ಚವ್ವ
ಗೋಟುಗುಣಿ ಬಗರಿ
ಕುಂಟೆಬಿಲ್ಲೆ ಚಿಣಿದಾಂಡು
ಮರಕೋತಿ ಗೋಲಿಗುಂಡು
ಆಟಗಳು ಬಂಧಾಗಿವೆ
ಆಗಿನಂತಿಲ್ಲ
ಈಗ ನಮ್ಮೂರು...
Uncategorized
ಮುಂದಿನ ವರ್ಷ ಜಿಯೋದಿಂದ 5 ಜಿ ನೆಟ್ ವರ್ಕ್ ಆರಂಭ
ದೇಶದಲ್ಲಿ ಡಿಜಿಟಲ್ ಕ್ರಾಂತಿಯ ದ್ಯೋತಕವಾಗಿ ಜಿಯೋ ಕಂಪನಿಯು ಮುಂದಿನ ವರ್ಷದಲ್ಲಿ 5G ನೆಟ್ ವರ್ಕ್ ಸೇವೆಯನ್ನು ಆರಂಭಿಸಲಿದೆ ಎಂದು ರಿಲಯನ್ಸ್ ಇಂಡಸ್ಟ್ರೀಸ್ ಲಿ. ಮಾಲೀಕ ಮುಖೇಶ್ ಅಂಬಾನಿ ಪ್ರಕಟಿಸಿದ್ದಾರೆ.ಕಂಪನಿಯ 43 ನೆಯ ವಾರ್ಷಿಕ ಸಭೆಯಲ್ಲಿ ಈ ಘೋಷಣೆ ಹೊರಬಿದ್ದಿದ್ದು ಜಿಯೋದಿಂದ ಈಗಾಗಲೇ 5 ಜಿ ತಂತ್ರಜ್ಞಾನವನ್ನು ಅಭಿವೃದ್ಧಿ ಗೊಳಿಸಲಾಗಿದೆ. ಮುಂದಿನ ವರ್ಷ ಇದನ್ನು ಆರಂಭಿಸುವುದರ...
ಕವನ
ಚುಟುಕು ಹಾಗೂ ಕವನ
ನಮ್ಮೂರ ಸಿದ್ಧ
ನಮ್ಮೂರ ಸಿದ್ಧ
ಕುಟುಂಬ ಯೋಜನೆಗೆ ಬದ್ಧ,
ಆ-ರತಿಗೊಂದು,
ಈ-ರತಿಗೊಂದು
ಅವನಿಗೆ
ನಮ್ಮೂರಲ್ಲಿ
ಎರಡೇ ಮಕ್ಕಳು..ಸಿ(ಕ)ಹಿಸುದ್ಧಿ
ಸೀಮೆಯೆಣ್ಣೆ ಸುರಿದು,
ಸೊಸೆಯರ ಕೊಲ್ಲುವ
ಅತ್ತೆಯರಿಗೊಂದು
ಸಿ(ಕ)ಹಿ ಸುದ್ದಿ,
ಹೀಗೇ ಸಾಗಿದರೆ
ಸೊಸೆಯರೇ
ನಿಮ್ಮನ್ನು ಕೊಲ್ಲುವರು
ಗುದ್ದಿ ಗುದ್ದಿ!!ಫಲಕ
ಮಹಿಳಾ ಕಾಲೇಜೊಂದರ
ಮುಂದೆ,
ರಸ್ತೆ ಸೂಚನಾ ಫಲಕ
"ಈ ರಸ್ತೆಯಲಿ ಭಾರೀ
ಉಬ್ಬು-ತಗ್ಗುಗಳಿವೆ
ಎಚ್ಚರಿಕೆ...!!"
ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583,ಹಾರು ನೀ ಹಾರು
ಗೂಡಲಿದ್ದ ಮರಿಯೊಂದು
ಜಾರಿ ಕೆಳಗೆ ಬಿದ್ದಿತು
ಹಾರಲು ಬಾರದೇ ಭಯದಿ
ಮುದುಡಿ ನಡುಗುತ್ತಿತ್ತು.
ದೂರದ ಪೊದೆಯಲಿ ಠಕ್ಕ
ನರಿಯೊಂದು ಪಿಳಿಪಿಳಿ
ಕಣ್ಣು ಬಿಡುತ್ತಿತು
ಮರಿಯನು ತಿನ್ನಲು ಕಾದು
ಕುಳಿತಿತ್ತು.
ಕಾಗೆಯೊಂದು ಹಾರಿ ಬಂದು
ಮರದ ಮೇಲೆ ಕುಳಿತಿತು
ಭಯದಿ ನಡುಗುವ...
ಕವನ
ವಚನಗಳು
೧
ಕೆಂಡದನುಭವ ಮೈಯ ಬೇಯಿಸಿತ್ತು
ಉಂಡನುಭವ ಉದರ ಹೊರೆಯಿತ್ತು
ಗಂಡನುಭವ ರಣದಿ ಜಯವ ತಂದಿತ್ತು
ಮಂಡನುಭವ ಜೀವನ್ಮುಕ್ತಿಯ ಕೆಡಿಸಿತ್ತು
ಅತಿಗೊಳಿಸಿದನುಭವ ತೃಪ್ತಿಗೆ ಕಪ್ಪಿಟ್ಟಿತ್ತು
ಹಿತಮಿತದನುಭವ ಭವವ ಗೆಲಿಸಿತ್ತಯ್ಯ
ಸೊಗಲ ಸೋಮೇಶ್ವರ
೨
ಸತ್ಯವಂತರೇ ನುಡಿಯಲಿ
ಎಡುವುತಿಹರಯ್ಯ
ಆಚರಿಪರೇ ನಡೆಯಲಿ ದುರಾಚಾರಿಗಳಾಗಿಹರಯ್ಯ
ವಿಚಾರಿಗಳೇ ವಾದದಿ
ಕುಯುಕ್ತಿಗಿಳಿದಿಹರಯ್ಯ
ದಾರಿತೋರ್ವ ಗುರುವೇ
ಬಟ್ಟೆಗೆಟ್ಟಿಹರಯ್ಯ
ಪಾಲಿಸಬೇಕಾದವರೇ
ನೇಮ ಮುರಿಯುತಿಹರಯ್ಯ
ಪೋಷಣೆ ಮಾಡಬೇಕಾದಾವರೇ
ಆಪೋಷಿಸುತಿಹರಯ್ಯ
ದಾನಿಸಬೇಕಿದ್ದ ದಾಸೋಹಿಗಳೇ ದರವೇಸಿಗಳಾಗಿಹರಯ್ಯ
ಇಂತ ತನು ಮನ ಧನಗೆಟ್ಟಿಹ
ಕಲಿಗಾಲದ ಕೆಸರಲಿ ಸಿಕ್ಕು ಹಲುಬಿ
ಭವವ ನೀಗಲು ಒದ್ದಾಡುತಿಹ ಬಡಜೀವವನೆಂತು ಪೊರೆವೆಯಯ್ಯ
ಸೊಗಲ ಸೋಮೇಶ್ವರ
೩
ಕಣ್ಸೆಳೆವ ಸೌಂದರ್ಯ ಸೃಜಿಸಿದೆ
ಅನುಭವಿಸುವಲ್ಲಿ ಜಿಪುಣನಾಗಿಬಿಟ್ಟೆ
ಸುಗಂಧ ಪರಿಮಳವ...
Uncategorized
ವೃಕ್ಷ ಬೀಜಾರೋಪನದಲ್ಲಿ ಪಾಲ್ಗೊಳ್ಳಿ
ವನಮಹೋತ್ಸವದ ಅಂಗವಾಗಿ ಇದೆ ಮಂಗಳವಾರ ೧೪.೦೭.೨೦೨೦ ಬೆಳಿಗ್ಗೆ ೭ ಘಂಟೆಗೆ ಸವದತ್ತಿ ತಾಲೂಕು ಗೊರವನಕೊಳ್ಳದ ನವಿಲು ತೀರ್ಥದ ಕೆಳಗಿನ ರಸ್ತೆಗೆ ಹೊಂದಿಕೊಂಡಿರುವ ಗುಡ್ಡದಲ್ಲಿ ಸೀಡಾ ಥಾನ್ ಬೀಜ ಹಚ್ಚುವ/ ಹಾಕುವ ಕಾರ್ಯಕ್ರಮವಿದ್ದು. ಈಗಾಗಲೇ ಸವದತ್ತಿಯ "ವೃಕ್ಷ ಭಾರತ ಸೈನಿಕರು" ಸುಮಾರು ೧೨ ಲಕ್ಷ ಬೀಜಗಳನ್ನು ಸಂಗ್ರಹಣೆ ಮಾಡಿದ್ದು ಉಚಿತವಾಗಿ ಹಂಚಲಿದ್ದಾರೆ.ಈ ನಿಸರ್ಗ ಸೇವೆಗಾಗಿ ಆಸಕ್ತರು...
ಸಿನಿಮಾ
ಅಮಿತಾಭ ಬಚ್ಚನ್ ಗೆ ಕೊರೋನಾ ; ಆಸ್ಪತ್ರೆಗೆ ದಾಖಲು
ಖ್ಯಾತ ಬಾಲಿವುಡ್ ನಟ ಅಮಿತಾಭ ಬಚ್ಚನ್ ಅವರನ್ನು ಮುಂಬೈನ ನಾನಾವತಿ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ವರದಿಯಾಗಿದೆ.ಸಂಜೆಗೆ ತಮಗೆ ಕೊರೋನಾ ಇರುವುದಾಗಿ ಬಿಗ್ ಬಿ ಟ್ವಿಟ್ಟರ್ ನಲ್ಲಿ ಬರೆದುಕೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.ಎಪ್ರಿಲ್ ನಲ್ಲಿ ಅವರೇ ಒಂದು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ದೃಷ್ಟಿ ಮಂಜಾಗಿರುವ ಬಗ್ಗೆ ಬರೆದುಕೊಂಡಿದ್ದರು. ಆದರೆ ನಾನೇನು ಕುರುಡನಾಗಿಲ್ಲ...
ಆರೋಗ್ಯ
ಕೊರೋನಾ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತರೊಬ್ಬರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಎಲ್ಲರಿಗೂ ನಮಸ್ಕಾರ, ಕೊರೋನಾ ಸೋಂಕಿತನಾಗಿ ಮೂರನೇ ದಿವಸದ ಚಿಕಿತ್ಸೆ ಪಡೀತಾ ಇರೋ ನಾನು ಇಲ್ಲಿ ನನಗನಿಸಿದ ಕೆಲ ಅನಿಸಿಕೆಗಳನ್ನು ಹಂಚಿಕೊಳ್ತಾ ಇದ್ದೀನಿ.1) ಕೊರೊನಾ ಇದು ಒಬ್ಬ ಸಾಮಾನ್ಯ ಆರೋಗ್ಯವಂತನ ಒಂದು ಸಣ್ಣ ರೋಮವನ್ನೂ ಅಲುಗಾಡಿಸಲು ಆಗದ ನಿಷ್ಕೃಷ್ಠ , ದುರ್ಬಲ ವೈರಾಣು.2) ಈಗಾಗಲೇ ಎಷ್ಟೋ ಜನರ ದೇಹವನ್ನು ಹೊಕ್ಕು ಅವರ ಅರಿವಿಗೆ ಬಾರದೆ ಹೊರಟು ಹೋಗಿರಬಹುದಾದ...
ಆರೋಗ್ಯ
ಮಾಸ್ಕ್ ಧರಿಸುವ ಮೊದಲು ಈ ಆಂಶಗಳನ್ನು ತಿಳಿಯಿರಿ
ಕೊರೋನಾ ಎಂಬ ಮಹಾಮಾರಿಯ ವಿರುದ್ಧ ಹೋರಾಡಲು ಮುಖಕ್ಕೆ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯಂತ ಪರಿಣಾಮಕಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.ಇವು ವೈರಾಣು ಒಬ್ಬರಿಗೆ ಹರಡದಂತೆ ಸಹಕಾರಿಯಾಗುತ್ತವೆ. ಆದರೆ ಎಲ್ಲ ಮಾಸ್ಕ್ ಗಳು ಹಾಗಲ್ಲ.ಪ್ರತಿದಿನ ನೀವು ಮನೆಯಿಂದ ಹೊರಬರಬೇಕಾದರೆ ಮಾಸ್ಕ್ ಧರಿಸಲೇಬೇಕು. ಪೊಲೀಸರು ಕೂಡ ಮಾಸ್ಕನ್ನು ಕಡ್ಡಾಯ ಮಾಡಿ ಬಿಟ್ಟಿದ್ದಾರೆ. ಆದ್ದರಿಂದ ಮಾಸ್ಕ್...
ಕವನ
ಶ್ರೀ ಗುರುಭ್ಯೋ ನಮಃ…..ಕವನಗಳು
ಗುರುವಿಗೆ...
ಜಗವ ಕಾಣುವ ಮೊದಲೇ
ಅದರರಿವು ಇತ್ತವ ನೀನು...
ಹಸಿದಡೆ ಉಣ್ಣುವುದು,
ದಣಿದಡೆ ಮಲಗುವುದು,
ಸೂರ್ಯ ಚಂದ್ರರ ನೋಡಿ
ನಕ್ಕು ನಲಿದಾಡುವುದು
ತೊಟ್ಟಿಲಲಿ ಮಲಗಿದವಗೆ
ಎಲ್ಲಾ ಪ್ರೀತಿಯನಿತ್ತವ ನೀನು....
ಗುರುವೇ ನಿನಗೆ ಶರಣು..
ಅಮ್ಮನೇ ಮೊದಲಾದ
ಬಂಧುಗಳ ತೋರಿದೆ ನೀನು
ಗಿಡ ಮರ ಬಳ್ಳಿಗಳ
ಕಾಣಲು ಕಲಿಸಿದೆ ನೀನು
ಓದು ಬರಹದಲಿ
ಬ್ರಹ್ಮಾಂಡವ ತೋರಿದೆ ನೀನು...
ನೂರು ದಾರಿಗಳಲ್ಲಿ
ಬದುಕನು ಕಲಿಸಿದೆ ನೀನು...
ಗುರುವೇ ನಿನಗೆ ಶರಣು....
ನಾನಾರೆಂಬುವ ಮಾತು
ಮರೆತು ಸಾಯುವ ಜಗಕೆ
ಪರಿಪರಿಯಾಗಿ ಅರುಹುವ
ಕರುಣಾಳು ನೀನೇ...
ಎಲ್ಲವೂ ನಾನೇ..
ಜಗವೆಲ್ಲವೂ ನನ್ನಿಂದೆ
ಎಂಬೀ ಬರೀ ಗುಡುಗಿನ
ಸದ್ದಡಗಿಸಿದ...
About Me
11616 POSTS
1 COMMENTS
Latest News
ಬೆಳ್ಳಿ ಬಂಗಾರ ಕದ್ದ ಖದೀಮರ ಹೆಡೆಮುರಿ ಕಟ್ಟಿದ ಗೋಕಾಕ ಪೋಲಿಸರು
ಗೋಕಾಕ ನಗರದ ಬೀಗ ಹಾಕಿದ್ದ ಮನೆಯೊಂದರ ಕೀಲಿ ಮುರಿದು ಬೆಳ್ಳಿ ಬಂಗಾರ ಸೇರಿದಂತೆ ನಗದು ಹಣ ಕದ್ದು ಪರಾರಿಯಾಗಿದ್ದ ಕುಖ್ಯಾತ ಖದೀಮರನ್ನು ಗೋಕಾಕ ಪೋಲಿಸರು ಬಂಧಿಸುವಲ್ಲಿ...



