ಅತ್ಯಂತ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ, ನನ್ನದು-ತನ್ನದೆಂಬ ಮಮಕಾರ ತೊರೆದ ಮಹಾಪುರುಷರೇ ಶ್ರೀ ಸಿದ್ಧೇಶ್ವರ ಸ್ವಾಮಿಗಳವರು, ಇವರು ಸಂತರಷ್ಟೇ ಅಲ್ಲ ಜ್ಞಾನೋಪಾಸಕರು ಕೂಡ. ಸಂತರು ನಾಡಿನಲ್ಲಿ ಬಹಳ ಜನ ಇದ್ದರು, ಈಗಲೂ ಇದ್ದಾರೆ. ಆದರೆ ಜ್ಞಾನಯೋಗಿಗಳು ಬಹಳ ಅಪರೂಪ. ಅಂಥವರಲ್ಲೊಬ್ಬರು ಶ್ರೀ ಸಿದ್ಧೇಶ್ವರ ಸ್ವಾಮಿಗಳು.
ಬಿಜಾಪುರ(ವಿಜಯಪುರ)ದ ಜ್ಞಾನಯೋಗಾಶ್ರಮ ಜನತೆಗೆ ಜ್ಞಾನದಾಸೋಹ ನೀಡುವ ವಿಶಿಷ್ಟ ಕೇಂದ್ರ. ಗದುಗಿನ...
ಆಗ ತಾನೇ ಎರಡನೇ ಮಹಾಯುದ್ಧ ಮುಗಿದಿತ್ತು. ವಿಶ್ವಕ್ಕೆ ಶಾಂತಿಯ ಅಗತ್ಯವಿತ್ತು. ಇದನ್ನು ಮನಗಂಡು 1945ರಲ್ಲಿ ಜಾಗತಿಕ ಸಹಕಾರ, ಶಾಂತಿ ಸ್ಥಾಪನೆ, ಮಾರ್ಗದರ್ಶನ, ವ್ಯಾಪಾರ ವೃದ್ಧಿ, ಪರಸ್ಪರರ ಸಂಬಂಧ ಸುಧಾರಣೆ, ಅಂತಾರಾಷ್ಟ್ರೀಯ ವ್ಯಾಜ್ಯಗಳ ಇತ್ಯರ್ಥದ ಹಲವು ಉದ್ದೇಶಗಳನ್ನು ಇರಿಸಿಕೊಂಡು 'ವಿಶ್ವಸಂಸ್ಥೆ (ಯುನೈಟೆಡ್ ನೇಷನ್ಸ್- UN)' ಜನ್ಮತಾಳಿತು.
ವಸುದೈವ ಕುಟುಂಬಕಂ ಎಂಬ ದೃಷ್ಟಿಕೋನದಲ್ಲಿ ಇಡೀ ಜಗತ್ತಿನ ಎಲ್ಲ ರಾಷ್ಟ್ರಗಳನ್ನು...
ಏನು ಕಣ್ಣು
ಏನು ಕಣ್ಣು ಏನು ಕಣ್ಣು
ಏನು ಕಣ್ಣು ನಿನ್ನವು
ಚಿನ್ನದೊಡವೆಯಲ್ಲಿ ಸೇರಿ
ಮಿನುಗುತಿರುವ ರನ್ನವು !
ಮನವ ಸೆಳೆಯುವಂಥ ಹಣ್ಣು
ಕಪ್ಪುನೇರಳೆನ್ನಲೆ
ಮಾಗಿದಂಥ ಕರ್ರಗಿರುವ
ಕವಳಿಹಣ್ಣು ಕೇಳೆಲೆ !
ವದನಕೊಳದೊಳೀಜುವಂಥ
ಮೀನು ಕಣ್ಣು ನಿನ್ನವು
ಗಗನಮೊಗದಿ ಮಿನುಗುವಂಥ
ಚುಕ್ಕಿ ಕಣ್ಣು ಚೆಂದವು !
ಕಮಲಮುಖದಿ ಕೂತುಕೊಂಡು
ಜೇನನುಂಬ ತುಂಬಿಯು
ಶಿರದ ಗರ್ಭಗುಡಿಯಲಿದ್ದು
ಬೆಳಗುತಿರುವ ಹಣತೆಯು !
ಮಾರ ಹುಬ್ಬವಿಲ್ಲ ಹಿಡಿದು
ಬಿಟ್ಟ ಪುಷ್ಪಬಾಣವು
ಕಾಮ ಬಂದು ಕಾಯದಲ್ಲಿ
ನೆಲೆಸಿದಂಥ ತಾಣವು !
ಏನು ಕಣ್ಣು ಏನು ಕಣ್ಣು
ಏನು ಕಣ್ಣು ತೋರೆಲೆ
ಕಣ್ಣಿನಲ್ಲಿ ಕಣ್ಣ...
ಹಸಿದ ಹೊಟ್ಟೆ ಮತ್ತು ಖಾಲಿ ಜೇಬು ಇವೆರಡೂ ಜಗತ್ತಿನಲ್ಲಿ ಯಾವ ವಿಶ್ವ ವಿದ್ಯಾಲಯವೂ ಕಲಿಸದ ಪಾಠವನ್ನು ಕಲಿಸುತ್ತವೆ.ಇವು ಎಲ್ಲೋ ಓದಿ, ಕೇಳಿ, ನೋಡಿದರೆ ಸಿಗುವ ಅನುಭವಗಳಲ್ಲ, ವಾಸ್ತವದಲ್ಲಿ ಅವುಗಳನ್ನು ಅನುಭವಿಸಿದವರಿಗೇ ಗೊತ್ತು ಅವೆರಡರ ಗತ್ತು ಏನು ಅಂತ.
ಅಂದಹಾಗೆ ನಾನು ಈಗ ನಿಮಗೆ ಹೇಳ ಹೊರಟಿರುವುದು ಅಂತಹುದೇ ಒಂದು ನೊಂದು, ಬೆಂದು ಇಡೀ ಮನುಕುಲವೇ ನಿಬ್ಬೆರಗಾಗಿ...
ಮೂಡಲಗಿ: ಪಟ್ಟಣದ ನಿವಾಸಿ ನಿವೃತ್ತ ಪ್ರಧಾನಗುರು, ಆದರ್ಶ ಶಿಕ್ಷಕ ವೃತ್ತಿ ಪರಿಪಾಲಕ ( ಸುಣಧೋಳಿಯ ಶಂಕರ ಗುರು, ಶರಣಪ್ಪ ಮನೆತನದ) ಶಂಕರ ಸಿದ್ರಾಯಪ್ಪಾ ಕಮತಿ (61) ನಿಧನರಾದರು.
ಮೃತರು ಪತ್ನಿ, ಓರ್ವ ಪುತ್ರ, ಮೂವರು ಪುತ್ರಿಯರು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ನಿನ್ನ ಯಾದ್ ನಲ್ಲಿ ಮುಳುಗಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಎಲ್ಲ ತೊರೆದು ನಿದಿರೆಯಲಿರುವವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮುಲಾಮು ಇಲ್ಲದ ಗಾಯಗಳ ಮತ್ತೆ ಮತ್ತೆ ತಲಾಷಿ ಮಾಡಲು ಹೋಗಬೇಡ ಓ ಸಾಕಿ
ಹಾಡಿನ ಚರಣದಲಿ ತೇಲಿದವನಿಗೆ ಹಗಲೇನು ಇರುಳೇನು ಒಂದೇ ಅಲ್ಲವಾ ಸಾಕಿ
ಮದ್ಯದ ನಂಟು ಬಹಳ ದೊಡ್ಡದು ಈ ಜಗತ್ತಿಗಿಂತಲೂ ಇನ್ನೇನು ಹೇಳುವುದು...
ಮೂಡಲಗಿ: ಮಾತಂಗ (ಮಾದರ) ಸಮಾಜದ ಪ್ರತಿಯೊಬ್ಬರು ಸಮಾಜದ ಇತಿಹಾಸವನ್ನು ಅರಿತು ಸಮಾಜದ ಮಹಾನ್ ಪುರುಷರ ತತ್ವ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ತಮ್ಮ ಮಕ್ಕಳಿಗೆ ಸಮಾಜದ ಇತಿಹಾಸವನ್ನು ತಿಳಿಸಬೇಕು ಎಂದು ಅಗರಖೇಡ ಮಾತಂಗ (ಮಾದರ)ಸಮಾಜದ ಹಿರಿಯ ಚಿಂತಕ ಸ್ವತಂತ್ರ ಶಿಂಧೆ ಹೇಳಿದರು.
ಪಟ್ಟಣದ ಅಂಬೇಡ್ಕರ ಭವನದಲ್ಲಿ ಮಾತಂಗ (ಮಾದರ) ಸಮಾಜದ ಗತವೈಭವ ಇತಿಹಾಸ ಕುರಿತು ಸೋಮವಾರ ಜರುಗಿದ...
ಸ್ನೇಹಿತರೆ,
ರಾತ್ರಿಯಲ್ಲಿ ಪಕ್ಕನೆ ಉಂಟಾಗುವ ಮೃತ್ಯುವಿನಿಂದ ಹೇಗೆ ಪಾರಾಗಬಹುದು..? ವೈದ್ಯರೋರ್ವರು ತನ್ನ ಅಮೂಲ್ಯ ಸಲಹೆಯನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ನಿದ್ರಿಸುತ್ತಿರುವಾಗ ರಾತ್ರಿಯ ಸಮಯದಲ್ಲಿ ಮೂತ್ರವಿಸರ್ಜನೆ ಮಾಡಲು( ಟಾಯ್ಲೆಟ್ ಗೆ ಹೋಗಲು) ಪ್ರತಿಯೋರ್ವ ವ್ಯಕ್ತಿಯೂ ಮೂರೂವರೆ ನಿಮಿಷ ಜಾಗ್ರತೆವಹಿಸಬೇಕು ಇದು ಅತ್ಯಂತ ಅಮೂಲ್ಯ ಸಮಯವಾಗಿದೆ. ರಾತ್ರಿ ನಿದ್ದೆಯಿಂದ ತಕ್ಷಣ ಏಳುವಾಗ ಉಂಟಾಗುವ ಸಾವನ್ನು ಈ ಮೂರೂವರೆ ನಿಮಿಷದಲ್ಲಿ ಗಣನೀಯವಾಗಿ
ಕಡಿಮೆಗೊಳಿಸಬಹುದಾಗಿದೆ*ಆರೋಗ್ಯವಂತನಾಗಿದ್ದ ವ್ಯಕ್ತಿಯೋರ್ವ...
ಹಿಂಬದಿ ಸವಾರರಿಗೂ ಹೆಲ್ಮೆಟ್ ; ದುಡ್ಡು ಕೀಳುವ ಯೋಜನೆ -ಜನರ ಅಭಿಮತ
ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಧರಿಸಲು ಬಾರಿ ಬಾರಿ ಎಚ್ಚರಿಕೆ ನೀಡಿ, ದಂಡ ಹಾಕಿ ಬೇಸತ್ತ ರಾಜ್ಯ ಸರ್ಕಾರದ ರಸ್ತೆ ಸುರಕ್ಷತಾ ಸಮಿತಿಯು ಈಗ ಹೆಲ್ಮೆಟ್ ಕುರಿತಂತೆ ಹೊಸ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ನಿರ್ಧರಿಸಿದೆ.
ಮೋಟಾರು ವಾಹನ ಕಾಯ್ದೆ ೧೯೮೮ ರ ಕಲಂ...
೧
ಬೆಕ್ಕಿನ ಮರಿ ಬೆಕ್ಕಿನ ಮರಿ
ಮಿಯಾವ್ ಮಿಯಾವ್ ಮಿಯಾವ್
ಕುರಿ ಹಾಲು ಕುಡ್ದು ಬಿಟ್ರೆ
ಗುರ್ರ್ ಗುರ್ರ್ ಗುರ್ರ್... !!
೨
ಮಳಿ ಬಂತು ಮಳಿ
ರಪ್ ರಪ್ ಮಳಿ
ಹೊಲ್ದಾಗೆಲ್ಲಾ ಬೆಳಿ
ತಿನ್ನೊಕಾಯ್ತು ಬ್ಯಾಳಿ..!!
೩
ಗೋಡೆ ಮೇಲೆ ಗಡಿಯಾರ
ಟಿಕ್ ಟಿಕ್ ಗಡಿಯಾರ
ರಜೆ ಇಲ್ಲ ರವಿವಾರ
ಆಗಂಗಿಲ್ಲ ಬ್ಯಾಸರ..!!
೪
ನಮ್ಮೂರ ರಸ್ತೆ
ಏನು ನಿನ್ನ ಅವಸ್ಥೆ
ಮಳೆ ಬಂದರೆ ಗಟಾರು
ಕುಣಿಯುತ್ತೆ ಮೋಟಾರು..!!
೫
ರೆಲಾ ರೆಲಾ ರೈಲು
ಚುಕುಬುಕು ರೈಲು
ಮನೆ ಬಂತು ಕೇಳು
ಸಾಕು ಇಲ್ಲೇ ನಿಲ್ಲು..!!
೬
ರಾಯರ ನೆಂಟ
ಊರಿನ...