ಅರಭಾಂವಿ ನಾಡ ಕಛೇರಿಯಲ್ಲಿ ಎಜೆಂಟರ ಹಾವಳಿ ತಡೆಗೆ ಕರವೇ ಒತ್ತಾಯ

Must Read

ಖಾಸಗಿ ಸಿಬ್ಬಂದಿಯಿಂದ ಹಣ ವಸೂಲಿ ದಂಧೆ

ಮೂಡಲಗಿ : ಮೂಡಲಗಿ ತಾಲೂಕಿನ ಅರಭಾಂವಿಯ ನಾಡ ಕಛೇರಿಗೆ ಬರುವ ಸಾರ್ವಜನಿಕರಿಗೆ ಎಜೆಂಟರಿಂದ ನಿತ್ಯ ಕಿರುಕುಳವಾಗುತ್ತಿದ್ದು ಹಣ ನೀಡಿದರೆ ಮಾತ್ರ ಶೀಘ್ರವಾಗಿ ಕೆಲಸ ಇಲ್ಲದಿದ್ದರೆ ಯಾವ ಕೆಲಸಗಳು ಆಗುವದಿಲ್ಲ ಇದನ್ನು ಆದಷ್ಟು ಬೇಗನೆ ನಿಲ್ಲಿಸಬೇಕು ಇದರಲ್ಲಿ ಶಾಮೀಲಾಗಿರುವ ಖಾಸಗಿ ಸಿಬ್ಬಂದಿ ವರ್ಗವನ್ನು ತೆಗೆದು ಹಾಕಬೇಕು ಎಂದು ಕರುನಾಡ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಸಿದ್ದು ಕಂಕನವಾಡಿ ಆಗ್ರಹಿಸಿದರು,
ಮಂಗಳವಾರ ಮೂಡಲಗಿ ತಾಲೂಕಾ ದಂಡಾಧಿಕಾರಿಗಳ ಕಛೇರಿಯಲ್ಲಿ ಕರುನಾಡ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಮರಕುಂಬಿ ನೇತೃತ್ವದಲ್ಲಿ ತಹಶೀಲ್ದಾರ ಮಹಾದೇವ ಸನಮೂರಿ ಅವರಿಗೆ  ಮನವಿ ನೀಡಿ ಅವರು ಮಾತನಾಡಿದರು,
ರಾಜ್ಯ ಕಾರ್ಯದರ್ಶಿ ಮಂಜುನಾಥ ಜಲ್ಲಿ  ಮನವಿ ಓದಿ ಈ ಕುರಿತು ತಹಶೀಲ್ದಾರ ಅವರು ಎಜೆಂಟರ ಮೇಲೆ ಹಾಗೂ ಖಾಸಗಿ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು,
ಏಜೆಂಟರು ಹಾಗೂ ಖಾಸಗಿ ಸಿಬ್ಬಂದಿಗಳು ಹಣದ ಹೊಂದಾಣಿಕೆ ಮಾಡಿಕೊಂಡು ಸಾರ್ವಜನಿಕರಲ್ಲಿ ಹೆಚ್ಚಿನ ಹಣವನ್ನು ವಸೂಲಿ ಮಾಡುತ್ತಿದ್ದು, ಖಾಸಗಿ ಸಿಬ್ಬಂದಿಗಳು ಕಛೇರಿಯ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಅಸಭ್ಯವಾಗಿ  ಮಾತನಾಡುತ್ತಾರೆ, ಏಜೆಂಟರೂ ಕಛೇರಿಯಲ್ಲಿ ಕಾಲ ಕಳೆಯುತ್ತಾರೆ ಇದಕ್ಕೆ ಕಡಿವಾಣ ಹಾಕಬೇಕು,ಇಲ್ಲದಿದ್ದರೆ ಕರುನಾಡ ರಕ್ಷಣಾ ವೇದಿಕೆಯಿಂದ ಬೃಹತ್ ಮಟ್ಟದ ಹೋರಾಟ ಮಾಡಬೇಕಾಗುತ್ತದೆ  ಎಂದು ಮನವಿಯಲ್ಲಿ ತಿಳಿಸಿದ್ದಾರೆ,
ಈ ಸಮಯದಲ್ಲಿ ಗೋಪಾಲ ಗೋಪಾಳಿ, ಲಕ್ಷ್ಮಣ ಪೂಜೇರಿ, ಬಸು ಮಲ್ಹಾರಿ, ವಿಠಲ ಪೂಜೇರಿ, ಆನಂದ ಕೋಳಿ, ಮುತ್ತಪ್ಪ ಪೂಜೇರಿ, ಹಣಮಂತ ಕಳ್ಯಾಗೋಳ, ಹಾಲಪ್ಪ ಪೂಜೇರಿ, ಲಕ್ಕಪ್ಪ ಪೂಜೇರಿ, ಬಸವರಾಜ ಪೂಜೇರಿ ಇದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group