ಬೆಳಗಾವಿ: ನಗರದ ಕೇಂದ್ರ ಗ್ರಂಥಾಲಯದಲ್ಲಿ ಭ್ರಷ್ಟಾಚಾರದ ವಿರುದ್ಧ ಜಾಗೃತಿ ಮೂಡಿಸಲು “ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ನಗರ/ಜಿಲ್ಲಾ ಕೇಂದ್ರ ಗ್ರಂಥಾಲಯದ ಎಲ್ಲ ಸಿಬ್ಬಂದಿ,ಮತ್ತು ಗ್ರಂಥಾಲಯದ ಸಾರ್ವಜನಿಕ ಓದುಗರು ಹಾಜರಿದ್ದು, ಭ್ರಷ್ಟಾಚಾರದ ವಿರುದ್ದ ಪ್ರತಿಜ್ಞೆ ಸ್ವೀಕರಿಸಿದರು.
ಉಪನಿರ್ದೇಶಕರಾದ ರಾಮಯ್ಯ ಅವರು ಭ್ರಷ್ಟಾಚಾರ ಮುಕ್ತ, ಉತ್ತಮ ಆಡಳಿತ, ಪಾರದರ್ಶಕ ಆಡಳಿತ ಬಗ್ಗೆ ಮಾತನಾಡಿದರು. ಪ್ರತಿಯೊಬ್ಬ ನಾಗರಿಕನೂ ಜಾಗರೂಕನಾಗಿದ್ದು, ಭ್ರಷ್ಟಾಚಾರ ವಿರುದ್ಧದ ಹೋರಾಟವನ್ನು ಬೇಬಲಿಸಬೇಕೆಂದು ಕರೆ ನೀಡಿದರು.
ಸಾರ್ವಜನಿಕ ಆಡಳಿತದ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರವನ್ನು ತೊಲಗಿಸಿ,ಉತ್ತಮ ಆಡಳಿತ, ಪಾರದರ್ಶಕ ನೀತಿಗಳ ಮೂಲಕ ಉತ್ತಮ ಸೇವೆ ನೀಡಲು ಸಾರ್ವಜನಿಕರಿಗೆ ತಿಳಿಯ ಬಯಸಲು ಈ “ಜಾಗೃತಿ ಅರಿವು ಸಪ್ತಾಹ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಎ ಎ ಕಾಂಬಳೆ,ಅಂಬೇಕರ್, ಸುಮಿತ್ ಕಾವಳೆ, ಪ್ರಕಾಶ ಇಚಲಕರಂಜಿ, ಆನಂದ, ಎಸ್ ಎಸ್.ಸೀಮಿಮಠ, ಸಂಗೀತಾ,ಸುನೀಲ, ಮುದರಡ್ಡಿ, ಐಹೊಳೆ,ಮತ್ತು ಓದುಗರು ಹಾಜರಿದ್ದರು.