ಬಿ. ಜೆ. ಪಿ. ಕಾರ್ಯಾಲಯದಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ

Must Read

ಮುನವಳ್ಳಿ: ಪಟ್ಟಣದ ಬಿ. ಜೆ. ಪಿ. ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ ಜಯಂತಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಜಿಲ್ಲಾ ಬಿ. ಜೆ. ಪಿ ಕಾರ್ಯ ದರ್ಶಿಗಳಾದ ಮಲ್ಲೇಶ್ವರ ಸೂಳೇಬಾವಿ “ಶಿಕ್ಷಣದ ಮಹತ್ವ ಅರಿತ ಅಂಬೇಡ್ಕರ್ ಅವರು ವಿಶ್ವದಲ್ಲಿ ಅತಿ ಹೆಚ್ಚು ಪದವಿ ಪಡೆದು ಪವಿತ್ರ ಸಂವಿಧಾನ ದೇಶಕ್ಕೆ ನೀಡಿದ್ದಾರೆ. ಸಮಾಜದ ಅಂಕುಡೊಂಕುಗಳ ತಿದ್ದುವ ಜೊತೆಗೆ ಸಮಾನ ಬದುಕು ಕಟ್ಟಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಬುನಾದಿ ಹಾಕಿದ್ದಾರೆ”ಎಂದು ತಿಳಿಸಿದರು.

ಪುರಸಭೆ ಸದಸ್ಯರಾದ ಶ್ರೀಕಾಂತ ಮಲಗೌಡರ “ಅಂಬೇಡ್ಕರ್ ಬದುಕಿನ ಆದರ್ಶಗಳನ್ನು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಶ್ರೀಕಾಂತ ಮಲಗೌಡರ್, ಸುಭಾಸ ಗಿಡಗೌಡರ ಹಾಗು ಅಶೋಕ ಗೋಮಾಡಿ, ಮಹಾಂತೇಶ್ ಗೋಕಾಕ, ಬಾಬು ಭಜಂತ್ರಿ, ಬಾಪೂಜಿ ಕದಂ, ವಿಜಯ ಅಮಟೆ, ರಮೇಶ ಗಂಗಣ್ಣವರ, ಶಿವಕುಮಾರ ಮಲಗೌಡರ, ಸಂತೋಷ ಮಲಗೌಡರ ಹಾಗೂ ಬಿಜೆಪಿ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group