ಮೂಡಲಗಿ: ಗೋವುಗಳನ್ನು ಬಲಿಕೊಡುವುದು ಹಾಗೂ ಸಾಗಣೆಯನ್ನು ತಡೆಗಟ್ಟಬೇಕೆಂದು ವಿಶ್ವ ಹಿಂದೂ ಪರಿಷತ್ತು, ಭಜರಂಗದಳ ಕಾರ್ಯಕರ್ತರು ಮೂಡಲಗಿ ತಹಶಿಲ್ದಾರ ಮೋಹನಕುಮಾರ ಭಸ್ಮೆ ಹಾಗೂ ಪಿ ಎಸ್ ಐ ಚಂದ್ರಶೇಖರ ಹೆರಕಲ್ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಆರಾಧ್ಯ ದೈವವಾದ ಶ್ರೀ ಶಿವಭೋದರಂಗ ಮಹಾಪುರುಷರ ಹೆಸರಿನಲ್ಲಿ ಜಾತಿ ಭೇದ ಮರೆತು ಎಲ್ಲ ಸಮುದಾಯದವರು ಸೋಮವಾರ ಮಾಂಸಾಹಾರ ಸೇವನೆ ಮಾಡುವುದಿಲ್ಲ. ಈ ಬಾರಿ ಬಕ್ರೀದ್ ಹಬ್ಬ ಸೋಮವಾರ ಇದೆ ಪಟ್ಟಣದ ಜನತೆಯ ಭಾವನೆಗೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತು ಹಾಗೂ ಬಜರಂಗದಳದ ಕಾರ್ಯಕರ್ತರು ಹೇಳಿದರು.
ಸಿದ್ದಪ್ಪ ತಿಗಡಿ, ರಾಮಚಂದ್ರ ಪಾಟೀಲ, ಮಹಾಂತೇಶ ಮುಗಳಖೋಡ, ದುಂಡಪ್ಪ ಹಳ್ಳೂರ,ಮಾರುತಿ ಶಿಂಧೆ,ಸಿದ್ದು ಹಳ್ಳೂರ,ಯಲ್ಲಪ್ಪ ಭಜಂತ್ರಿ, ಭೀಮಪ್ಪ ಪೂಜೇರಿ, ಅನಿಲ ಮಗದುಮ,ಅಭಿಷೇಕ ಕಳಸನ್ನವರ,ಮಲ್ಲಿಕಾರ್ಜುನ ಹಿರೇಮಠ,ಮಾಳಪ್ಪ ಮೆಳವಂಕಿ,ಪುರುಷೋತ್ತಮ ಒಡೆಯರ, ಪರಶುರಾಮ ಸಂಗನಕೇರಿ ಪಾಲ್ಗೊಂಡಿದ್ದರು.