ಬನಶಂಕರಿ ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರ

Must Read

ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ

ಬೆಂಗಳೂರು: ಬನಶಂಕರಿ 3 ನೇ ಹಂತದ ರಿಂಗ್ ರೋಡ್ – ಹೊರ ವರ್ತುಲ ಪಾದಚಾರಿ ರಸ್ತೆ ಅವ್ಯವಸ್ಥೆಯ ಅಗರವಾಗಿ ಪಾದಚಾರಿಗಳ ಮಾರ್ಗಕ್ಕೆ ಗ್ರಹಣ ಹಿಡಿದಿದೆ ಎಂದರೆ ಪ್ರಾಯಶಃ ತಪ್ಪಾಗಲಾರದು.

ನಗರದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆಗೆ ಸಾಗುವ ಪಾದಚಾರಿ ದಾರಿಯುದ್ದಕ್ಕೂ ಪಾದಚಾರಿ ರಸ್ತೆ ಮೇಲೆ ಜಲ್ಲಿ , ಮರಳು ರಾಶಿ, ಜನತಾ ಬಜಾರ್ ನ ಸಮೀಪ ಹೊಸದಾದ ಆಸ್ಪತ್ರೆ ಯೊಂದು ನಿರ್ಮಾಣ ವಾಗುತ್ತಿದ್ದು ಪಾದಾಚಾರಿ ಮಾರ್ಗದಲ್ಲಿ ಪಾದಾಚಾರಿ ಗಳು ನಡೆದು ಸಾಗಲು ಜಾಗವೇ ಇಲ್ಲವಾಗಿದೆ , ಹಾಗೆಯೇ ಮುಂದೆ ಸಾಗಿದೆರೇ ದೊಡ್ಡ ದೊಡ್ಡ ಗಾತ್ರದ ಕಬ್ಬಿಣ್ಣದ ಪೈಪು ಗಳು ಪಾದಚಾರಿ ಮಾರ್ಗದಲ್ಲಿ , ಜನತಾ ಬಜಾರ್ ಬಸ್ ಸ್ಟಾಪ್ ನಲ್ಲಿ ಕಸದ ರಾಶಿಯೋ ರಾಶಿ ! ಕತ್ರಿಗುಪ್ಪೆ ಕಡೆ ಸಾಗುವ ಮಾರ್ಗ ಕತ್ರಿಗುಪ್ಪೆ ಕಡೆ ಯಿಂದ ಜನತಾ ಬಜಾರ್ ಕಡೆ ಬರುವ ಮಾರ್ಗದಲ್ಲಿ ಇರುವ ಪುಟ್ ಪಾತ್ ತುಂಬಾ ದೊಡ್ಡ ದೊಡ್ಡ ಗಾತ್ರದ ಕಬ್ಬಿಣದ ಸ್ಟ್ಯಾಂಡ್ ಗಳು ಹೋಟೆಲ್ ಒಂದರ ಸಮೀಪ , ಹಾಗೆಯೇ ಮುಂದೆ ಬಂದರೆ ಬೆಸ್ಕಾಂನ ಕಟ್ಟಡದ ಕಾಮಗಾರಿ ನಡೆಯುತ್ತಿದ್ದು ಪಾದಚಾರಿ ಮಾರ್ಗದ ತುಂಬಾ ಜಲ್ಲಿ ಕಲ್ಲು , ಮರಳಿನ ರಾಶಿ , ಕಬ್ಬಿಣದ ತುಂಡುಗಳು ಒಂದೆಡೆ ಆದರೆ ಬೆಸ್ಕಾಂ ಕಚೇರಿಯ ಮುಂಭಾಗದಲ್ಲಿ ಬೆಸ್ಕಾಂ ಮ್ಯಾನ್ ಹೋಲ್ ಇದ್ದು ಅದರ ಮುಂಭಾಗದಲ್ಲಿ ದೊಡ್ಡ ಪ್ರಮಾಣದ ಹೊಂಡ ಪಕ್ಕ ದಲ್ಲಿ ಇರುವ ಪುಟ್ ಪಾತ್ ಮೇಲೆ ಮೆಡಿಕಲ್ ಶಾಪ್ ಒಂದರ ಗುಜರಿ ಬೋರ್ಡ್!

ಪಾದಚಾರಿ ಮಾರ್ಗದ ಮೇಲೆ ದ್ವಿ ಚಕ್ರ ವಾಹನಗಳ ಸವಾರಿ, ಪಾದಚಾರಿ ಮಾರ್ಗದ ತುಂಬಾ ಹೊಂಡ, ಗುಂಡಿ, ಬನಶಂಕರಿ 3ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ನುಗ್ಗುವ ದ್ವಿಚಕ್ರ ವಾಹನ ಚಾಲಕರು ಹಾಗು ನಾಲ್ಕು ಚಕ್ರ ಗಳ ವಾಹನಗಳ ಚಾಲಕರು ಪುಟ್ ಪಾತ್ ಮೇಲೆ ಪಾರ್ಕಿಂಗ್ ಮಾಡುತ್ತಾರೆ ಹಾಗು ಅವರು ತಂದ ವಸ್ತುಗಳನ್ನು ಸಂಬಂಧ ಪಟ್ಟ ಅಂಗಡಿಗಳಿಗೆ ರವಾನೆ !!

ಪಾದಚಾರಿ ಮಾರ್ಗ ಅವ್ಯವಸ್ಥೆಯ ಆಗರ

ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಿಂದ ಹಿಡಿದು ಕತ್ರಿಗುಪ್ಪೆ ಹೋಗುವ ದಾರಿಯಲ್ಲಿ ಇರುವ ಫುಟ್‌ಪಾತ್‌ ಅವ್ಯವಸ್ಥೆಯ ಆಗರವಾಗಿದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಮಹಾನಗರ ಪಾಲಿಕೆಯವರು ನಿರ್ಮಿಸುವ ಪುಟ್ ಪಾತ್ ಇಂದು ಅಕ್ಷರಶಃ ಕಸದ ರಾಶಿ ರಾಶಿ ಹಾಕುವ ತಾಣ. ದ್ವಿಚಕ್ರ ವಾಹನ ಹಾಗು ನಾಲ್ಕು ಚಕ್ರದ ವಾಹನ ನಿಲ್ಲಿಸುವ ತಾಣ !! ಮರಳು – ಜಲ್ಲಿ ಪುಡಿ ಹಾಕುವ ತಾಣ !! ಲಾರಿ ನಿಲ್ಲಿಸಿ ಸಾಮಾನುಗಳನ್ನು ಇಳಿಸುವ ತಾಣ !!

ಆದರೆ ಇವೆಲ್ಲವೂ ಕಣ್ಣಿಗೆ ಕಟ್ಟುವಂತೆ ಇದ್ದರೂ ಮಹಾನಗರ ಪಾಲಿಕೆ ಅಧಿಕಾರಿಗಳು ಕಣ್ಣಿಗೆ ಬೀಳದಂತೆ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

ಸಂಬಂಧ ಪಟ್ಟವರು ಪುಟ್ ಪಾತ್ ಮೇಲೆ ನಿಲ್ಲಿಸುವ ವಾಹನಗಳನ್ನು ತೆರವುಗೊಳಿಸಲಿ ಪುಟ್ ಪಾತ್ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಾಲಿ.ಸಾವಿರ ಸಾವಿರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಪಾದಚಾರಿ ಮಾರ್ಗಗಳು ಪಾದಚಾರಿ ಗಳು ಓಡಾಡಲು ಅನುವು ಮಾಡಿ ಕೊಡಲಿ.ಒಟ್ಟಿನಲ್ಲಿ ನಗರದ ಬನಶಂಕರಿ 3 ನೇ ಹಂತದ ಜನತಾ ಬಜಾರ್‌ನಲ್ಲಿ ಪಾದಚಾರಿಗಳ ಮಾರ್ಗಕ್ಕೆ ಹಿಡಿದಿರುವ ಗ್ರಹಣ ವನ್ನು ಬಿಡಿಸುವ ಮನಸ್ಸು ಮಹಾನಗರ ಪಾಲಿಕೆ ಮಾಡಲಿ ಎಂದು ಆಶಿಸುತ್ತೇನೆ!!


ಚಿತ್ರ: ಬರಹ: ತೀರ್ಥಹಳ್ಳಿ ಅನಂತ ಕಲ್ಲಾಪುರ

Latest News

ಜನಪದ ಗಾಯಕಿ ಶ್ಯಾಮಲಾ ಲಕ್ಷ್ಮೇಶ್ವರಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಗರಿ

ಬಾಲ್ಯದಿಂದಲೆ ಜನಪದವನ್ನು ತಮ್ಮ ಉಸಿರಾಗಿಸಿಕೊಂಡು ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿ ಪರಂಪರೆಯ ಉಳಿವಿಗೆ ಸುಮಾರು 40 ವಷ೯ಕ್ಕೂ ಹೆಚ್ಚು ಕಾಲ ಜನಪದ ಸಂಗೀತ ಸೇವೆ ಮಾಡಿದ...

More Articles Like This

error: Content is protected !!
Join WhatsApp Group