ಏ.24 ರಂದು ಮೂಡಲಗಿಯಲ್ಲಿ ಬಸವ ಉತ್ಸವ ಕಾರ್ಯಕ್ರಮ

Must Read

ಮೂಡಲಗಿ: ಪಟ್ಟಣದ ಶ್ರೀ ಬಸವ ಸೇವಾ ಯುವಕ ಸಂಘದ ಆಶ್ರಯದಲ್ಲಿ ಬಸವ ಜಯಂತಿ ನಿಮಿತ್ತವಾಗಿ ಮೂಡಲಗಿ ತಾಲೂಕಾ ಮಟ್ಟದ ಬಸವ ಉತ್ಸವ ಕಾರ್ಯಕ್ರಮವನ್ನು ಸೋಮವಾರ ಏ.24 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಕಲ್ಮೇಶ ಗೋಕಾಕ ತಿಳಿಸಿದರು.

ಶನಿವಾರದಂದು ಪಟ್ಟಣದ ಪತ್ರಿಕಾ ಕಛೇರಿಯಲ್ಲಿ ಕರೆದ ಪ್ರತಿಕಾಗೋಷ್ಠಿಯಲ್ಲಿ ಬಸವ ಉತ್ಸವ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮದ ಮಾಹಿತಿ ನೀಡಿದ ಅವರು, ಸೋಮವಾರ ಏ.24 ರಂದು  ಮುಂಜಾನೆ 8 ಗಂಟೆಗೆ ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದ ಹತ್ತಿರ 301  ಸುಮಂಗಲೆಯರಿಂದ ಕುಂಭ ಮೇಳ ಹಾಗೂ ಸಕಲ ವಾದ್ಯಮೇಳ ಮತ್ತು ಆನೆಯ ಮೆರವಣಿಗೆ ಮೂಲಕ ಬಸವೇಶ್ವರ ಭಾವಚಿತ್ರದ ಮೆರವಣಿಗೆಗೆ ಕೂಡಲಸಂಗಮದ ಶ್ರೀ ಬಸವಜಯ ಮೃತ್ಯುಂಜಯ ಮಹಾಸ್ವಾಮೀಜಿ ಮತ್ತು ಪಟ್ಟಣದ ಶ್ರೀ ದತ್ತಾತ್ರೇಯಬೋಧ ಸ್ವಾಮಿಜೀಗಳು ಚಾಲನೆ ನೀಡುವರು.  ಈ ಬಸವ ಉತ್ಸವ ಕಾರ್ಯಕ್ರಮದಲ್ಲಿ ತಾಲೂಕಿನ ಎಲ್ಲ ಸಮಾಜ ಭಾಂದವರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದರು. 

ಈ ಸಮಯದಲ್ಲಿ ಬಸವ ಸೇವಾ ಸಂಘದ ಉಪಾಧ್ಯಕ್ಷ ಪ್ರವೀಣ ಕುರಬಗಟ್ಟಿ, ಕಾರ್ಯದರ್ಶಿ ಉಮೇಶ ಶೆಕ್ಕಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

Latest News

ಕುಲಗೋಡ ಪಂಚಾಯತ ಪಿಡಿಓ ಕರ್ಮಕಾಂಡ

ದಾಖಲಾತಿ ತಿದ್ದುವಲ್ಲಿ ಈ ಪಿಡಿಓ ಪಾತ್ರ ಎಷ್ಟು ?ಮೂಡಲಗಿ : ನಕಲಿ ದಾಖಲೆಗಳನ್ನು ಸೃಷ್ಟಿಸಿ ಮನೆಯ ಜಾಗವನ್ನು ಪರಭಾರೆ ಮಾಡಿದ ಪ್ರಕರಣವೊಂದರ ತನಿಖೆಗೆ ಬಂದ ಅಧಿಕಾರಿಗಳ...

More Articles Like This

error: Content is protected !!
Join WhatsApp Group