- Advertisement -
ಮೂಡಲಗಿ – ಮೂಡಲಗಿಯ ಶ್ರೀ ಬಸವ ಸೇವಾ ಯುವಕ ಸಂಘದ ಆಶ್ರಯದಲ್ಲಿ ಬಸವಣ್ಣನವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸುಮಾರು ೫೦೦ ಮುತೈದೆಯರಿಂದ ಕುಂಭಮೇಳ, ಗಜರಾಜನ ಮೇಲೆ ಬಸವಣ್ಣನವರ ಭಾವಚಿತ್ರ ಮೆರವಣಿಗೆ ಮಾಡಿ ನಗರದಲ್ಲಿ ಸಕಲ ವಾದ್ಯಮೇಳಗಳೊಡನೆ ಪ್ರದಕ್ಷಿಣೆ ಹಾಕಿ ಸಂಭ್ರಮದಿಂದ ಬಸವ ಜಯಂತಿ ಆಚರಿಸಲಾಯಿತು.
ಮೂಡಲಗಿ ಸಂಸ್ಥಾನ ಮಠದ ಪೀಠಾಧಿಪತಿ ದತ್ತಾತ್ರಯ ಬೋಧ ಸ್ವಾಮೀಜಿ ಹಾಗೂ ಶ್ರೀಧರ ಬೋಧ ಸ್ವಾಮೀಜಿ ಬಸವ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿದರು.
- Advertisement -
ಕರಡಿ ಮಜಲು, ಜಾಂಝ್ ಪಥ ಹಾಗೂ ಇತರೆ ವಾದ್ಯಗಳ ಸಮ್ಮಿಳಿತ ಮೆರವಣಿಗೆಯಲ್ಲಿ ಸಾವಿರಾರು ಯುವಕರು, ಬಸವ ಭಕ್ತರು, ನಾಗರಿಕರು ಸಂಭ್ರಮದಿಂದ ಭಾಗವಹಿಸಿದ್ದರು. ಬಸವ ಉತ್ಸವಕ್ಕೆ ನಗರದ ಅನೇಕ ಗಣ್ಯಮಾನ್ಯರು ಅನೇಕ ರೀತಿಯ ಸೇವಾದಾನ ನೀಡಿ ಮೆರುಗು ತಂದರು.