ಇಂಡೋ ಪಾಕ್ ಗಡಿಯಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕದ ಬಸವರಾಜ್ ವೈಯಕ್ತಿಕ ಕಾರಣಗಳಿಂದಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ತಿಳಿದುಬಂದಿದೆ.ಪಂಜಾಬ್ ನ ಫೈಜಲಿಕದಲ್ಲಿ ಈ ಘಟನೆ ನಡೆದಿದೆ.
ನಿನ್ನೆ ಅವರು ಉಗ್ರರೊಂದಿಗೆ ಸೆಣಸಾಟದಲ್ಲಿ ಹುತಾತ್ಮರಾಗಿದ್ದಾರೆಂಬುದಾಗಿ ವರದಿಯಾಗಿತ್ತು. ಆದರೆ ಘಟನೆಯನ್ನು ಅಲ್ಲಗಳೆದಿರುವ ಸೈನ್ಯದ ಅಧಿಕಾರಿಗಳು, ಬಸವರಾಜ್ ಅವರು ಕೌಟುಂಬಿಕ ಕಾರಣಗಳಿಂದಾಗಿ ತಮಗೆ ಪೂರೈಸಲಾಗಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಅಧಿಕೃತ ಮಾಹಿತಿಯನ್ನು ಡೆಪ್ಯೂಟಿ ಕಮಾಂಡೆಂಟ್ ಬಹಿರಂಗ ಪಡಿಸಿದ್ದಾರೆ.
ಇಂದು ಹೈದ್ರಾಬಾದ್ ಮೂಲಕ ಔರಾದ್ ತಾಲೂಕಿನ ಆಲೂರು ಗ್ರಾಮಕ್ಕೆ ಆಗಮಿಸಲಿರುವ ಪಾರ್ಥಿವ ಶರೀರ. ಇಂದು ಸಂಜೆ ಸ್ವ ಗ್ರಾಮ ಆಲೂರಿನ ಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಬಸವರಾಜ್ ಅವರ ಅಂತ್ಯಕ್ರಿಯೆ ನೆರವೇರಲಿದೆ.