- Advertisement -
ಕನ್ನಡದ ಕ್ರಾಂತಿಕಾರ ಕಾದಂಬರಿಕಾರರೆಂದೇ ಪ್ರಖ್ಯಾತರಾಗಿರುವ ಬಸವರಾಜ ಕಟ್ಟೀಮನಿ ಅವರ ಮಹಾ ನಿರ್ಗಮನದ ದಿನವಿಂದು. ಕಟ್ಟೀಮನಿಯವರು ಅಕ್ಟೋಬರ್ ೨೩, ೧೯೮೯ ರಂದು ಈ ಜಗತ್ತಿಗೆ ಅಂತಿಮ ವಿದಾಯ ಹೇಳಿದ್ದರು.
ಅವರ ಹುಟ್ಟೂರಾದ ಮಲಾಮರಡಿಗೆ ನಾನು, ಡಾ ರಾಮಕೃಷ್ಣ ಮರಾಠೆ, ಶಿರೀಷ ಜೋಷಿ, ಡಾ ಎ.ಬಿ. ಘಾಟಗೆ, ಪ್ರೊ ಚಂದ್ರಶೇಖರ ಅಕ್ಕಿ, ಶಿವಕುಮಾರ ಕಟ್ಟೀಮನಿ ಹಾಗೂ ರಾಯನಗೌಡರ್ ಇಂದು ಭೇಟಿ ನೀಡಿ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದೆವು. ಇತ್ತೀಚಿಗೆ ಪ್ರಕಟವಾದ ನನ್ನ ನಾಲ್ಕು ಪುಸ್ತಕಗಳನ್ನು ಅವರ ಪುತ್ಥಳಿ ಎದುರು ಇಟ್ಟು ನಮಸ್ಕರಿಸಿದೆ.
ನಾನು ವಿದ್ಯಾರ್ಥಿಯಾಗಿದ್ದಾಗ ಕಟ್ಟೀಮನಿ ಮತ್ತು ನಿರಂಜನ ಅವರ ಸಾಹಿತ್ಯದಿಂದ ಪ್ರಭಾವಿತನಾದವನು. ನನ್ನ ಬರವಣಿಗೆಯಲ್ಲಿ ಇವರಿಬ್ಬರ ಪ್ರಭಾವವು ಸಾಕಷ್ಟಿದೆ.
- Advertisement -
ಅವರು ಹುಟ್ಟಿದ ಮನೆಯಲ್ಲಿ ಈಗ ಅವರ ಮಗಳು ನೀಲವ್ವ ವಾಸಿಸುತ್ತಿದ್ದಾಳೆ. ಅವಳ ಮೊಮ್ಮಗ ವಿಠ್ಠಲ ಮಾಳಿಗಿಯೂ ಫೋಟೋ ದಲ್ಲಿದ್ದಾನೆ.
ಸರಜೂ ಕಾಟ್ಕರ್
ಬೆಳಗಾವಿ
೨೩/ ೧೦/ ೨೦೨೧