ಸಿಂದಗಿ; ತಾಲೂಕಿನ ಮೋರಟಗಿ ಗ್ರಾಮದ ಆರಾಧ್ಯ ದೇವ ಶ್ರೀ ವೀರಭದ್ರೇಶ್ವರ ಜಾತ್ರೆ ಪ್ರಯುಕ್ತ ನ.26 ದಿಂದ 6ರ ವರೆಗೆ 11 ದಿನಗಳ ಕಾಲ ಮಹಾನ್ ಮಾನವತಾವಾದಿ ಶ್ರೀ ಮೌನೇಶ್ವರ ಪುರಾಣ ಪ್ರವಚನ ನಡೆಯಲಿದೆ ಪ್ರತಿ ದಿನ ಸಾಯಂಕಾಲ 8 ಗಂಟೆಗೆ ಪುರಾಣ ಪ್ರಾರಂಭವಾಗುತ್ತದೆ.
ಪುರಾಣಿಕರಾಗಿ ಶ್ರೀ ಕಾಳಹಸ್ತೇಂದ್ರ ಏಕದಂಡಗಿ ಮಠ ಶಹಾಪೂರ, ಆಕಾಶವಾಣಿ ಮತ್ತು ದೂರದರ್ಶನ ಕಲಾವಿದ ಕಂಚಿನ ಕಂಠದ ಗಾಯಕ ಶ್ರೀ ಶಿವರುದ್ರಯ್ಯ ಗೌಡಗಾವ್, ಖ್ಯಾತ ತಬಲಾ ವಾದಕರಾಗಿ ವೀರೇಶ ಹಿರೇಜೇವರ್ಗಿ ಆಗಮಿಸಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಶ್ರೀ ವೀರಭದ್ರೇಶ್ವರ ಮತ್ತು ಶ್ರೀ ಮೌನೇಶ್ವರರ ಸಕಲ ಸದ್ಭಕ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶೋಭೆ ತರಬೇಕೆಂದು ಶ್ರೀ ವೀರಭದ್ರೇಶ್ವರ ಸಮಿತಿಯ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.