Belagavi: ಪ್ರತಿ ತಾಲೂಕಿನಲ್ಲಿ ಕುಡಿಯುವ ನೀರಿನ ನಿರ್ವಹಣೆಗೆ ತರಬೇತಿ ಕಾರ್ಯಾಗಾರ

Must Read

ಬೆಳಗಾವಿ – ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಜಿಲ್ಲಾ ಪಂಚಾಯತ್ ಬೆಳಗಾವಿ, ಹರ್ಷಲ್ ಭೋಯರ್ ಅವರ ಆದ್ಯತೆಯ ಮೇರೆಗೆ ಪ್ರತಿ ತಾಲೂಕಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕದ ಬಗ್ಗೆ ಕಾರ್ಯಾಚರಣೆ ಮತ್ತು ನಿರ್ವಹಣೆ ತರಬೇತಿಯನ್ನು ಏರ್ಪಡಿಸಲಾಯಿತು.

ದಿನಾಂಕ 01-07-2023 ರಂದು ಜಿಲ್ಲಾ ಪಂಚಾಯತ್ ಬೆಳಗಾವಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗ ಚಿಕ್ಕೋಡಿ ಅನುದಾನಿತ ಬೆಂಬಲ ಸಂಸ್ಥೆಯಾದ ರೊರಲ್ ಡೆವೆಲಪಮೆಂಟ ಸೊಸೖೆಟಿ ಮುರಗೋಡ ಇವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಕುರಿತು ಮತ್ತು ಜಲ ಜೀವನ್ ಮಿಷನ್ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಯಿತು.

ಕಾರ್ಯಾಗಾರದ ಅಧ್ಯಕ್ಷ ಸ್ಥಾನವನ್ನುವಿಠ್ಠಲ ಚಂದರಗಿ ಮುಖ್ಯ ಕಾಯ೯ ನಿವಾ೯ಹಕ ಅಧಿಕಾರಿಗಳು ತಾಲೂಕ ಪಂಚಾಯತಿ ರಾಯಬಾಗ ವಹಿಸಿಕೊಂಡರು ಮತ್ತು ಮುಖ್ಯ ಅತಿಥಿಗಳಾಗಿ ಆರ್ ಬಿ ಮನವಡ್ಡರ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ರಾಯಬಾಗ ಇವರು ವಹಿಸಿಕೊಂಡರು ಮತ್ತು ದೀಪಕ್ ಕಾಂಬಳೆ ಜಿಲ್ಲಾ ಯೋಜನಾ ವ್ಯವಸ್ಥಾಪಕರು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ರಾಯಬಾಗ ತಾಲೂಕಿನ ಎಲ್ಲಾ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಕಾರ್ಯಾಚರಣೆ ಮತ್ತು ನಿರ್ವಹಣೆ ಬಗ್ಗೆ ತಿಳಿದುಕೊಂಡು ಅದನ್ನು ತಮ್ಮ ಗ್ರಾಮ ಪಂಚಾಯತಿಯಲ್ಲಿ ಒಳ್ಳೆಯ ರೀತಿ ಕಾರ್ಯಾಚರಣೆ ಮಾಡಿಕೊಂಡು ಹೋಗುವಲ್ಲಿ ನಿಮ್ಮ ಪಾತ್ರ ತುಂಬಾ ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.

ಮತ್ತು ಜಲ್ ಜೀವನ ಮಿಷನ್ ಯೋಜನೆಯ ಅಡಿಯಲ್ಲಿ ಆಗಿರುವ ಕಾಮಗಾರಿಗಳ ಕುರಿತು ಅರಿವು ಮೂಡಿಸಲಾಯಿತು ಮತ್ತು ಪಿ ಡಿ ಓ ಮತ್ತು ವಾಟರ್ ಮ್ಯಾನ್ ಗಳೊಂದಿಗೆ ಚಚಿ೯ಸಿ ಅವರ ಸಮಸ್ಯೆಗಳನ್ನು ಪರಿಹರಿಸಲು ಸಹಕಾರ ನೀಡಲಾಯಿತು. 

ಈ ಒಂದು ಕಾರ್ಯಗಾರದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿಗಳು, ತಾಲೂಕ ಪಂಚಾಯತಿಯ ಸಿಬ್ಬಂದಿಗಳು, ISA/ISRA ತಂಡದ ನಾಯಕರು ಮತ್ತು ಸಿಬ್ಬಂದಿ ವರ್ಗದವರು ಮತ್ತು ರಾಯಬಾಗ ತಾಲೂಕಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮ ಪಂಚಾಯಿತಿಯ ಪಂಚಾಯಿತಿ ಅಭಿವೃದ್ಧಿ  ಅಧಿಕಾರಿಗಳು ಹಾಗೂ ನೀರು ಘಂಟಿ ಗಳು ಭಾಗವಹಿಸಿ ಕಾಯ೯ಗಾರವನ್ನು ಯಶಸ್ವಿಗೋಳಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group