ಬೆಳಗಾವಿ ಕೇಬಲ್ ಕಾರ್ ಯೋಜನೆ ; ಗಡಕರಿ ಭೇಟಿಯಾದ ಕಡಾಡಿ

Must Read

ಮೂಡಲಗಿ: ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕರಾದ ಅಭಯ ಪಾಟೀಲ ಅವರ ಕನಸಿನ ಯೋಜನೆಯಾದ ಬೆಳಗಾವಿಯ ಯಳ್ಳೂರು ಗ್ರಾಮದಿಂದ  ರಾಜಹಂಸಗಡವರೆಗೆ – ಅಟಲ್ ಬಿಹಾರಿ ವಾಜಪೇಯಿ ಕೇಬಲ್ ಕಾರ್ ಯೋಜನೆಯ ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಬೇಕೆಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿಯಾಗಿ  ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರ ನೇತ್ರತ್ವದ ನಿಯೋಗವು ಭೇಟಿಯಾಗಿ ಮನವಿ ಮಾಡಿತು.

ಈ ಕೇಬಲ್ ಕಾರ್ ಯೋಜನೆಯ ಅನುಷ್ಠಾನವು ಬೆಳಗಾವಿಯ ಪ್ರವಾಸೋದ್ಯಮದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ನಿರೀಕ್ಷೆಯಿದೆ. ಯೋಜನೆಯು ಪೂರ್ಣಗೊಂಡ ನಂತರ ಈ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ಕ್ರಮೇಣ ಹೆಚ್ಚಾಗುವ ನಿರೀಕ್ಷೆಯಿದೆ, ಇದು ವ್ಯಾಪಾರ ಮತ್ತು ವ್ಯವಹಾರದ ಉತ್ತೇಜನಕ್ಕೆ ಕಾರಣವಾಗುತ್ತದೆ ಎಂದು ಸಚಿವರಿಗೆ ವಿವರಿಸಲಾಯಿತು.

ಕೇಂದ್ರ ಸಚಿವರು ಸಕಾರಾತ್ಮವಾಗಿ ಸ್ಪಂದಿಸಿದ್ದು, ಆದಷ್ಟು ಶೀಘ್ರ ಅನುಮತಿ ನೀಡುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ  ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಮಾಜಿ ಶಾಸಕ ಅನಿಲ ಬೆನಕೆ ಉಪಸ್ಥಿತರಿದ್ದರು.

Latest News

ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು

ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ...

More Articles Like This

error: Content is protected !!
Join WhatsApp Group