spot_img
spot_img

ಬೆಳಗಾವಿ ತಾಲೂಕ ಕ.ಸಾ.ಪ. ದಿಂದ ಕರ್ನಾಟಕ ಸಂಭ್ರಮ-50 ಕಾರ್ಯಕ್ರಮ

Must Read

spot_img
- Advertisement -

ಕನ್ನಡ ನಾಡು ನುಡಿ ನೆಲ ಜಲದ ಬೆಳವಣಿಗೆ-ರಕ್ಷಣೆಗೆ ಯುವಜನಾಂಗ ಜಾಗೃತವಾಗಬೇಕಿದೆ : ಪ್ರಾ. ಬಿ. ಬಿ. ಮಠಪತಿ

ಬೆಳಗಾವಿ: ಮಾತೃಭಾಷೆ ತಾಯಿ ಭಾಷೆ. ಅದನ್ನು ಗೌರವಿಸಿ, ಕನ್ನಡದ ಜಾಗೃತಿಯನ್ನು ಹಬ್ಬ ಹರಿದಿನಗಳಲ್ಲಿ ಮೂಡಿಸಿ, ಚರಿತ್ರೆಯನ್ನು ಅರಿತು, ಕಾವ್ಯವನ್ನು ಸವಿದು ಕನ್ನಡವನ್ನು ಬೆಳೆಸುವ ಕಾಯಕವನ್ನು ವಿಶೇಷವಾಗಿ ಯುವಕರು ಮಾಡಬೇಕಿದೆ ಮತ್ತು ಆ ನಿಟ್ಟಿನಲ್ಲಿ ಯುವ ಜನಾಂಗ ಜಾಗೃತವಾದಾಗ ಮಾತ್ರ  ಕನ್ನಡ ಉಳಿದೀತು ಬೆಳೆದೀತು ಎಂದು ಆಧಾರ ಪಿ. ಯು ಕಾಲೇಜಿನ ಪ್ರಾಚಾರ್ಯ,ಕನ್ನಡ ಉಪನ್ಯಾಸಕ ಬಿ.ಬಿ ಮಠಪತಿ ಹೇಳಿದರು.

ತಾಲೂಕಿನ ಹೊನಗಾ ಗ್ರಾಮದ ಜಂಬಗಿ ಪಿಯು ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬೆಳಗಾವಿ ವತಿಯಿಂದ ಹಮ್ಮಿಕೊಳ್ಳಲಾದ “ಕರ್ನಾಟಕ ಸಂಭ್ರಮ-50” ರ ಕಾರ್ಯಕ್ರಮದಲ್ಲಿ “ಕನ್ನಡ ಕಟ್ಟುವಲ್ಲಿ ಯುವಕರ ಪಾತ್ರ”  ಕುರಿತು ಉಪನ್ಯಾಸ ನೀಡುತ್ತಾ ಅಭಿಪ್ರಾಯ ವ್ಯಕ್ತಪಡಿಸಿದರು. 

- Advertisement -

ಶತಮಾನಗಳಿಂದ ಕದಂಬರು, ಗಂಗರು ರಾಷ್ಟ್ರಕೂಟರು ಆದಿಯಾಗಿ ಪಂಪ, ರನ್ನ ಜನ್ನ ಮತ್ತು ಕುವೆಂಪು ಆದಿಯಾಗಿ ಕನ್ನಡದ ನುಡಿ ಸೇವೆ ಸ್ವಾಭಿಮಾನದಿಂದ ಮಾಡಿದ ಇತಿಹಾಸವಿದೆ. ಉದಯವಾಗಲಿ ಚೆಲುವ ಕನ್ನಡ ನಾಡು, ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ, ಹಚ್ಚೇವು ಕನ್ನಡದ ದೀಪ ಎಂದು ಹಾಡಿ ಕಟ್ಟಿರುವ ಈ ನಾಡಲ್ಲಿ ಈಗಿನ ಯುವಕರು ಕನ್ನಡವನ್ನು ಎತ್ತಿ ಹಿಡಿಯಬೇಕಿದೆ. ಆಂಗ್ಲ ಭಾಷೆಯಲ್ಲಿ ಮಾತ್ರ ಅಂತಾರಾಷ್ಟ್ರೀಯ ಮಾನ್ಯತೆ ಸಿಗಲ್ಲ ಹೊರದೇಶದ ಕಿಟೆಲ್ ಆದಿಯಾಗಿ ಅನೇಕರು ಕನ್ನಡವನ್ನು  ಪ್ರೀತಿಸಿದ್ದಾರೆ. ಅನ್ಯ ಭಾಷೆಗಳು ಉಪಜೀವನವಾದರೆ ಕನ್ನಡ ಜೀವನವಾಗಲಿ. ಕನ್ನಡ ಅಭಿಮಾನ ಕೇವಲ ರಾಜ್ಯೋತ್ಸವ ದಿನಕ್ಕೆ ಸೀಮಿತವಾಗದೆ ಯುವ ಜನಾಂಗ ಅಭಿಮಾನದಿಂದ ನಿಯಮಿತವಾಗಿ ಕನ್ನಡವನ್ನು-ಕರ್ನಾಟಕವನ್ನು ಕಟ್ಟಬೇಕಿದೆ ಎಂದರು.

ಕ. ಸಾ. ಪ.ಬೆಳಗಾವಿ ತಾಲೂಕ ಅಧ್ಯಕ್ಷ ಸುರೇಶ ಹಂಜಿ ಮಾತನಾಡಿ, ನುಡಿ ಸೇವೆಯ ಜೊತೆಗೆ ಇಂದಿನ ಯುವಕರು ವಿದ್ಯಾರ್ಥಿ ದೆಸೆಯಿಂದಲೇ ಸಂಸ್ಕಾರ, ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕಿದೆ ಎಂದರು.

ಇದೇ ಸಂದರ್ಭದಲ್ಲಿ ಕನ್ನಡ ಕವನ ರಚನೆಯ ಜೊತೆಗೆ ರಾಜ್ಯಮಟ್ಟದ ಕ್ರೀಡಾಕೂಟಗಳಲ್ಲಿ ಸಾಧನೆ ಮಾಡಿದ ಪಾಶ್ಚಾಪುರ ಗ್ರಾಮದ ಬಡ ವಿದ್ಯಾರ್ಥಿ ಸತ್ಯಪ್ಪ ಅಡಕಿ ಪೂಜಾರಿ ಈತನನ್ನು ಸನ್ಮಾನಿಸಲಾಯಿತು.

- Advertisement -

ಕಾರ್ಯಕ್ರಮದಲ್ಲಿ ಜಂಬಗಿ ಕಾಲೇಜಿನ ವಿದ್ಯಾರ್ಥಿನಿಯರಿಂದ ಭರತನಾಟ್ಯ ಸೇರಿದಂತೆ ಕನ್ನಡ ನುಡಿ ಗೀತೆಗಳಿಗೆ ನೃತ್ಯ ಪ್ರದರ್ಶನ ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಆನಂದ ಖೋತ ವಹಿಸಿದ್ದರು. 

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಕಾರ್ಯದರ್ಶಿ ಎಮ್ ವೈ ಮೆಣಸಿನಕಾಯಿ, ಸಿ ಎಸ್ ಕಟಾಪುರಿಮಠ, ಮಹೇಶ  ಕಲ್ಲೋಳಿ, ಪ್ರವೀಣ ಸಂಗೂಡಿ , ಸತೀಶ ಭಟ್, ಬಿ ಶಿವರಾಜ, ಎಸ್.ಮಹೇಶ, ಲಕ್ಷ್ಮಿ ಪೂಜಾರ, ವಿನೋದ ಜಗಜಂಪಿ ಬಾಳಗೌಡ ದೊಡಬಂಗಿ ಸೇರಿದಂತೆ ಕನ್ನಡ ಅಭಿಮಾನಿಗಳು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆರಂಭದಲ್ಲಿ ಬೆಳಗಾವಿ ತಾಲೂಕಾ ಕಸಾಪ ಕಾರ್ಯದರ್ಶಿ ಎನ್ ಬಿ ಕರವಿನ ಕೊಪ್ಪ ಸ್ವಾಗತಿಸಿದರು. ಮಂಜುನಾಥ ಕಾದ್ರೊಳ್ಳಿ ನಿರೂಪಿಸಿದರು. ಕೊನೆಗೆ ಶಿವಾನಂದ ತಲ್ಲೂರ ವಂದಿಸಿದರು.

ಮಾಹಿತಿ ವರದಿ: ಆಕಾಶ್ ಅರವಿಂದ ಥಬಾಜ, ಜಿಲ್ಲಾ ಸಹ ಮಾಧ್ಯಮ ಪ್ರತಿನಿಧಿ, ಕನ್ನಡ ಸಾಹಿತ್ಯ ಪರಿಷತ್, ಬೆಳಗಾವಿ ಜಿಲ್ಲೆ*

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಶರಣರ ಚರಿತ್ರೆ ಆಲಿಸುವದರಿಂದ ಜೀವನ ಪಾವನ; ಹಂಗರಗಿ

ಸಿಂದಗಿ: ಪುರಾಣ ಎಂಬುದು ಪುಂಡರಗೋಷ್ಠಿಯಲ್ಲ ಪುರಾಣ ಎಂದರೆ ಅಧ್ಯಾತ್ಮ ಶರಣರ ಬದುಕಿನ ಅರ್ಥ ತಿಳಿದುಕೊಂಡು ಅವರ ಹಾದಿಯಲ್ಲಿ ಸಾಗುವ ನಡೆ ಕಲಿಸುವ ಧರ್ಮದ ಪಾಠಶಾಲೆ ಇದ್ದಂತೆ...
- Advertisement -

More Articles Like This

- Advertisement -
close
error: Content is protected !!
Join WhatsApp Group