ಹೊಸ ಕ್ಯಾಲೆಂಡರ್ ವರ್ಷದ ನೂತನ ಕಾಣಿಕೆಯಾಗಿ ಕಣಚೂರು ಆಯುರ್ವೇದ ಆಸ್ಪತ್ರೆಯಲ್ಲಿ ಜನವರಿ ದಿನಾಂಕ 1- 25 ರಂದು ಅಂತರ್ಜಾಲ ಸಮಾಲೋಚನಾ ವೇದಿಕೆಯನ್ನು ವಿದ್ಯುಕ್ತವಾಗಿ ಉದ್ಘಾಟಿಸಲಾಯಿತು.
ದೂರದ ಮೈಸೂರಿನ ರೋಗಿಯೊಬ್ಬರನ್ನು ಈ ವೇದಿಕೆಯ ಮೂಲಕ ಸಂಪರ್ಕಿಸಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ. ಕಾರ್ತಿಕೇಯ ಪ್ರಸಾದರೊಂದಿಗೆ ಸಮಾಲೋಚನೆ ಮಾಡುವುದರ ಮೂಲಕ ಸಂಸ್ಥೆಯ ಚೇರ್ಮನ್ ಡಾ ಹಾಜಿ ಯು ಕೆ ಮೋನು ಅವರ ಹಸ್ತದಿಂದ ಉದ್ಘಾಟನೆ ಮಾಡಲಾಯಿತು.
ರಾಹಿಲಾ ಮತ್ತು ಇರ್ಫಾನರಿಂದ ಪ್ರಾರ್ಥನೆಯಾದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಾ, ತಜ್ಞ ವೈದ್ಯರನ್ನೊಳಗೊಂಡ ನಮ್ಮೀ ಆಸ್ಪತ್ರೆಯ ಈ ಹೊಸ ವೇದಿಕೆಯು ಭೌತಿಕ ಭೇಟಿ ಅಸಾಧ್ಯವಾದಾಗ ಅಗತ್ಯ ಸಮಾಲೋಚನೆಗೆ ವರದಾನವಾಗಿದೆ. ತನ್ಮೂಲಕ ರೋಗದ ಲಕ್ಷಣಗಳನ್ನು ಅನುಸರಿಸಿ ರೋಗಿಗೆ ಬೇಕಾದ ಚಿಕಿತ್ಸಾ ಯೋಜನೆಯನ್ನು ಕಾರ್ಯಗತ ಗೊಳಿಸಿ ದಿನಾಂಕ ನಿಗದಿ ಗೊಳಿಸಿ ಮುಂದಿನ ವ್ಯವಸ್ಥೆಗೆ ಅನುವು ಮಾಡಲು ಅನುಕೂಲತೆ ಒದಗಿಸುತ್ತದೆ.ಹಾಗೆಯೇ ಮನೆಯಿಂದಲೇ ತೊಂದರೆಗಳ ವಿವರಣೆ ಸಹಿತ ಅಗತ್ಯ ಚಿಕಿತ್ಸಾ ಮಾಹಿತಿಯನ್ನು ಚಿಕಿತ್ಸಾ ನಂತರವೂ ಪಡೆಯಲು ದಾರಿ ಒದಗಿಸುತ್ತದೆ. ಭಾನುವಾರ ಹೊರತಾಗಿ ವಾರದ ಎಲ್ಲಾದಿನಗಳಲ್ಲೂ ಈ ಸೌಲಭ್ಯ ಲಭ್ಯವಿದ್ದು ಭೌಗೋಳಿಕ ಅಡೆ ತಡೆ ರಹಿತವಾಗಿ ಪ್ರಕೃತಿಯ ಗುಣಪಡಿಸುವ ಶಕ್ತಿಯ ನಡುವೆ ಬಲವಾದ ಸಂಪರ್ಕವನ್ನು ಸೃಷ್ಟಿಸುತ್ತದೆ ಎಂದರು
ಅನಂತರ ಸಂಸ್ಥೆಯ ನಿರ್ದೇಶಕ ಅಬ್ದುಲ್ ರೆಹಮಾನ್ ಅವರು ಮಾತನಾಡುತ್ತಾ, ನಮ್ಮೀ ನೂತನ ಆಯುರ್ವೇದ ಸಂಸ್ಥೆಯು ಈಗಾಗಲೇ ಬಹಳಷ್ಟು ಕಠಿಣತರವಾದ ರೋಗಿಗಳನ್ನೂ ಚಿಕಿತ್ಸಿಸಲು ಸಮರ್ಥವಾಗಿದ್ದು ಈಗ ಒಂದು ಹೆಜ್ಜೆ ಮುಂದಕ್ಕೆ ಹೋಗಿ ದೂರದೂರಿನ ರೋಗಿಗಳಿಗೂ ಕ್ಷಣಾರ್ಧದಲ್ಲಿ ಸಂಪರ್ಕಿಸಲು ಸಾಧ್ಯವಾಗುವಂತೆ ಜಾಲತಾಣ ಸಮಾಲೋಚನಾ ವ್ಯವಸ್ಥೆಯನ್ನು ಹೊಂದಿದ್ದು ನಮ್ಮ ಮಿಂಚಂಚೆ econsultayurveda@kanachur.edu.in ಹಾಗೂ 0824-2203331 ಅಥವಾ 2203332 ಮುಖಾಂತರ ಬಳಸ ಬಹುದಾಗಿದೆ ಎಂದರು.
ಸಂಸ್ಥೆಯ ಮುಖ್ಯ ವೈದ್ಯಕೀಯ ಸಲಹೆಗಾರ ಡಾ ಸುರೇಶ ನೆಗಳಗುಳಿಯವರು ಆಧುನಿಕ ತಂತ್ರ ಜ್ಞಾನದ ಸಮರ್ಥ ಬಳೆಯ ಬಗೆಗೆ ಸ್ವರಚಿತ ಮುಕ್ತಕ ವಾಚಿಸಿ ಎಲ್ಲರಿಗೂ ಧನ್ಯವಾದ ಸಮರ್ಪಿಸಿದರು.
ಪ್ರಾಚಾರ್ಯೆ ಡಾ ವಿದ್ಯಾಪ್ರಭಾ ಸ್ವಾಗತಿಸಿ ಸಂಸ್ಥೆಯ ಲಭ್ಯ ಸೌಕರ್ಯಗಳ ಪಕ್ಷಿನೋಟ ನೀಡಿದರು.
ಸಂಸ್ಥೆಯ ಆಢಳಿತಾಧಿಕಾರಿ ಡಾ .ರೋಹನ್ ಮೋನಿಸ್ ಸಹಿತವಾಗಿ ಸರ್ವ ವೈದ್ಯರು ಹಾಗೂ ಮತ್ತಿತರ ಪರಚಾರಿಕೆಯರು ಉಪಸ್ಥಿತರಿದ್ದರು
@ಡಾ ಸುರೇಶ ನೆಗಳಗುಳಿ
ಸುಹಾಸ
ಬಜಾಲ್ ಪಕ್ಕಲಡ್ಕ ಮಂಗಳೂರು ೯
9448216674