ಬೇಸಿಗೆಯ ಬಿಸಿಲಿನ ಬೇಗೆಯನ್ನು ತಣಿಸುವ ನೈಸರ್ಗಿಕ ಪರಿಹಾರಗಳಲ್ಲಿ ಕಬ್ಬಿನ ಹಾಲು ಕೂಡ ಒಂದು ಇದು ಬಿಸಿಲಿನ ಬೇಗೆಯನ್ನು ತಣಿಸು ವುದರ ಜೊತೆಗೆ ದೇಹ ಕಳೆದು ಕೊಂಡಿರುವ ಶಕ್ತಿಯನ್ನು ಪಡೆಯಲು ನೆರವಾಗುತ್ತದೆ. ಕಬ್ಬಿನ ಹಾಲಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ಲೂಕೋಸ್ ಪ್ರಮಾಣ ಇರುತ್ತದೆ ಇದು ನಿಶ್ಯಕ್ತಿಯನ್ನು ದೂರಮಾ ಡುತ್ತದೆ. ಕಬ್ಬಿನ ಹಾಲಿನಲ್ಲಿ ಕಾರ್ಬೋಹೈಡ್ರೇಟ್, ಪ್ರೊಟೀನ್, ಕ್ಯಾಲ್ಸಿಯಂ, ಕಬ್ಬಿಣ, ಸತು, ಪೊಟ್ಯಾಶಿಯಂ, ನಂತಹ ಕಣಜ ಸಹಿತ ಹಲವಾರು ಅವಶ್ಯಕ ಪೋಷಕಾಂಶಗಳು ಇದೆ. ಇದು ದೇಹಕ್ಕೆ ಹಲವಾರು ರೀತಿಯ ಪ್ರಯೋಜನಗಳನ್ನು ನೀಡುತ್ತದೆ ಆದರೆ ಯಾವುದೇ ಆಹಾರವನ್ನಾದರೂ ಸರಿ ಸರಿಯಾದ ರೀತಿಯಲ್ಲಿ ಸೇವನೆ ಮಾಡಿದರೆ ಮಾತ್ರ ಅದರ ಅತ್ಯುತ್ತಮ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ. ಆದ್ದರಿಂದಲೇ ಇಂದು ಕಬ್ಬಿನ ಹಾಲನ್ನು ಸೇವಿಸುವ ಸರಿಯಾದ ವಿಧಾನ ಮತ್ತು ಕಬ್ಬಿನ ಹಾಲನ್ನು ಯಾರು ಸೇವಿಸಬಾರದು ಹಾಗೂ ಇದನ್ನು ಸೇವಿಸುವುದರಿಂದ ಯಾವೆಲ್ಲಾ ಆರೋಗ್ಯಕರ ಲಾಭ ದೊರೆಯುತ್ತದೆ.
ಎಂಬುದರ ಬಗ್ಗೆ ಸಂಕ್ಷಿಪ್ತವಾದ ಮಾಹಿತಿಯನ್ನು ಇಂದು ನಿಮಗೆ ತಿಳಿಸುತ್ತೇವೆ. ಮೊದಲಿಗೆ ಒಬ್ಬ ಆರೋಗ್ಯವಂತ ವ್ಯಕ್ತಿ ದಿನದಲ್ಲಿ ಎರಡು ಗ್ಲಾಸ್ ಗಿಂತ ಹೆಚ್ಚಾಗಿ ಕಬ್ಬಿನ ಹಾಲು ಸೇವಿಸಬಾರದು. ಹಾಗೆಯೇ ರಾತ್ರಿಯ ಸಮಯದಲ್ಲಿ ಕಬ್ಬಿನ ಹಾಲಿನ ಸೇವನೆ ಮಾಡಬೇಡಿ. ಊಟಕ್ಕಿಂತ ಸ್ವಲ್ಪ ಸಮಯದ ಮೊದಲು ಕಬ್ಬಿನ ಹಾಲು ಸೇವಿಸಿದರೆ ಹಸಿವು ಹೆಚ್ಚಾಗುತ್ತದೆ. ಊಟದ ನಂತರ ಕಬ್ಬಿನ ಹಾಲು ಸೇವನೆ ಮಾಡುವುದರಿಂದ ಜೀರ್ಣ ಶಕ್ತಿ ಹೆಚ್ಚಾಗುತ್ತದೆ. ಇನ್ನೂ ಕಬ್ಬಿನ ಹಾಲನ್ನು ತಯಾರಿಸಿದ ತಕ್ಷಣವೇ ಇದನ್ನು ಸೇವಿಸಬೇಕು. ಕಬ್ಬಿನ ಹಾಲನ್ನು ತಯಾರಿಸಿ ಅದನ್ನು 15 ರಿಂದ 20 ನಿಮಿಷ ಹಾಗೆ ಬಿಟ್ಟು ನಂತರ ಕುಡಿಯಬೇಡಿ. ಏಕೆಂದರೆ ಇದರಲ್ಲಿ ಯಾವುದೇ ರೀತಿಯಾದಂತಹ ಸತ್ವಗಳು ಇರುವುದಿಲ್ಲ ಹಾಗಾಗಿ ಇದರ ಲಾಭವನ್ನು ಪಡೆಯಬೇಕಾದರೆ ಕಬ್ಬಿನ ಹಾಲು ತಯಾರಿಸಿದ ತಕ್ಷಣವೇ ಅದನ್ನು ಕುಡಿಯಬೇಕಾಗುತ್ತದೆ.