spot_img
spot_img

ನವೋದಯ ವಿದ್ಯಾಲಯಕ್ಕೆ ಆಯ್ಕೆಯಾದ 21 ವಿದ್ಯಾರ್ಥಿಗಳಿಗೆ ಬಿಇಓ ಕಛೇರಿಯಿಂದ ಸತ್ಕಾರ

Must Read

spot_img
- Advertisement -

ಮೂಡಲಗಿ: ಕೋಥಳಿಯ ಜವಾಹರಲಾಲ್ ನವೋದಯ ಕೇಂದ್ರಿಯ ವಿದ್ಯಾಲಯಕ್ಕೆ  2023-24ನೇ ಸಾಲಿನ 6 ನೇ ತರಗತಿ ಪ್ರವೇಶ ಪರೀಕ್ಷೆಯಲ್ಲಿ ಮೂಡಲಗಿ ಶೈಕ್ಷಣಿಕ ವಲಯದಿಂದ ಆಯ್ಕೆಯಾದ 21 ವಿದ್ಯಾರ್ಥಿಗಳಿಗೆ ಮೂಡಲಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಶನಿವಾರದಂದು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯ ಧಾರವಾಡ ಅಪರ ಆಯುಕ್ತರ ಕಛೇರಿಯ ಜಂಟಿ ನಿರ್ದೇಶಕ ಈಶ್ವರ ನಾಯ್ಕ ಅವರು ವಿದ್ಯಾರ್ಥಿಗಳನ್ನು ಸತ್ಕರಿಸಿ ಮಾತನಾಡಿ, ಮೂಡಲಗಿ ಶೈಕ್ಷಣಿಕ ವಲಯವು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಲ್ಲಿ ಹೆಚ್ಚಿನ ಸ್ಥಾನಗಳಲ್ಲಿ ಪ್ರಥಮ ಸ್ಥಾನದಲ್ಲಿರುವದು ಹೆಮ್ಮೆಯ ವಿಷಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಬೆಳಗಾವಿ ಜಿಲ್ಲೆಯಿಂದ ಕೋಥಳಿಯ ಜವಾಹರಲಾಲ್ ನವೋದಯ ಕೇಂದ್ರಿಯ ವಿದ್ಯಾಲಯಕ್ಕೆ 80 ವಿದ್ಯಾರ್ಥಿಗಳಲ್ಲಿ ಮೂಡಲಗಿ ವಲಯದಿಂದ ಅತೀ ಹೆಚ್ಚು 21 ವಿದ್ಯಾರ್ಥಿಗಳು ಆಯ್ಕೆಯಾಗಿರುವುದು ಪಾಲಕರ ಶಿಕ್ಷಕರ ಹಾಗೂ ಸಂಪನ್ಮೂಲ ಮಾರ್ಗದರ್ಶಕರ ವಿಶೇಷ ಕಾಳಜಿಯಿಂದಾಗಿದೆ. ರಾಷ್ಟ್ರಕ್ಕೆ ವಿಶೇಷ ಸಂಪನ್ಮೂಲ ವ್ಯಕ್ತಿಗಳನ್ನು ನೀಡಿರುವದು ಹೆಮ್ಮೆಯ ವಿಷಯವಾಗಿದೆ ಎಂದರು. 

ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಮಕ್ಕಳಲ್ಲಿರುವ ಪ್ರತಿಭೆಗಳಿಗೆ ಸೂಕ್ತ ಮಾರ್ಗದರ್ಶನ ನೀಡಿದಾಗ ಮಾತ್ರ ಅವರಲ್ಲಿ ಪ್ರತಿಭೆ ಅನಾವರಣಗೊಳ್ಳುವದು. ಪ್ರಸಕ್ತ ಸಾಲಿನಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಆಯ್ಕೆಯಾಗಿರುವದು ನಿರಂತರ ಶ್ರಮ ಹಾಗೂ ಮಾರ್ಗದರ್ಶನ ಮತ್ತು ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸಾಧ್ಯವಾಗಿದೆ. ಮುಂದೆಯು ಸಹ ಭವಿಷ್ಯತ್ತಿನಲ್ಲಿ ಮಕ್ಕಳು ಉನ್ನತ ವ್ಯಾಸಂಗದ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ವಿಯಾಗಲೆಂದು ಹರ್ಷವ್ಯಕ್ತಪಡಿಸಿದರು. 

- Advertisement -

ನವೋದಯ ಶಾಲೆಗೆ ಆಯ್ಕೆಯಾದ ಭೂಮಿಕಾ ನುಗ್ಗಾನಟ್ಟಿ, ಮಾನಸ ತ್ಯಾಪಿ, ರಾಹುಲ್ ಹುಕ್ಕೇರಿ, ಸುಪ್ರಿಯಾ ಬಿಲಕುಂದಿ, ಸಾಕ್ಷಿ ಹುಕ್ಕೇರಿ, ಬಸವರಾಜ ಸವಸುದ್ದಿ, ಶಶಾಂಕ ಲಕ್ಷ್ಮೀಶ್ವರ, ಸಮರ್ಥ ಕೊಳವಿ, ರಮೇಶ ನಿಪ್ಪಾಣಿ, ನಿರ್ಣಯ ಇಂಚಲ, ವಿನೀತಾ ಶಿರಗುರ, ಉದಯ ಕೊಣ್ಣೂರ, ಶ್ರೇಯಸ್ ಕುರಬೇಟ, ಸಂದೀಪ ಮರ್ದಿ, ಸಿದ್ದರಾಯ ದೊಡ್ಡಸಿನ್ನವರ, ಆರಾಧ್ಯ ಕುರುಬಚನ್ನಾಳ, ರಾಕೇಶ ತುರಮುರಿ, ಪ್ರೇರಣ ಕೊಟೂರ, ಮಹಾಲಕ್ಷ್ಮಿ ಗುಡ್ಡಮನಿ, ಲೋಹಿತ್ ಕಾನಪ್ಪನವರ, ಸರಸ್ವತಿ ಆಶಪ್ಪಗೋಳ ಸತ್ಕರಿಸಿ ಗೌರವಿಸಲಾಯಿತು.

ಸಮಾರಂಭದಲ್ಲಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಣಾಧಿಕಾರಿ ಎ.ಎ.ಜುನೇದಪಟೇಲ್, ಸತೀಶ ಬಿ.ಎಸ್, ಟಿ.ಕರಿಬಸವರಾಜ, ವ್ಹಿ.ಆರ್.ಯರಗಟ್ಟಿ, ಶಿಕ್ಷಕರ ಸಂಘಟನೆಯ ಪದಾಧಿಕಾರಿಗಳಾದ ಎನ್.ಜಿ.ಹೆಬ್ಬಾಳ, ಎಸ್.ಎಸ್.ಪಾಟೀಲ, ಸಂತೋಷ ಪಾಟೀಲ, ಶಿವಾನಂದ ಕುರಣಗಿ, ಪಿ.ಬಿ.ಕುಲಕರ್ಣಿ, ಕೆ.ಎಲ್ ಮೀಶಿ ಸಿಆರ್‍ಪಿಗಳಾದ ಸುರೇಶ ತಳವಾರ, ಸಮೀರ ದಬಾಡಿ, ಪಿ.ಜೆ ಕಳ್ಳಿಮನಿ, ಬಿ.ಪಿ ಪಾಟೀಲ ಹಾಗೂ ವಿವಿಧ ಶಾಲೆಯ ಮುಖ್ಯಸ್ಥರು ಪಾಲಕರು ಉಪಸ್ಥಿತರಿದ್ದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಎ.ಪಿ ಪರಸನ್ನವರ ಸ್ವಾಗತಿಸಿ ವಂದಿಸಿದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group