ಸವದತ್ತಿ: ತಾಲೂಕಿನ ಜಕಬಾಳ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಲಕ್ಷ್ಮೀನಗರ ಶಾಲೆಗೆ ರಾಜ್ಯ ಮಟ್ಟದ ಉತ್ತಮ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭವು ಇತ್ತೀಚೆಗೆ ಬೆಂಗಳೂರಿನ ಕೊಂಡಜ್ಜಿ ಸಭಾಭವನದಲ್ಲಿ ಕರ್ನಾಟಕ ರಾಜ್ಯ ಮಹಿಳಾ ನೌಕರರ ಸಂಘದ ಆಶ್ರಯದಲ್ಲಿ ಜರುಗಿದ ಒಂದು ದಿನದ ಕಾರ್ಯಾಗಾರದಲ್ಲಿ ರಾಜ್ಯದ ೧೩ ಶಾಲೆಗಳಿಗೆ ಉತ್ತಮ ಶಾಲೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕರ್ನಾಟಕ ಉಚ್ಚ ನ್ಯಾಯಾಲಯದ ಗೌರವಾನ್ವಿತ ನ್ಯಾಯಾಧೀಶರಾದ ಶ್ರೀಮತಿ ಕೆ,ಎಸ್,ಮುದಗಲ್ ಕರ್ನಾಟಕ ರಾಜ್ಯ ಮಹಿಳೆಯರ ನೌಕರರ ಸಂಘದ ಅಧ್ಯಕ್ಷರಾದ ಶ್ರೀಮತಿ ರಮಾ.ಆರ್, ಉಪಾಧ್ಯಕ್ಷರಾದ ಪ್ರೊ.ಉಷಾಮಾಲಿನಿ, ಸಹ ಕಾರ್ಯದರ್ಶಿಗಳಾದ ಕೆ,ಎಸ್ ರೇಖಾ , ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಡಾ.ಶೈಲಜ ಸಿ,ವಿ, ಉಪಾಧ್ಯಕ್ಷರಾದ ಅಪೂರ್ವ ಕೆ,ಎಸ್, ಖಜಾಂಜಿಗಳಾದ ಸುಮಾ,ಎಚ್,ಜಿ, ಬೆಳಗಾವಿ ಜಿಲ್ಲೆಯ ಶಿಕ್ಷಕ ಸಾಹಿತಿ ವೈ,ಬಿ,ಕಡಕೋಳ, ಕಲಬುರಗಿ ಜಿಲ್ಲೆಯ ಮಹಿಳಾ ನೌಕರರ ಸಂಘದ ಅಧ್ಯಕ್ಷರಾದ ನಂದಿನಿ ಸನಬಾಳ್, ಭಾಷಾ ಅಲ್ಪಸಂಖ್ಯಾತ ಶಾಲೆಗಳ ರಾಜ್ಯಾಧ್ಯಕ್ಷರಾದ ಎಲ್,ಐ,ಲಕ್ಕಮ್ಮನವರ, ಮಹಿಳಾ ಶಿಕ್ಷಕಿಯರ ಸಂಘದ ರಾಜ್ಯಾಧ್ಯಕ್ಷರಾದ ಡಾ.ಲತಾ ಮುಳ್ಳೂರ ಸೇರಿದಂತೆ ಗಣ್ಯರ ಉಪಸ್ಥಿತಿಯಲ್ಲಿ ಲಕ್ಷ್ಮೀ ನಗರ ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಮಂಜುನಾಥ ಬಸಳೀಗುಂದಿ, ಸದಸ್ಯರಾದ ಸೋಮನಿಂಗ ಚಿನಗುಡಿ, ಕೆಂಚಪ್ಪ ಗೂರಿ, ವಿಠಲ ಬಸಳೀಗುಂದಿ, ಮಾರುತಿ ಬಿಟ್ಟಿ, ಪಂಚು ಗೋಮಾಡಿ, ಲಕ್ಷ್ಮಣ ಹಾಡಕಾರ, ಮಂಜುನಾಥ ಮಾನಮ್ಮಿ ಪ್ರಧಾನ ಗುರುಗಳಾದ ರವಿ, ಸಣಕಲ್ ಸೇರಿದಂತೆ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರುಗಳಿಗೆ ವೇದಿಕೆಯಲ್ಲಿ ಗೌರವಿಸುವ ಮೂಲಕ ಪ್ರಶಸ್ತಿ ವಿತರಿಸಲಾಯಿತು.