spot_img
spot_img

ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯಿಂದ ನಿವೃತ್ತ ಸೈನಿಕರಿಗೆ ಸನ್ಮಾನ

Must Read

- Advertisement -

ಬೆಂಗಳೂರು – ರಾಷ್ಟ್ರದ ಸ್ವಾತಂತ್ರ್ಯ ಕ್ಕಾಗಿ ಚಳವಳಿ ನಡೆಸಿ ನೇಣುಗಂಭ ಏರಿದ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಭಗತ್ ಸಿಂಗ್,ಸುಖದೇವ್ ಹಾಗೂ ರಾಜಗುರು ಅವರ ಸ್ಮರಣಾರ್ಥ ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯು ತಾಲ್ಲೂಕಿನ ನಿವೃತ್ತ ಸೈನಿಕರನ್ನು ಸನ್ಮಾನಿಸುವ ಮೂಲಕ ರಚನಾತ್ಮಕವಾಗಿ ಆಚರಿಸಿತು.

ಕೆ.ಆರ್.ನಗರ. ತಾಲ್ಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಹೆಚ್.ಕೆ.ಸತೀಶ್ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್, ಸೈನಿಕರು ರಾಷ್ಟ್ರದ ಆತ್ಮವಿದ್ದಂತೆ. ರಾಷ್ಟ್ರಕ್ಕೆ ಅವರ ಸೇವೆ ಅತ್ಯಮೂಲ್ಯ . ರಾಷ್ಟ್ರದ ಪ್ರತಿಯೊಬ್ಬ ಯುವಕನೂ ಕೆಲವು ವರ್ಷಗಳ ಕಾಲ ಸೈನಿಕನಾಗಿ ರಾಷ್ಟ್ರ ಸೇವೆ ಮಾಡುವುದನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಬೇಕು ಎಂದು ಅಭಿಪ್ರಾಯ ಪಟ್ಟರು.

- Advertisement -

ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿಗಳಾದ ಅಶೋಕಕುಮಾರ್ ಮಾತನಾಡಿ, ರಾಷ್ಟ್ರದ ಪ್ರಗತಿಗೆ ಯುವಕರ ಜವಾಬ್ದಾರಿ ಅಪಾರ ಎಂದು ಅಭಿಪ್ರಾಯಪಟ್ಟರು. ಸಂಪನ್ಮೂಲ ವ್ಯಕ್ತಿಗಳಾದ ಶಶಿಧರ್ ಅವರು ಭಗತ್ ಸಿಂಗ್, ರಾಜಗುರು ಹಾಗೂ ಸುಖದೇವ್ ಅವರ ಜೀವನ, ಸ್ವಾತಂತ್ರ್ಯ ಹೋರಾಟ ಹಾಗೂ ಜೀವನ ಸಂದೇಶಗಳನ್ನು ಕುರಿತು ವಿವರಿಸಿದರು.

ಶಿಕ್ಷಕ ರಾದ ಸುರೇಶ ವಿ.ಮಧುವನಹಳ್ಳಿ, ಶಿವುಗೌಡ ಸಭೆಯಲ್ಲಿ ಮಾತನಾಡಿದರು.ಸಂಸ್ಥೆಯ ಅಧ್ಯಕ್ಷರಾದ ಯೋಗೀಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಖಜಾಂಚಿ ಕೃಷ್ಣಯ್ಯ ಎಲ್ಲರನ್ನೂ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

- Advertisement -

ಇದೇ ಸಂದರ್ಭದಲ್ಲಿ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಹಾಗೂ ಸೇವೆ ಸಲ್ಲಿಸುತ್ತಿರುವ ಸುಮಾರು ಹತ್ತೊಂಬತ್ತು ಮಂದಿ ರಾಷ್ಟ್ರ ರಕ್ಷಕರನ್ನು ಸನ್ಮಾನಿಸಲಾಯಿತು.

ಸೈನ್ಯ ಗೀತೆಯನ್ನು ಹಾಡಿದಂತಹ ಹಾಗೂ ಅಂತರಾಷ್ಟ್ರೀಯ ಗಾಯಕರು ಅಮ್ಮ ರಾಮಚಂದ್ರ ರವರಿಗೆ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಭಗತ್ ಸಿಂಗ್ ಫೌಂಡೇಶನ್ ಪ್ರಧಾನ ಸಂಘಟನಾ ಕಾರ್ಯದರ್ಶಿ ರಕ್ಷಿತ್, ಖಜಾಂಜಿ ಕೃಷ್ಣಯ್ಯ, ಸ್ವಾಮಿ ಗೌಡರು,ತೇಜು, ಸೀತಾರಾಮ,ಶಿವು,ಅಭಿ, ಬ್ರೋಮೆಶ್, ಅನುಷಾ, ಮಹಾಲಕ್ಷ್ಮಿ,ಭಾಗ್ಯಲಕ್ಷ್ಮಿ,ಕಿರಣ್ ಕುಮಾರ್ , ರಾಘವೇಂದ್ರ, ಧರ್ಮ, ಕುಮಾರ್,ಬಸವರಾಜ್, ಪ್ರದೀಪ್, ಭೋಜ ಮೊದಲಾದವರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಭತ್ತದ ನಾಡು ಕೆ.ಆರ್.ನಗರ ಕಾವೇರಿ ತೀರದ ಅರ್ಕೇಶ್ವರ

ನಾವು ಕಪ್ಪಡಿ ದರ್ಶನ ಮಾಡಿಕೊಂಡು ಕೆ.ಆರ್.ನಗರದ ಅರ್ಕೇಶ್ವರ ದೇವಸ್ಥಾನ ನೋಡಲು ಪ್ರಯಾಣ ಮುಂದುವರೆಸಿದೆವು. ಕೆ.ಆರ್.ನಗರದಿಂದ ಹಾಸನ ರಸ್ತೆಯಲ್ಲಿ ಮೂರ್ನಾಲ್ಕು ಕಿ.ಮೀ. ದೂರದಲ್ಲಿ ಕಾವೇರಿ ನದಿಯ ದಂಡೆಯಲ್ಲಿ...
- Advertisement -

More Articles Like This

- Advertisement -
close
error: Content is protected !!
Join WhatsApp Group