spot_img
spot_img

ಭೈರಪ್ಪನವರ ಕಾದಂಬರಿಗಳಿಗೆ ಅದ್ಭುತ ಶಕ್ತಿ ಇದೆ

Must Read

- Advertisement -

ತಿಮ್ಮಾಪುರ: ಎಸ್. ಎಲ್. ಭೈರಪ್ಪನವರ ಕಾದಂಬರಿಗಳು  ಓದುಗರನ್ನು ಮಂತ್ರಮುಗ್ದರಾಗಿಸುತ್ತವೆ ಅವರ  ಕಾದಂಬರಿಯ ಕಥಾವಸ್ತು- ಪಾತ್ರಗಳನ್ನು ಹೆಣೆದಿರುವ ರೀತಿ ನಿಜಕ್ಕೂ ಅದ್ಭುತವಾಗಿದೆ ಎಂದು ಸೂಳೇಭಾವಿ ಓದುಗ ವಿಠ್ಠಲ ಮಾರಾ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ಹುನಗುಂದ ಹಾಗೂ ವಲಯ ಘಟಕ ಅಮೀನಗಡ ಸಹಯೋಗದಲ್ಲಿ ಜನವರಿ 26 , ಶನಿವಾರ ಸಾಯಂಕಾಲ ಹುನಗುಂದ ತಾಲೂಕಿನ ಸೂಳೇಭಾವಿ ರಾಮಯ್ಯಸ್ವಾಮಿ ಮಠದಲ್ಲಿ  ನಡೆದ ‘ ನಾನು ಓದಿದ ಪುಸ್ತಕ’ ಕಾರ್ಯಕ್ರಮದ ಓದುಗನಾಗಿ ತಾವು ಓದಿದ ಎಸ್.ಎಲ್ ಭೈರಪ್ಪನವರ ‘ದೂರ ಸರಿದರು’ ಕಾದಂಬರಿ ಕುರಿತು ಮಾತನಾಡಿದ ಅವರು ಇಂದಿನ ಯುವಕರಿಂದ ಹಿಡಿದು ಇಳಿವಯಸ್ಸಿನರಿಗೂ ಕೂಡಾ ಅವರ ಕಾಲೇಜು ದಿನಗಳಲ್ಲಿನ ಅನುಭವಗಳನ್ನು ಮತ್ತೊಮ್ಮೆ ಸಮರ್ಪಕವಾಗಿ ಕಣ್ಮುಂದೆ ತಂದು ಈ ಕಾದಂಬರಿ ಕಥಾಸಾರಾಂಶ ಸಹಜವಾಗಿಯೇ ಶುರುವಾದರೂ ಓದುತ್ತಾ- ಓದುತ್ತಾ ನಮ್ಮನ್ನು ತನ್ನ ಲೋಕಕ್ಕೆ ಕರೆದುಕೊಂಡು ಹೋಗಿ, ನಮ್ಮ ವಾಸ್ತವಿಕತೆಯನ್ನು ಮರೆಯುವಷ್ಟು ಗಟ್ಟಿತನದಿಂದ ಕೂಡಿದೆ. ಇನ್ನು ಕಥೆಯನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ ಎರಡೂ ಜೋಡಿಗಳು ಕೊನೆಯವರೆಗೂ ಪ್ರೀತಿಸುತ್ತಿದ್ದರೂ ಒಂದಾಗದೇ ಹೋಗುವದು “ದೂರ ಸರಿದರು” ಕಥೆಗೆ ಪೂರಕವಾಗಿ ಮೂಡಿಬಂದಿವೆ ಎಂದರು.

ಇಲ್ಲಿ ವಸಂತನು ಉಮೆಯಿಂದ ಕೆಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ಓದುವ ನೆಪದಲ್ಲಿ ದೂರವಾದರೆ, ರಮೆಯಿಂದ ಆನಂದನು ವಿನುತೆಯ ಮೇಲಿನ ಪ್ರೇಮದಿಂದ ದೂರವಾದರೆ,ಆನಂದ-ವಿನುತೆಯ ಪ್ರೇಮ ಅವಳ ತಾಯಿಯ ಜಾತಿ-ಅಂತಸ್ತಿನ ವನಜಂಬದಿಂದ ದೂರವಾಗುತ್ತದೆ, ಆದರೆ ಇದರಲ್ಲಿ ಬರುವ ಈ ಜೋಡಿಗಳ ಮಧ್ಯೆ ಇದ್ದಂತಹ ನಿಷ್ಕಲ್ಮಶ ಪರಿಶುದ್ಧ ಪ್ರೀತಿಯ ಪರಾಕಾಷ್ಠೆ ಮಾತ್ರ ವರ್ಣಿಸಲಸಾಧ್ಯ, ವಿನುತೆಯಂತೂ ಆನಂದ ತನ್ನ ಗಂಡನೇ ಎನ್ನುವ ಪರಿ,ಅವನ ಎಂಜಿಲು ತಟ್ಟೆಯಲ್ಲಿ ತಾನು ಉಣ್ಣುವ ಪರಿ,ಕೊನೆಗೆ ತಾಯಿ,ತಮ್ಮಂದಿರನ್ನು ದಡಮುಟ್ಟಿಸುವಲ್ಲಿ ಅವಳ ಪರಿಶ್ರಮ, ಏನೇ ಆದರೂ ಈ ಜನ್ಮದಲ್ಲಿ ಆನಂದ ದಕ್ಕುವದಿಲ್ಲಾ ಎಂಬ ನಿರಾಶಾವಾದದೊಂದಿಗೆ ಅವನ ನೆನಪಿನಲ್ಲಿಯೇ ಅವಳು ಕಾಲನ ವಶವಾಗುವದು ಮಾತ್ರ ಓದುಗನು ಕಂಬನಿ ಮಿಡಿಯುವಂತೆ ಮಾಡಿರುವುದು ಮಾತ್ರ ಭೈರಪ್ಪನವರ ಅಕ್ಷರಗಳಿಗಿರುವ ಶಕ್ತಿ ಸಾಧ್ಯವಾದರೆ ಒಮ್ಮೆ ಓದಿ ಎಂದರು.

- Advertisement -

ಹುನಗುಂದ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಪರಿಕಲ್ಪನೆಯ ಓದುಗನಿಗೆ ಪ್ರಾಮುಖ್ಯ ನೀಡುವ ಈ ಕಾರ್ಯಕ್ರಮ ಭಾಗಿಯಾದ ಎಲ್ಲಾ ಪ್ರೇಕ್ಷಕರು ವೇದಿಕೆಗೆ ಬಂದು ಪುಸ್ತಕದ ಕುರಿತು ಉಕ್ತಿ ಹೇಳಿ ಕಾರ್ಯಕ್ರಮ ಉದ್ಘಾಟಿಸಿದರು.

ಡಾ: ಬಸವರಾಜ ಖೋತ, ಅಶೋಕ ಚಿಕ್ಕಗಡೆ, ಬಸವರಾಜ ಕನ್ನೂರ, ಯೋಗೀಶ ಲಮಾಣಿ, ಪ್ರಭು ಮಾಲಗಿತ್ತಿಮಠ, ಸಂಗಮೇಶ ಹೊದ್ಲೂರು, ವಲಯ ಕ.ಸಾ.ಪ ಅಧ್ಯಕ್ಷ ನರಸಿಂಹಮೂರ್ತಿ, ಕಿರಣ ವಜ್ಜರಮಟ್ಟಿ, ನಾಗಪ್ಪ ಹಡಪದ, ರಾಜೇಸಾಬ ತಟಗಾರ, ವೆಂಕಣ್ಣ ಮಾಶಾಳ ಟಿ.ಬಿ.ಭಂಜತ್ರಿ, ದಿವಾಕರ ಸಿನ್ನೂರ, ಶ್ರೀನಿವಾಸ ಕತ್ತಿ,ಮಲ್ಲಪ್ಪ ಕಮತಗಿ, ಲಕ್ಷ್ಮಣ ಕತ್ತಿ, ಯು.ಬಿ.ಕಂಬಾಳಿಮಠ ಇದ್ದರು.

ಕ.ಸಾ.ಪ ಅಧ್ಯಕ್ಷ ಮಲ್ಲಿಕಾರ್ಜುನ ಸಜ್ಜನ ಕಾರ್ಯಕ್ರಮ ನಿರ್ವಹಣೆ ಮಾಡಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group