spot_img
spot_img

ಮೇ 1ರಂದು ಓಂಕಾರ ಆಶ್ರಮದಲ್ಲಿ   ನಿರಂತರ ಭಜನೋತ್ಸವದ ಸಮಾರೋಪ ಸಮಾರಂಭ

Must Read

 ಮೇ 1ರಂದು ಓಂಕಾರ ಆಶ್ರಮದಲ್ಲಿ   ನಿರಂತರ ಭಜನೋತ್ಸವದ ಸಮಾರೋಪ ಸಮಾರಂ
 ಆಯೋಜನೆ : ಅಖಿಲ ಕರ್ನಾಟಕ ಭಜನಾ ಪರಿಷತ್ತು (ರಿ) ಗಿರಿನಗರ
 ಸತ್ಸಂಗ ಭಜನಾ ಮಹಾ ಮಂಡಳಿ ಸಭಾ ರಾಷ್ಟ್ರಮಟ್ಟದಲ್ಲಿ ಭಜನಾಮೇಳ ಆಯೋಜಿಸುವಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟು 365 ದಿನಗಳ  ನಿರಂತರ ಭಜನೋತ್ಸವ ವನ್ನು ಆರಂಭಿಸಿ, ನಶಿಸಿ ಹೋಗುತ್ತಿರುವ ಭಜನಾ ಪದ್ಧತಿಯ  ಪುನರುತ್ಥಾನಕ್ಕಾಗಿ ವಿಶ್ವಶಾಂತಿ ಗಾಗಿ ವಿಶ್ವಕ್ಕೆ ಜ್ಞಾನದ ಬೆಳಕನ್ನು ಹರಡಿದ ಹಿಂದೂ ಧರ್ಮದ ಸಂಘಟನೆಯ  ನಿಟ್ಟಿನಲ್ಲಿ  ಆಯೋಜಿಸಿ ಬೆಂಗಳೂರು ಮಹಾನಗರದ ಹಲವಾರು ಭಜನಾ ಮಂಡಳಿಗಳನ್ನು ಒಂದೇ ವೇದಿಕೆಯಲ್ಲಿ ತರುವ ಉದ್ದೇಶದಿಂದ 2019-20 ರಲ್ಲಿ 365 ದಿನಗಳ ನಿರಂತರ ಭಜನಾ ಉತ್ಸವವನ್ನು ಏರ್ಪಡಿಸಲಾಗಿತ್ತು.
ಅದರ ಸಮಾರೋಪ ಸಮಾರಂಭವನ್ನು ಇದೇ ಮೇ 1, 2024 ಬುಧವಾರ ಬೆಳಗ್ಗೆ 9:30ರಿಂದ ಬೆಂಗಳೂರಿನ ಕೆಂಗೇರಿ- ಉತ್ತರಹಳ್ಳಿ ಮುಖ್ಯರಸ್ತೆಯಲ್ಲಿರುವ ಶ್ರೀನಿವಾಸಪುರದ ಓಂಕಾರ ಆಶ್ರಮದಲ್ಲಿ( ಜೆ ಎಸ್ ಎಸ್ ಇಂಜಿನಿಯರಿಂಗ್ ಕಾಲೇಜು ಹಿಂಭಾಗ) ಏರ್ಪಡಿಸಲಾಗಿದೆ.
 ಓಂಕಾರಶ್ರಮದ ಪೂಜ್ಯ ಶ್ರೀ ಮಧುಸೂದನಂದಪುರಿ ಸ್ವಾಮಿಗಳು, ಬೇಲಿ ಮಠದ ಶಿವರುದ್ರ ಮಹಾಸ್ವಾಮಿಗಳು ಮತ್ತು ಕೆ ಆರ್ ಪುರಂ ರಾಮಕೃಷ್ಣ ವಿವೇಕಾನಂದ ಸಾಧನ ಕೇಂದ್ರದ ಚಂದ್ರೇಶಾನಂದರವರ ದಿವ್ಯ ಸಾನ್ನಿಧ್ಯದಲ್ಲಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಮಧ್ಯ ಕ್ಷೇತ್ರಿಯ ಕಾರ್ಯವಾಹ ಮತ್ತು ವನವಾಸಿ ಕಲ್ಯಾಣ ಆಶ್ರಮದ ನಿರ್ವಾಹಕ ವಿಶ್ವಸ್ಥರಾದ ತಿಪ್ಪೇಸ್ವಾಮಿ ಅಧ್ಯಕ್ಷತೆ ವಹಿಸುವ ಸಮಾರಂಭದಲ್ಲಿ ಕರ್ನಾಟಕ ದಕ್ಷಿಣ ಪ್ರಾಂತ ಸಂಘ ಚಾಲಕರಾದ ಜಿ.ಎಸ್ ಉಮಾಪತಿ ದಿಕ್ಸೂಚಿ ಭಾಷಣ ಮಾಡುವರು.
 ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ಮತ್ತು ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಆರ್ ವಿ ಇನ್ಸ್ಟಿಟ್ಯೂಷನ್ ನ ನಿರ್ದೇಶಕರಾದ ಡಾ ಮಮತಾ ದೇವರಾಜ್ ವಿಶೇಷ ಆಹ್ವಾನಿತರಾಗಿ ಕೊಟ್ಟೂರು ಅಮರನಾಥ ಯಾತ್ರಾ ಸೇವಾಸಮಿತಿಯ ಕಾರ್ಯದರ್ಶಿ ಸಾಯಿ ಸತೀಶ್ ಕೋರಗಲ್ ಹಾಗೂ ಎಕೆಬಿಎಂಎಸ್ ಉಪಾಧ್ಯಕ್ಷ  ಎಂ.ಆರ್.ಶಿವಶಂಕರ್   ಭಾಗವಹಿಸಲಿದ್ದಾರೆ ಎಂದು ಆಯೋಜಕರಾದ   ಅಧ್ಯಕ್ಷ ಡಾ.ಕೆ ವಿ ಮುರಳಿಧರ ಶರ್ಮ ಮತ್ತು ಕಾರ್ಯದರ್ಶಿ ಮಲ್ಲಿಕಾರ್ಜುನ ಟಿ ಎಸ್ ತಿಳಿಸಿರುತ್ತಾರೆ.
ವಿವರಗಳಿಗೆ 94491 54928 / 97421 54928.
- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group