ಭಾರತ ಜೋಡೋ ಯಾತ್ರೆ; ಮಹಿಳೆಯರ ಲೆಕ್ಕ ಹಾಕಿದ ಕಾಂಗ್ರೆಸ್

Must Read

ಬೀದರ: ಕಾಂಗ್ರೆಸ್ ನ ಭಾರತ್ ಜೋಡೊ ಯಾತ್ರೆಗೆ ಬಂದಿದ್ದ ಮಹಿಳೆಯರ ಎಣಿಕೆ ಮಾಡುತ್ತಿರುವ ವಿಡಿಯೋ ಒಂದು ವೈರಲ್  ಆಗಿದ್ದು ಮಹಿಳೆಯರಿಗೆ ತಲಾ ೨೦೦ ರೂ. ಕೊಟ್ಟು ಯಾತ್ರೆಗೆ ಕರೆತರಲಾಗಿದೆ ಎಂದು ಲೇವಡಿ ಮಾಡಲಾಗುತ್ತಿದೆ.

ಬೀದರ್‌ನಲ್ಲಿ‌ ನಡೆದ ಭಾರತ್ ಜೋಡೊ ಪಾದಯಾತ್ರೆಉ ಬಳಿಕ ಮಹಿಳೆಯರ ಲೆಕ್ಕ ಹಾಕುತ್ತಿರುವ ಕಾಂಗ್ರೆಸ್ಸಿಗರು ಪಾದಯಾತ್ರೆಗೆ ಹಣ ಕೊಟ್ಟು ಮಹಿಳೆಯರನ್ನು ಸೇರಿಸಿದ್ದರಾ ಕಾಂಗ್ರೆಸ್ಸಿಗರು ಎಂಬ ಪ್ರಶ್ನೆ ಮೂಡಿದೆ.

ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ನೇತೃತ್ವದಲ್ಲಿ ‌ನಡೆದ ಭಾರತ್ ಜೋಡೊ ಪಾದಯಾತ್ರೆಗೆಹಿಳೆಯರನ್ನು ಕರೆತರಲಾಗಿದ್ದು  ತಮಗೆ ತಲಾ ರೂ. ೨೦೦  ನಿಗದಿ ಮಾಡಿದ್ದಾರೆ ಎಂದು ಮಹಿಳೆಯೊಬ್ಬರು  ಹೇಳುತ್ತಿರುವ ವಿಡಿಯೋ ವೈರಲ್ ಆಗಿದೆ.

ಪ್ರತಾಪನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಅಂಬೇಡ್ಕರ್ ವೃತ್ತದವರೆಗೆ ಪಾದಯಾತ್ರೆ ನಡೆಯಿತು. ಕಾರ್ಯಕರ್ತರೊಂದಿಗೆ ಸಚಿವ ಈಶ್ವರ ಖಂಡ್ರೆ ಒಂದು ಕಿಮೀ ಹೆಜ್ಜೆ ಹಾಕಿದರು. ಯಾತ್ರೆ ಮುಕ್ತಾಯದ ನಂತರ ಕಾಂಗ್ರೆಸ್ ಕಾರ್ಯಕರ್ತರು ಮಹಿಳೆಯರನ್ನು ಎಣಿಸುತ್ತಿದ್ದರೆನ್ನಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group