ಬಿಜೆಪಿ ಭೀಷ್ಮನಿಗೆ ಭಾರತ ರತ್ನ ; ಸಂಸದ ಈರಣ್ಣ ಕಡಾಡಿ ಪ್ರಶಂಸೆ

Must Read

ಮೂಡಲಗಿ: ನಮ್ಮ ದೇಶ ಕಂಡ ಅಪರೂಪದ ರಾಜಕಾರಣಿ, ಬಿಜೆಪಿ ಭೀಷ್ಮ ಎಂದೇ ಖ್ಯಾತರಾದ  ಲಾಲ್‌ ಕೃಷ್ಣ ಅಡ್ವಾಣಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ಪ್ರಶಸ್ತಿಯನ್ನು ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ  ಕೇಂದ್ರ ಬಿಜೆಪಿ ಸರಕಾರದ ಕ್ರಮವನ್ನು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ  ಅವರು ಸ್ವಾಗತಿಸಿ, ಅಡ್ವಾಣಿ ಅವರನ್ನು ಅಭಿನಂದಿಸಿದ್ದಾರೆ.

ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿಯವರು ಈ ದೇಶದಲ್ಲಿ ಏಕತಾ ಯಾತ್ರೆಯ ಮೂಲಕ ದೇಶದ ಜನರನ್ನು ಒಂದುಗೂಡಿಸುವಂತ ಕೆಲಸಕ್ಕೆ ಅವರು ಬಹಳ ಅವಿರತವಾಗಿ ಶ್ರಮಿಸಿದ್ದರು. ಅದರ ಜೊತೆಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಲ್ಲಿ ಅಡ್ವಾಣಿಯವರ ಪಾತ್ರ ಮುಖ್ಯ ರಾಮ ರಥಯಾತ್ರೆ ಮೂಲಕ ಇಡೀ ದೇಶಾದ್ಯಂತ ಸಂಚರಿಸಿ ರಾಮಮಂದಿರ ಹೋರಾಟದ ಕಿಚ್ಚು ಹಚ್ಚಿದ್ದರು. ಅದು ಕೂಡ ಇವತ್ತು ಫಲಪ್ರದವಾಗಿದೆ.

ಕೇಂದ್ರ ಗೃಹ ಸಚಿವರಾಗಿ, ಉಪಪ್ರಧಾನಿಯಾಗಿ ಮತ್ತು ಮಾಹಿತಿ- ತಂತ್ರಜ್ಞಾನ ಸಚಿವರಾಗಿ ದೇಶಕ್ಕೆ ತನ್ನ ಸೇವೆಯನ್ನು ಸಲ್ಲಿಸಿದಂತಹ ವಯೋವೃದ್ದ, ಹಿರಿಯ ರಾಜಕಾರಿಣಿಯಾದ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ಸಿಕ್ಕಿರುವುದು ಅತ್ಯಂತ ಸಂತೋಷದ ಸಂಗತಿ ಜೊತೆಗೆ ಅಡ್ವಾಣಿ ಅವರಿಗೆ ಈ ಪ್ರಶಸ್ತಿ ನೀಡುವ ಮೂಲಕ ಭಾರತ ರತ್ನ ಪ್ರಶಸ್ತಿ ಗೌರವವೂ ಹೆಚ್ಚಾಗಿದೆ ಎಂದು ಮಾಜಿ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರಿಗೆ ಶುಭ ಕೋರಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group