spot_img
spot_img

ಎದ್ದವರ ಕೈ ಹಿಡಿಯುವುದಕ್ಕಿಂತ ಬಿದ್ದವರ ಕೈ ಹಿಡಿದು ನಡೆಸುವುದು ಮುಖ್ಯ: ಈರಣ್ಣ ಕಡಾಡಿ

Must Read

- Advertisement -

ಘಟಪ್ರಭಾ: ಸಮಾಜದಲ್ಲಿ ಎದ್ದವರ ಕೈ ಹಿಡಿಯುವುದಕ್ಕಿಂತ ಕೆಳಗೆ ಬಿದ್ದವರ ಕೈ ಹಿಡಿದು ಮುನ್ನಡೆಸುವುದು ಅತೀ ಮುಖ್ಯವೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಹೇಳಿದರು.

ಶನಿವಾರ ಫೆ-03 ರಂದು ಘಟಪ್ರಭಾ ಪಟ್ಟಣದ ಬಸವ ನಗರದಲ್ಲಿ ಮಹಿಳಾ ಅಭಿವೃದ್ಧಿ ಮತ್ತು ಸಂರಕ್ಷಣಾ ಸಂಸ್ಥೆಗೆ 2021-22ನೇ ಸಾಲಿನ ರಾಜ್ಯಸಭಾ ಸಂಸದರ ಸ್ಥಳೀಯ ಪ್ರದೇಶಾಭಿವೃದ್ದಿ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಘಟಪ್ರಭಾದಲ್ಲಿರುವ ಮಾಸ್ ಸಂಸ್ಥೆ ಕಳೆದ 25 ವರ್ಷಗಳಿಂದ ನಿರಂತರ ಜಾಗೃತೆ ಮೂಡಿಸಿ ರಾಜ್ಯದಲ್ಲಿರುವ ದೇವದಾಸಿ ಪೀಡುಗುಗಳನ್ನು ನಿರ್ಮೂಲನೆ ಮಾಡಿ ಇಂದು ದೇವದಾಸಿ ಪದ್ಧತಿಯಿಂದ ಶೋಷಿತರಾದ ಮಹಿಳೆಯರ ಮತ್ತು ಮಕ್ಕಳ ಸಂರಕ್ಷಣೆ ಮಾಡುತ್ತಿದೆ ಎಂದರು.

ಸಮಾಜದಲ್ಲಿ ಕೆಳಗೆ ಬಿದ್ದವರ ಕೈ ಹಿಡಿದು ನಡೆಸುವುದು ಅತೀ ಮುಖ್ಯವಾಗಿದ್ದು ಸಂಸ್ಥೆಯ ಮುಖ್ಯ ಕಾರ್ಯ ನಿರ್ಮಾಹಕ ಅಧಿಕಾರಿಗಳಾದ ಸೀತವ್ವ ಜೋಡಟ್ಟಿ ಅವರ ಕಾರ್ಯವನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರ ಸರಕಾರ ಕಳೆದ ನಾಲ್ಕು ವರ್ಷಗಳ ಹಿಂದೆ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿದೆ. ಶೋಷಿತ ವರ್ಗದವರನ್ನು ರಕ್ಷಣೆ ಮಾಡುತ್ತಿರುವ ಸಂಸ್ಥೆ ಕಳೆದ 25 ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವುದು ನಿಜವಾಗಿಯೂ ವಿಪರ್ಯಾಸವಾಗಿದೆ. ಅವರು ಇಂದು ಸ್ವಂತ ಕಟ್ಟಡಕ್ಕೆ ಹೋಗುತ್ತಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ ಎಂದರು.

- Advertisement -

ರಾಜ್ಯಸಭಾ ಸದಸ್ಯರಿಗೆ ಪ್ರತಿ ವರ್ಷ 5 ಕೋಟಿ ರೂ. ಹಣವನ್ನು ಸ್ಥಳೀಯ ಪ್ರದೇಶ ಅಭಿವೃದ್ದಿ ಯೋಜನೆಗೆ ಕೊಟ್ಟಿರುತ್ತಾರೆ . ಆ ಹಣ ಉತ್ತಮ ಕೆಲಸಕ್ಕೆ ಉಪಯೋಗವಾಗುವಂತೆ ನೋಡಿಕೊಳ್ಳುವುದು ನಮ್ಮ ಕರ್ತವ್ಯವಾಗಿದ್ದು, ರಾಜ್ಯದ 40 ಸಂಸದರಲ್ಲಿ ಉತ್ತಮ ಕಾರ್ಯ ನಿರ್ವಹಣೆ ಹಾಗೂ ಅನುದಾನ ಬಳಕೆಯಲ್ಲಿ ನಾನು 1ನೇ ಸ್ಥಾನದಲ್ಲಿದ್ದೇನೆ ಹಾಗೂ ದೇಶದ ಬಿಜೆಪಿಯ 400 ಸಂಸದರಲ್ಲಿ 63ನೇ ಸ್ಥಾನದಲ್ಲಿ ಇದ್ದೇನೆ. ನನ್ನ ಕಾರ್ಯನಿರ್ವಹಣೆ ನನಗೆ ಸಂತೋಷವನ್ನು ನೀಡಿದ್ದು ಸಮಾಜದಲ್ಲಿ ಶೋಷಿತರ ಕೈ ಹಿಡಿದು ನಡೆಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಸ್ ಸಂಸ್ಥೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತೆ ಸೀತವ್ವ ಜೋಡಟ್ಟಿ , ರಾಮಣ್ಣ ಹುಕ್ಕೇರಿ, ಸುರೇಶ ಪಾಟೀಲ, ರಾಜು ಕತ್ತಿ, ಸಚಿನ ಖಡಬಡಿ, ಜಿ.ಎಸ್.ರಜಪೂತ, ಮಹಾಂತೇಶ ಊದಗಟ್ಟಿಮಠ, ಕಾಡಪ್ಪ ಕರೋಶಿ, ಆನಂದ ಪೂಜೇರಿ, ಹಾಲಪ್ಪ ಕರಿಗಾರ, ರಾಮಣ್ಣ ದೇಮನ್ನವರ, ಮಲ್ಲಪ್ಪ ಹುಕ್ಕೇರಿ, ಪರಪ್ಪ ಗಿರೆಣ್ಣನವರ ಉಪಸ್ಥಿತರಿದ್ದರು.

- Advertisement -
- Advertisement -

Latest News

ಎಮ್ಮೆ ತಮ್ಮನ ಕಗ್ಗದ ತಾತ್ಪರ್ಯ

  ಉಪ್ಪಿಷ್ಟು ಹುಳಿಯಿಷ್ಟು ಸಿಹಿಯಿಷ್ಟು ಖಾರಿಷ್ಟು ಸೇರಿದರೆ ಬಹಳರುಚಿ ಮಾಡಿದಡಿಗೆ ಅಳುನಗುವು ಸುಖದುಃಖ ನೋವ್ನಲಿವು ಸೇರಿದರೆ ಅನುಭಾವದಡಿಗೆ ರುಚಿ - ಎಮ್ಮೆತಮ್ಮ ಶಬ್ಧಾರ್ಥ ಅನುಭಾವ = ಅತೀಂದ್ರಿಯವಾದ ಅನುಭವ ತಾತ್ಪರ್ಯ ನಾವು ಮಾಡುವ ಅಡಿಗೆಯಲ್ಲಿ ಷಡ್ರಸಗಳಾದ ಉಪ್ಪು...
- Advertisement -

More Articles Like This

- Advertisement -
close
error: Content is protected !!
Join WhatsApp Group