spot_img
spot_img

ಶಿಕ್ಷಕರ ಬೇಡಿಕೆಗಳಿಗಾಗಿ ಭಾರತ ಯಾತ್ರೆ

Must Read

- Advertisement -

ಮೂಡಲಗಿ: ಅಖಿಲ ಭಾರತ ಶಿಕ್ಷಕರ ಫೆಡರೇಶನ್ ವತಿಯಿಂದ ಶಿಕ್ಷಕರ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಭಾರತ ಯಾತ್ರೆಯು ಕನ್ಯಾಕುಮಾರಿಯಿಂದ ಪ್ರಾರಂಭವಾಗಿ ಕರ್ನಾಟಕದ ಬೀದರ್ ಜಿಲ್ಲೆಯ ಹುಮನಾಬಾದ್ ಮೂಲಕ ಕರ್ನಾಟಕ ರಾಜ್ಯಕ್ಕೆ ಪ್ರವೇಶಿಸಿ, ಕಲಬುರ್ಗಿ, ಯಾದಗರಿ, ಜೇವರ್ಗಿ, ಸಿಂದಗಿ, ವಿಜಯಪೂರ, ಜಮಖಂಡಿ, ಅಥಣಿ ಮಾರ್ಗವಾಗಿ ಸೆ. 19 ರಂದು ರಾಯಬಾಗ ತಾಲೂಕಿನ ಹಾರೂಗೇರಿ ಕ್ರಾಸ್ ಬಳಿ ಆಗಮಿಸಿ ಬೃಹತ್ ಸಮಾವೇಶ ಜರುಗಲಿದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾ ಪ್ರಧಾನ ಕಾರ್ಯದರ್ಶಿ ಎಡ್ವಿನ್ ಪರಸನ್ನವರ ಹೇಳಿದರು.

ಗುರುವಾರದಂದು ಪಟ್ಟಣದ ಬಿಇಒ ಕಾರ್ಯಾಲಯದಲ್ಲಿ ಜರುಗಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಿಕ್ಷಕರ ಬಹು ಬೇಡಿಕೆಗಳಾದ ಹೊಸ ಪಿಂಚಣಿ ಬದಲಾಗಿ ಹಳೆ ಪಿಂಚಣಿ ಜಾರಿ, ನೂತನ ಶಿಕ್ಷಣ ನೀತಿಯಲ್ಲಿಯ ಲೋಪದೋಷಗಳನ್ನು ಕೈ ಬಿಡುವದು, ಅತಿಥಿ ಶಿಕ್ಷಕರ ಬದಲಾಗಿ ಖಾಯಂ ಶಿಕ್ಷಕರ ನೇಮಕಾತಿ, ರಾಷ್ಟ್ರದ ಎಲ್ಲಾ ನೌಕರರಿಗೆ ಭೇದ-ಭಾವವಿಲ್ಲದೆ ಏಕರೂಪದ ವೇತನ ಜಾರಿಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರ ವ್ಯಾಪ್ತಿಯಲ್ಲಿ ಜರುಗುವ ಭಾರತ ಯಾತ್ರೆಯ ಬೈಕ್ ರ್ಯಾಲಿ ಹಾಗೂ ಸಮಾವೇಶದ ಹಾರೂಗೇರಿ ಪಟ್ಟಣದಲ್ಲಿ ಸೆ. 19ರ ಮ. 1-00 ಗಂಟೆಗೆ ಎಲ್ಲ ನೌಕರರು ಪಾಲ್ಗೊಳ್ಳಲು ಕರೆ ನೀಡಿದರು.

ಭಾರತ ಯಾತ್ರೆ ಸಮಾವೇಶದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧ್ಯಕ್ಷ ಸಿದ್ರಾಮ ಲೋಕನ್ನವರ ಮಾತನಾಡಿ, ಸರಕಾರಿ ಶಾಲೆಗಳು ಸಬಲಿಕರಣದ ಜೊತೆಯಲ್ಲಿ ಉತ್ತಮ ತಂತ್ರಾಂಶವುಳ್ಳ ಬೋಧನಾ ಕೌಶಲ್ಯಗಳನ್ನು ಅಳವಡಿಸಿಕೊಂಡು ಉತ್ತಮ ಶಿಕ್ಷಣ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರವಹಿಸಬೇಕು. ನೌಕರರು ಆರ್ಥಿಕವಾಗಿ ಸಬಲರಾಗಲು ಹಾಗೂ ನಿವೃತ್ತಿಯ ನಂತರದ ಬದುಕಿನಲ್ಲಿ ನಿಶ್ಚಿತ ಪಿಂಚಣಿಯೊಂದಿಗೆ ವಿಶ್ರಾಂತ ಜೀವನ ಅವರದಾಗಬೇಕಾದರೆ ಹಳೇ ಪಿಂಚಣಿ ಯೋಜನೆ ಅತ್ಯಾವಶ್ಯಕವಾಗಿದೆ. ಇಂದಿನ ಗಂಭೀರ ವಿಷಯಗಳಾದ ಆರೋಗ್ಯ, ಹಿರಿಯರ ಹಾಗೂ ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ಮುಂತಾದ ಸಾಮಾಜಿಕ ವ್ಯವಸ್ಥೆಯಲ್ಲಿ ಬದಕಲು ಆರ್ಥಿಕ ಭದ್ರತೆ ಅವಶ್ಯಕವಾಗಿದೆ. ನೌಕರರಿಗೆ ಪ್ರಮುಖವಾಗಿ ನಿವೃತ್ತಿ ವೇತನದ ಭರವಸೆಯಿಂದಾಗಿ ನೆಮ್ಮದಿಯ ಬದಕು ಕಟ್ಟಿಕೊಳ್ಳಬಹುದಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

- Advertisement -

ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ವಾಯ್ ಎಸ್ ಬುಡ್ಡಗೋಳ, ಸಂಘಟನಾ ಕಾರ್ಯದರ್ಶಿ ಸಿ.ಆರ್ ಪೂಜೇರಿ, ತಾಲೂಕಾಧ್ಯಕ್ಷ ಎಲ್ ಎಮ್ ಬಡಕಲ್, ಬಿ.ಬಿ ಕೇವಟಿ, ಎಮ್.ವಾಯ್ ಸಣ್ಣಕ್ಕಿ, ಬಿ.ಎ ಡಾಂಗೆ,  ಎನ್.ಜಿ ಹೆಬ್ಬಳ್ಳಿ, ಎಸ್.ಎ ಕುರಣಗಿ, ಕೆ.ಎಲ್ ಮೀಶಿ, ಪಿ.ಬಿ ಕುಲಕರ್ಣಿ, ಗೋವಿಂದ ಸಣ್ಣಕ್ಕಿ, ಹಣಮಂತ ದಡ್ಡಿಮನಿ, ಎಲ್.ಎಮ್ ಬೂಮನ್ನವರ, ವಾಯ್.ಡಿ ಜಲ್ಲಿ, ಎಸ್.ಎಸ್ ಪಾಟೀಲ ಹಾಗೂ ನೌಕರರ ವಿವಿಧ ಸಂಘಟನೆಯ ಪದಾಧಿಕಾರಿಗಳು ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಕಿನ್ನರಿ ಬ್ರಹ್ಮಯ್ಯ ........................................... 12ನೇ ಶತಮಾನದ ಬಸವಾದಿ ಶಿವಶರಣರ ಕೀರ್ತಿವಾರ್ತೆಯನ್ನು ಕೇಳಿ ಪ್ರಭಾವಿತರಾಗಿ ನಾಡು ಹೊರನಾಡಿನಿಂದ ಅನೇಕ ಜನ ಶರಣರು ಕಲ್ಯಾಣಕ್ಕೆ ಬರಹತ್ತಿದರು. ಬಸವಣ್ಣನವರ ಸಮಕಾಲೀನರಾಗಿದ್ದ ಶರಣರಾದ ಗುಜರಾತದಿಂದ...
- Advertisement -

More Articles Like This

- Advertisement -
close
error: Content is protected !!
Join WhatsApp Group