ಮನೆ ಮನಂಗಳಲ್ಲಿ ಬಾವಪೂಜೆ

Must Read

ಬೆಳಗಾವಿ- ಲಿಂಗಾಯತ ಸಂಘಟನೆ  ಮಹಾಂತೇಶ ನಗರ ಬೆಳಗಾವಿ ಇವರು ದಿನಾಂಕ 23 ರಂದು ಬಾಳಗೌಡ ದೊಡ್ಡಬಂಗಿ ಅವರ ಮನೆಯಲ್ಲಿ ಬಸವ ಬಾವಪೂಜೆ ನೆರವೇರಿಸಿದರು.

ಅಧ್ಯಕ್ಷತೆಯನ್ನು ಈರಣ್ಣಾ ದೇಯಣ್ಣವರ ವಹಿಸಿದ್ಧರು. ಸತೀಶ ಸವದಿಯವರು ಮಾನವ ಜನ್ಮ ಕ್ಕೆ ಬಂದ ಮೇಲೆ ಅದರಲ್ಲೂ ಶ್ರಾವಣ ಮಾಸದಲ್ಲಿ ಆಲಿಸುವ ಕ್ರಿಯೆ ಪ್ರವಚನ ಕೇಳಬೇಕು.ಕೈಲಾದ ಸಹಾಯ ಸಹಕಾರ ಮನೋಭಾವ ಬೆಳೆಸಿಕೊಳ್ಳಬೇಕು. ನಾವು ಆಡುವ ಮಾತಿಗೂ ಕೃತಿಗೂ ಹತ್ತಿರವಿರಬೇಕು ಎಂದರು

ಶರಣ ಪರುಶೆಟ್ಟಿಯವರು.ದಿನಾಲೂ ಬೇಗ ಏಳುವ ಕಾಯಕ ಮಾಡುವ,ಪ್ರವೃತ್ತಿ ಬೆಳೆಸಿಕೊಳ್ಳಲು ತಿಳಿಸಿದರು.ಡಿ ಎಸ್ ಪೂಜಾರ ಅವರು ಲಿಂಗ ಹಾಗೂ ಕಣ್ಣಿನ ಗುಡ್ಡೆ ಕಪ್ಪಾದ ಭಾಗ ನೇರ ನೋಟದ ಬಗೆಗೆ ತಿಳಿಸಿದರು. ಮಜಲಟ್ಟಿ ಭಜನಾ ಮಂಡಳಿಯಿಂದ ಭಜನೆ ನಡೆಸಿಕೊಟ್ಟರು.ಬಾಳಗೌಡ ದೊಡಬಂಗಿ ಸ್ವಾಗತಿಸಿದರು. ಸುರೇಶ ನರಗುಂದ ನಿರೂಪಿಸಿದರು ಶರಣೆ ಮಹಾದೇವಿ ಅರಳಿ ಪ್ರಾಥ೯ನೆ ನಡಿಸಿಕೊಟ್ಟರು.ನೇತ್ರಾ ಕೆಂಪಣ್ಣ ರಾಮಾಪೂರಿ,ಭಾಗ್ಯ ದೇಯನ್ನವರ, ಅರವಿಂದ ಪರು ಶೆಟ್ಟಿ,ಶಿವಾನಂದ ನಾಯಕ, ಬಸವರಾಜ ಬಿಜ್ಜರಗಿ, ಮಹಾನಂದಾ ಪರುಶೆಟ್ಟಿ, ಮುಕ್ತಾ ದೇಯನ್ನವರ,ಉಣಕಲ ರಮೇಶ ಬಾಗೇವಾಡಿ, ಶಿವಾನಂದ ತಲ್ಲೂರ, ಸಂಗಮೇಶ ಅರಳಿ ಶರಣಶರಣೆಯರು ಉಪಸ್ಥಿತರಿದ್ದರು. ಮಂಗಲದೊಂದಿಗೆ ಮುಕ್ತಾವಾಯಿತು.

Latest News

ಕವನ : ಶ್ರದ್ಧೆ

ಶ್ರದ್ಧೆಶ್ರದ್ಧೆ ಎಂದರೆ ಕೇವಲ ನಂಬಿಕೆ ಅಲ್ಲ, ಸಾಧನೆಯ ಕೀಲಿ ಕೈ ಆಗಿದೆಯಲ್ಲ ಹೃದಯದಿಂದ ಹೊಮ್ಮುವ ಶಕ್ತಿ ಎಲ್ಲ ಕಣ್ಣಿಗೆ ಕಾಣದ ಅದ್ಭುತ ಅನುಭವದ ಬೆಲ್ಲ ಹೆಜ್ಜೆಗೆ ದಿಕ್ಕು ತೋರುವ ಬೆಳಕ ಸಾಧನೆಯ ಹಾದಿಯ...

More Articles Like This

error: Content is protected !!
Join WhatsApp Group