spot_img
spot_img

ಗುರ್ಲಾಪೂರ ಪ್ರವಾಸಿ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ

Must Read

spot_img
- Advertisement -

ಮೂಡಲಗಿ: ಮೂಡಲಗಿ ಮತ್ತು ಗುರ್ಲಾಪೂರ ಹಾಗೂ ವಿವಿಧ ಗ್ರಾಮಸ್ಥರ ಹಲವಾರು ದಿನಗಳ ಬೇಡಿಕೆಯಂತೆ ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿಶೇಷ ಅನುದಾನ ಮಂಜೂರ ಮಾಡಿಸಿ ಗುರ್ಲಾಪೂರ ಪ್ರವಾಸಿ ಮಂದಿರದಲ್ಲಿ ನೂತನ 4.45 ಕೋಟಿ ರೂಪಾಯಿ ವೆಚ್ಚದಲ್ಲಿ  ಸುಸಜ್ಜಿತವಾದ ಎರಡು ಅಂತಸ್ತಿನ ಕಟ್ಟಡವನ್ನು ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎಂದು ಯುವ ನಾಯಕ ಸರ್ವೊತ್ತಮ ಜಾರಕಿಹೊಳಿ ಹೇಳಿದರು.

ಅವರು ಗುರುವಾರದಂದು ಮುಡಲಗಿ ಪುರಸಭೆ ವ್ಯಾಪ್ತಿಯ ಗುರ್ಲಾಪೂರ ಪ್ರವಾಸ ಮಂದಿರದಲ್ಲಿ ನೀರಾವರಿ ಯೋಜನೆಯಡಿಯಲ್ಲಿ ಸುಮಾರು 4.45 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಮಹಡಿಯ ನೂತನ ಕಟ್ಟಡದ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪ್ರವಾಸಿ ಮಂದಿರದಲ್ಲಿ ಪ್ರವಾಸಿಗರಿಗೆ, ಗಣ್ಯರಿಗೆ, ವಿವಿಧ ಸರಕಾರಿ ಅಧಿಕಾರಿಗಳಿಗೆ ಸಭಾ ಭವನ, ಎರಡು ಗಣ್ಯರ ಕೊಠಡಿ ಮತ್ತು ನಾಲ್ಕು ವಿಶ್ರಾಂತಿ ಗ್ರಹ ನಿಮಾರ್ಣವಾಗಿ ಎಲ್ಲರಿಗೂ ಅನುಕೂಲವಾಗಲ್ಲಿದೆ ಎಂದರು.

- Advertisement -

ಕೆ.ಎಮ್.ಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿಯವರು ಕೆ.ಎಮ್.ಎಫ್ ಕೆಲಸದಲ್ಲಿ ತೊಡಗಿದರು ಕೂಡಾ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಲ್ಲಬಾರದು ಎಂದು ಗ್ರಾಮದ ಎಲ್ಲ ಜನಪ್ರತಿನಿಧಿಗಳು, ಮುಖಂಡರು ಮತ್ತು ಎನ್.ಎಸ್.ಎಫ್ ತಂಡದವರು ಸೇರಿ ಅಭಿವೃಧಿ ಕಾರ್ಯಗಳನ್ನು ಮುಂದುವರಿಸಬೇಕು ಎಂದು ಸೂಚಿಸಿದ್ದಾರೆ. ಅದರಂತೆ ಮೂಡಲಗಿ ತಾಲೂಕು ಮತ್ತು ಅರಭಾವಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ ಎಂದರು.

ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ ಮಾತನಾಡಿ, ಗುರ್ಲಾಪೂರ ಪ್ರವಾಸಿ ಮಂದಿರ ಬ್ರಿಟೀಷರ ಕಾಲದಲ್ಲಿ ನಿಮಾರ್ಣವಾದ ಪ್ರವಾಸಿ ಮಂದಿರವಾಗಿದ್ದರಿಂದ ಅಭಿವೃದ್ಧಿ ಪಡಿಸುವ ಸಲುವಾಗಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಶಾಸಕರ ಬಳಿ ಹೇಳಿದ್ದಾಗ ವಿಶೇಷ ಅನುದಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡಿದ್ದು ಎಲ್ಲ ಸಾರ್ವಜನಿಕರಿಗೆ ಸಂತಸ ತಂದಿದೆ. ಇನ್ನೂ ಮುಂದಿನ ದಿನಗಳಲ್ಲಿ ಶಾಸಕರು ಪ್ರವಾಸಿ ಮಂದಿರವನ್ನು ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಲಿದ್ದಾರೆ.

ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಕಾ.ನಿ. ಅಭಿಯಂತರ ಶೇಖರ ರಾಠೋಡ, ಪುರಸಭೆ ಸದಸ್ಯರಾದ ಸಂತೋಷ ಸೋನವಾಲ್ಕರ, ಆನಂದ ಟಪಾಲದಾರ, ಯಲ್ಲವ್ವ ಹಳ್ಳೂರ, ಶಿವಾನಂದ ಚಂಡಕಿ, ರವಿ ಸಣ್ಣಕ್ಕಿ, ಪಾಂಡು ಮಹೇಂದ್ರಕರ, ಸುಭಾಷ ಸಣ್ಣಕ್ಕಿ, ಸಿದ್ದಪ್ಪ ಮಗದುಮ್, ಹುಸೇನ ಶೇಖ ಮುಖಂಡರಾದ ಬಿ ಸಿ ಮುಗಳಖೋಡ, ಆರ್.ಪಿ.ಸೋನವಾಲ್ಕರ,  ಆರ್.ಬಿ.ನೇಮಗೌಡ, ವಿ.ಆರ್.ನೇರ್ಲಿ, ಕೆ.ಆರ್.ದೇವರಮನಿ, ಮಲ್ಲಪ್ಪ ನೇಮಗೌಡ, ಮಹಾದೇವ ಮುಕುಂದ, ಡಿ.ಎಮ್.ಮುಗಳಖೋಡ, ಈರಪ್ಪ ಮುಗಳಖೋಡ, ನಾಗಪ್ಪ ಹಳ್ಳೂರ, ಮಹಾದೇವ ರಂಗಾಪೂರ, ಎ ಜಿ ಶರಣಾಥಿ, ಶಿವಾನಂದ ಮುಗಳಖೋಡ, ಪ್ರಕಾಶ ಮುಗಳಖೋಡ, ರಾಜು ಕುಲಗೋಡ, ಲಕ್ಷ್ಮಣ ಗೌರಾಣಿ, ಮಲ್ಲಿಕಾರ್ಜುನ ಕಬ್ಬೂರ, ಮಲ್ಲಿಕಾರ್ಜುನ ಯಕ್ಷಂಬಿ, ಹಣಮಂತ ತೇರದಾಳ, ಮರೇಪ್ಪ ಮರೇಪ್ಪಗೊಳ, ಅನ್ವರ್ ನಧಾಫ್, ಡಾ.ಎಸ್.ಎಸ್.ಪಾಟೀಲ್, ಸಿದ್ದು ದುರದುಂಡಿ, ಸುಧಾಕರ ಶೆಟ್ಟಿ, ಶಿವಾನಂದ ಹಿರೇಮಠ ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಜೀವನದಲ್ಲಿ ಶಿಕ್ಷಣದಂತೆ ಸಂಸ್ಕಾರ ಕೂಡಾ ಅಷ್ಟೇ ಅವಶ್ಯಕವಾಗಿದೆ -ಮುಕುಂದ ಮಹಾರಾಜರು

ಮೂಡಲಗಿ:-ಪ್ರತಿಯೊಬ್ಬರಿಗೂ ಶಿಕ್ಷಣ ಎಷ್ಟು ಅವಶ್ಯಕವಾಗಿದೆಯೋ,ಸಂಸ್ಕಾರ ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಮುಕುಂದ ಮಹಾರಾಜರು ಹೇಳಿದರು. ತಾಲೂಕಿನ ಗುಜನಟ್ಟಿ ಗ್ರಾಮದ ಶ್ರೀ ಮಾಧವಾನಂದ ಕನ್ನಡ ಕಿರಿಯ ಪ್ರಾಥಮಿಕ ಶಾಲೆಯ...
- Advertisement -

More Articles Like This

- Advertisement -
close
error: Content is protected !!
Join WhatsApp Group