ಮಸಗುಪ್ಪಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ

Must Read

ಮೂಡಲಗಿ: ತಾಲೂಕಿನ ಮಸಗುಪ್ಪಿ ಗ್ರಾಮದಲ್ಲಿ ೮೦ ಲಕ್ಷ ರೂ. ಯೋಜನೆಯ ಸಂಕೇಶ್ವರ-ಸoಗಮ ರಸ್ತೆಯ ಅಭಿವೃದ್ಧಿಗೆ ಲೋಕೋಪಯೋಗಿ ಇಲಾಖೆಯಿಂದ ಭೂಮಿ ಪೂಜೆ ಕಾರ್ಯಕ್ರಮ ಜರುಗಿತು.

ಭೂಮಿ ಪೂಜೆ ನೆರವೇರಿಸಿದ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಮಾತನಾಡಿ, ಮೂಡಲಗಿ ತಾಲೂಕು ಮತ್ತು ಅರಭಾಂವಿ ಕ್ಷೇತ್ರದಲ್ಲಿ ಜನಸಾಮಾನ್ಯರಿಗೆ ಹಾಗೂ ವಾಹನ ಸವಾರರಿಗೆ ಸುಗಮ ಸಂಚಾರಕ್ಕೆ ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಸರಕಾರದಿಂದ ವಿವಿಧ ಯೋಜನೆಯಡಿ ಅನುದಾನವನ್ನು ಬಿಡುಗಡೆಗೊಳಿಸಿ ರಸ್ತೆಗಳನ್ನು ಅಭಿವೃದ್ಧಿ ಪಡಿಸುತ್ತಿದ್ದಾರೆ ಎಂದರು.

ಮೂಡಲಗಿ ತಾಲೂಕಾ ಭೂ ನ್ಯಾಯ ಮಂಡಳಿ ಸದಸ್ಯ ಸಂಜು ಹೊಸಕೋಟಿ ಮಾತನಾಡಿ, ಕೆ.ಎಂ.ಎಫ್ ಅಧ್ಯಕ್ಷ ಹಾಗೂ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅರಭಾವಿ ಮತಕ್ಷೇತ್ರದಲ್ಲಿ ಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ಶೈಕ್ಷಣಿಕ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶಾಸಕರ ಆಪ್ತ ಸಹಾಯಕ ಸಿ.ಪಿ.ಯಕ್ಷಂಬಿ, ಗೋಕಾಕ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಅಪ್ಪಯ್ಯಾ ಬಡ್ನಿಂಗೋಳ, ಮಸಗುಪ್ಪಿ ಗ್ರಾ.ಪಂ ಅಧ್ಯಕ್ಷೆ ಶಾಂತವ್ವ ತಿಗಡಿ, ಉಪಾಧ್ಯಕ್ಷ ದುಂಡಪ್ಪ ಪಂತೋಜಿ, ಸದಸ್ಯರಾದ ಬಸವರಾಜ ಬುಜನ್ನವರ, ಹನಮಂತ ಕುಲಕರ್ಣಿ, ಪಾಂಡುರoಗ ಪಾಟೀಲ, ಸಾತಪ್ಪ ಕೊಳದುರ್ಗಿ, ಪತ್ರಯ್ಯಾ ಚರಂತಿಮಠ, ಸಂಜಯ ಹೊಕೋಟಿ, ಭರಮಪ್ಪ ಅಶಿರೊಟ್ಟಿ, ಬಾಳಪ್ಪ ತಿಗಡಿ, ವಿಠ್ಠಲ ಹೊಸುರ, ಕೆಂಚಪ್ಪ ಶಿಂತ್ರಿ, ರಾಮಪ್ಪ ಗಂಗಣ್ಣವರ, ಬಂದುಸಾಬ ನದಾಫ್, ಲಕ್ಷ್ಮಣ ನರಗುಂದ, ಪಾಂಡು ಮಳಲಿ, ಆನಂದ ಹೊಸಕೋಟಿ, ಕೃಷ್ಣಾ ಅಶಿರೋಟ್ಟಿ, ಮುರಿಗೆಪ್ಪ ಗಾಡವಿ, ಅಶೋಕ ಮಳಲಿ, ಪಿಡಿಓ ಆರ್.ಎನ್.ಗುಜನಟ್ಟಿ, ಎಸ್.ಎ.ಮುರಗೋಡ ಮತ್ತಿತರರು ಇದ್ದರು.

Latest News

ಸಾಹಿತ್ಯಕ್ಕೆ ಬದುಕು ಬದಲಿಸುವ ಶಕ್ತಿಯಿದೆ: ಡಾ.ಸುನಂದಾ

ಜಮಖಂಡಿ: ಸೃಜನಶೀಲ ಸಾಹಿತ್ಯಕ್ಕೆ ನಾಡು ಕಟ್ಟುವ ಮತ್ತು ನಾಡಿನ ಜನರ ಬದುಕು ಬದಲಿಸುವ ಶಕ್ತಿಯಿದೆ. ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ದಿಸೆಯಲ್ಲಿ ಕೊಕ್ಕನವರ ಅಕಾಡೆಮಿ...

More Articles Like This

error: Content is protected !!
Join WhatsApp Group