ಬೀದರ್ – ಜಿಲ್ಲೆಯ ಹುಲಸೂರ ತಾಲೂಕಿನ ಬೇಲೂರು ಗ್ರಾಮ ಪಂಚಾಯಿತಿಯ ದಿವ್ಯ ನಿರ್ಲಕ್ಷ್ಯತನದಿಂದಾಗಿ ಇಲ್ಲಿನ ಅಂಗನವಾಡಿ ಕೇಂದ್ರದ ಮೇಲ್ಛಾವಣಿ ಕುಸಿದಿದ್ದು ಮಕ್ಕಳಿಗೆ ಇದ್ದು ಇಲ್ಲದಂತಾಗಿದೆ ಅಂಗನವಾಡಿ ಕೇಂದ್ರ.
ಅಂಗನವಾಡಿಯ ಮೇಲ್ಚಾವಣಿ ಕುಸಿದು ವರ್ಷಗಳೆ ಕಳೆದರೂ ಸಂಬಂಧವೇ ಇಲ್ಲದಂತೆ ಕುಳಿತ ಬೇಲೂರು ಗ್ರಾಮ ಪಂಚಾಯಿತಿಯಿಂದಾಗಿ ಈಗ ಮೇಲ್ಛಾವಣಿ ಕುಸಿದಿದೆ.
ಈಗ ಮಳೆಗೆ ಅಂಗನವಾಡಿ ಕೇಂದ್ರದ ಛಾವಣಿ ಸೋರುತ್ತಿದ್ದು ಎಲ್ಲಡೆ ನೀರು ನಿಲ್ಲುತ್ತಿದೆ.
ಹಲವು ಬಾರಿ ಗ್ರಾಮಸ್ಥರು ಗ್ರಾಮ ಪಂಚಾಯಿತಿಗೇ ಮನವಿ:
ಅಂಗನವಾಡಿಯ ಮೆಲ್ಚಾವಣಿ ಸರಿಪಡಿಸದೆ ಪಂಚಾಯಿತಿಯಲ್ಲಿ ದುಡ್ಡಿಲ್ಲ ಎಂದು ದರ್ಪ ಮೆರೆಯುತ್ತಿರುವ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮೆಲ್ಚಾವಣಿ ಸರಿಪಡಿಸದೇ ನಿರ್ಲಕ್ಷ್ಯ ವಹಿಸರುವ ಕಾರಣ ಅಂಗನವಾಡಿಯನ್ನು ಬೇರೆ ಕಡೆ ಸ್ಥಳಾಂತರಿಸಿದ ಹಿನ್ನೆಲೆ ಮಕ್ಕಳಿಗೆ ಊಟದ ವ್ಯವಸ್ಥೆಗೆ ತೊಂದರೆಯಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ಸದರಿ ಅಂಗನವಾಡಿ ಕೇಂದ್ರವನ್ನು ಆದಷ್ಟು ಬೇಗ ದುರಸ್ತಿ ಮಾಡಬೇಕು ಇಲ್ಲದಿದ್ದರೆ ಪಂಚಾಯಿತಿಯ ಮುಂದೆ ಧರಣಿ ಮಾಡಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ