Bidar: ತಂದೆಯಿಂದಲೆ ಅಪ್ರಾಪ್ತೆ ಮಗಳ ಮೇಲೆ ನಿರಂತರ ಅತ್ಯಾಚಾರ

0
646

ಬೀದರ – ಹಡೆದ ತಂದೆಯೇ 12 ವಯಸ್ಸಿನ ಪುಟ್ಟ ಕಂದಮ್ಮನ ಮೇಲೆ ಒಂದು ವರ್ಷದಿಂದ ನಿರಂತರ ಅತ್ಯಾಚಾರ ನಡೆಸುತ್ತ ಬಂದಿರುವ ಆಘಾತಕಾರಿ ಪ್ರಕರಣ ವರದಿಯಾಗಿದೆ.

ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗ್ರಾಮವೊಂದರಲ್ಲಿ ಮನುಕುಲವೆ ತಲೆ ತಗ್ಗಿಸುವಂಥ ಈ ಕೃತ್ಯ ನಡೆದಿದ್ದು, ರಾತ್ರಿ ಹೊತ್ತಿನಲ್ಲೆ ಮನೆಯಲ್ಲಿ ಎಲ್ಲರು ಮಲಗಿದ್ದಾಗ ಬಾಲಕಿಯ ಬಾಯಿ ಮುಚ್ಚಿ ಅತ್ಯಾಚಾರ ಎಸಗುತ್ತಿದ್ದ ಪಾಪಿ ತಂದೆ ವಿಠ್ಠಲ ಮೆತ್ರೆ ಎನ್ನಲಾಗಿದೆ.

ನೊಂದ ಬಾಲಕಿ ತನ್ನ ಅಮ್ಮನಿಗೆ ಈ ವಿಷಯ ತಿಳಿಸಿದ್ದರೂ ಈ ದುಷ್ಕರ್ಮಿ ಹೆಂಡ್ತಿಯನ್ನು ಥಳಿಸಿ ಗಲಾಟೆ ಮಾಡುತ್ತಿದ್ದನೆನ್ನಲಾಗಿದೆ.

ಮೊಹರಂ ಹಬ್ಬದ ಸಂದರ್ಭದಲ್ಲಿ ತನ್ನ ಕಾಮ ತೀಟೆ ತಿರಿಸಿಕೊಳ್ಳಲು ಬಾಲಕಿಯನ್ನು ಈ ದುರುಳು ತಂದೆ ಶಾಲೆ ಬಿಡಿಸಿ ಮನೆಯಲ್ಲೆ ಇಟ್ಟಕೊಂಡಿದ್ದ. ಅತ್ಯಾಚಾರದ ಸಮಯದಲ್ಲಿ ಮನೆಯವರಿಗೆ ಗೊತ್ತಾಗಿದ್ದು ಆತನ ಮೇಲೆ ದೂರು ದಾಖಲಾಗಿದೆ.

ಘಟನೆ ನಂತರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಡೆಸಿದ ಆಪ್ತ ಸಮಾಲೋಚನೆಯಲ್ಲಿ ಈ ಭಯಂಕರ ಸಂಗತಿ ಬಯಲಾಗಿದೆ. ಈ ಕುರಿತು ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಕ್ರೂರಿ ತಂದೆ ವಿಠ್ಠಲ್ ವಿರುದ್ಧ ಪ್ರಕರಣ ದಾಖಲಾಗಿದೆ.


ವರದಿ: ನಂದಕುಮಾರ ಕರಂಜೆ, ಬೀದರ