spot_img
spot_img

ಯೋಚನಾ ಸಂಪತ್ತಿನ ಬೆಲೆ

Must Read

- Advertisement -

ನಾವು ಇಂದು ಏನಾಗಿರುವೆವೋ ಅದು ನಮ್ಮ ಯೋಚನೆಗಳ ಮೊತ್ತವೇ ಹೊರತು ಮತ್ತೇನೂ ಅಲ್ಲ. ನಾವು ಆಲೋಚಿಸುವ ರೀತಿಯು ಬದುಕಿನಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ನಾವು ಎಂಥ ವ್ಯಕ್ತಿ ಆಗಬೇಕೆಂದು  ಬಯಸುತ್ತೇವೆಯೋ ಅದೇ ರೀತಿಯ ವ್ಯಕ್ತಿಯಾಗಲು ಖಂಡಿತ ಸಾಧ್ಯ. ಅಂದರೆ ಸುಂದರ ಜೀವನದ ನಾವಿಕರು ನಾವಾಗಬೇಕೆಂದರೆ ಸಕಾರಾತ್ಮಕ ಯೋಚನಾ ಲಹರಿಯ ಉತ್ಪಾದಕರಾಗಿರಬೇಕು. ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ನನಗೆ ವಿಶ್ವಾಸವಿದೆಯೆಂದು ತಿಳಿಯುವುದಾದರೆ ಅದು ಕ್ರಮೇಣ ಬಲಗೊಂಡು ನಂಬಿಕೆಯಾಗಿ ಬದಲಾಗುತ್ತದೆ. ಮಾಡುವ ಯೋಚನಾ ಸಂಪತ್ತಿನ ಬೆಲೆ ಸಣ್ಣದು ದೊಡ್ಡದು ಎನ್ನುವುದು ಕಾಲಾಂತರದಲ್ಲಿ ತಿಳಿಯುತ್ತದೆ. ಅದನ್ನು ಕಾರ್ಯನುಷ್ಠಾನಕ್ಕೆ ತರಲು ಶ್ರದ್ಧೆ ಮನಸ್ಸು ಹಾಗೂ ನಮ್ಮ ಕಳಕಳಿಯು ಎಷ್ಟರ ಮಟ್ಟಿಗಿದೆ ಎಂಬುದು ನಿರ್ಧರಿಸುತ್ತದೆ..

ಧೈರ್ಯ, ಭಯ, ಸುಖ, ದುಃಖ, ನಗೆ, ಕಣ್ಣಿರು, ಸಂದೇಹ, ನಂಬಿಕೆ ಎಲ್ಲ ಭಾವನೆಗಳೂ ಯೋಚನೆಯ ಉತ್ಪನ್ನಗಳು. ಇಂದಿನ ಯೋಚನೆಗಳು ಭವಿಷ್ಯತ್ತಿನ ನಾಳೆಯನ್ನು ಕಟ್ಟುವ ಅಗಾಧ ಶಕ್ತಿಯನ್ನು ಹೊಂದಿವೆ. ಯದ್ಭಾವಂ ತದ್ಭವತಿ ಎಂಬುದು ನಿರ್ವಿವಾದದ ಸತ್ಯ. ಪರಿಪೂರ್ಣತೆಯ ಮೆರಗು ನೀಡಲು ಯೋಚನಾ ಲಹರಿಯನ್ನು ಪವಿತ್ರಗೊಳಿಸುವುದು ಅತ್ಯವಶ್ಯ. ಜಗಕೆ ಬೆಳಕು ನೀಡಿದ ಬುದ್ಧ,ಬಸವ, ಮಹಾವೀರ, ಏಸು  ಮಾನವತೆಯ ಕಲ್ಯಾಣಕ್ಕಾಗಿ ಯೋಚನೆಗಳನ್ನು ಹರಿ ಬಿಟ್ಟರು ಮತ್ತು ತಮ್ಮ ಜೀವನವನ್ನೇ ಧಾರೆಯೆರೆದರು. 

ಈಗಿನ ಕಾಲದಲ್ಲಿ ತಕ್ಷಣದ ಯಶಸ್ಸು, ಖುಷಿ ಸಿಗಬೇಕೆಂದು ಬಯಸುತ್ತ ಸ್ವಾರ್ಥ ಮೂಲದ ಯೋಚನೆಗಳನ್ನೇ ಹೆಚ್ಚು ಮಾಡುತ್ತಿದ್ದೇವೆ. ಇದು ಮಾನವೀಯತೆಯ ಅತ್ಯುಚ್ಛ ಸ್ವರೂಪವನ್ನು ನಾಶಗೊಳಿಸುತ್ತಿದೆ. ನೋವು ನಿರ್ಮಾಣ ಮಾಡುತ್ತಿದೆ. ಜೀವನವು ಸೇವೆ ಮಾಡಲು ಸಿಕ್ಕ ಒಂದು ಅವಕಾಶವೆಂದು ಯೋಚಿಸಿದರೆ ಆದರ್ಶದ ಮೇರು ಪರ್ವತವೇರಬಹುದು.ಸೌಖ್ಯದ ಜೀವನವೂ ತಾನೇ ಹುಡುಕಿಕೊಂಡು ಬರುತ್ತದೆ. ಯೋಚನಾ ಸಂಪತ್ತು ಸಾಮರಸ್ಯದ ಸಾರ ಸರ್ವಸ್ವವಾಗಿದೆ. ನೈತಿಕ ಮತ್ತು ಬೌದ್ಧಿಕ ಜಾಗೃತಿಗೆ ಯೋಚನೆಗಳೇ ಮೂಲ ಕಾರಣ. ನಿರಾಶಾವಾದದ ಯೋಚನೆಯು ದುರ್ಬಲತೆಯಲ್ಲಿ ಮುಳುಗಿಸುತ್ತದೆ. ಆಶಾವಾದವು ದಯೆ ಪ್ರೀತಿ ಸತ್ಯ ಕರುಣೆಯಂಥ ಗುಣಗಳನ್ನು ನಮ್ಮೊಳಗೆ ಅಳವಡಿಸಿಕೊಳ್ಳುವ ಆಸೆಯನ್ನು ವ್ಯಕ್ತ ಪಡಿಸುವಷ್ಟು ಪ್ರಬಲವಾಗಿರುತ್ತದೆ. ನಾವು ಸದಾ ಯಾವುದರ ಬಗ್ಗೆ ಆಲೋಚಿಸುತ್ತೇವೆಯೋ ಅದೇ ಆಗುತ್ತೇವೆ ಎಂಬುದು ದಿಟ. ಇದನ್ನು ಈಗಾಗಲೇ ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿಯ ಪ್ರಸಿದ್ಧಿ ಪಡೆದ ಜನ ಸಾಬೀತು ಪಡಿಸಿದ್ದಾರೆ. 

- Advertisement -

ಚೇತನಾದಾಯಕವಾದ ಯೋಚನೆಗಳ ದಾರಿಗೆ ಅಡ್ಡಲಾಗಿ ದಿವ್ಯ ನಿರ್ಲಕ್ಷ್ಯವನ್ನು ಮೆರೆದರೆ, ಮನುಷ್ಯನ ಮೃಗ ಸ್ವಭಾವಕ್ಕೆ ಪುಟಿ ಕೊಟ್ಟಂತಾಗುತ್ತದೆ. ಸದ್ವಿಚಾರಗಳ ಕೊರತೆಯೇ ಮಾನವೀಯತೆಯ ಬಲಿದಾನವೆಂಬುದು ವಿಚಿತ್ರವಾಗಿ ತೋರಬಹುದು. ಆದರೂ ಅದು ಅಕ್ಷರಶಃ ಸತ್ಯ. ಮಣ್ಣು ಕಲ್ಲಿನಂಥ ನಿರ್ಜೀವ ವಸ್ತುಗಳಿಗೆ ಜೀವ ತುಂಬುವ ಶಕ್ತಿ ಯೋಚನೆಗಳಿಗಿದೆ. ಸಜೀವ ವಸ್ತುಗಳಿಗೆ ಶಾಂತಿ, ಕಾಂತಿ, ಪ್ರೀತಿಯ ಬೆಳಕು ನೀಡುವ ಅನನ್ಯ ಗುಣ ಯೋಚನೆಗೆ ಮಾತ್ರ ಇದೆ. ಭೌತಿಕ ಶ್ರೀಮಂತಿಕೆಯನ್ನೇ ಸಂಪತ್ತು ಎಂದು ಯೋಚಿಸಿದವರೆಲ್ಲ ಮಣ್ಣಾದರು ಆದರೆ ಯೋಚನಾ ಸಂಪತ್ತನ್ನು ಬಳಸಿಕೊಂಡವರೆಲ್ಲ ವಿಶ್ವಕೆಲ್ಲ ವಿವೇಕ ನೀಡುತ್ತ ಅಮರತ್ವ ಸಾಧಿಸಿದರು.ಯೋಚನಾ ಲಹರಿ ಶುದ್ಧಗೊಳಿಸಿ, ಜೀವನ ಪಾವನವಾಗಿಸೋಣ.


ಜಯಶ್ರೀ.ಜೆ. ಅಬ್ಬಿಗೇರಿ

ಇಂಚರ

- Advertisement -

ಪ್ಲಾಟ್ ನಂ: 124

ಚಂದ್ರಮೌಳಿ ಕಾಲೋನಿ

ಕಣಬರ್ಗಿ ರಸ್ತೆ 

ಬೆಳಗಾವಿ -17

9449234142

- Advertisement -
- Advertisement -

Latest News

ಅಂಕೋಲೆಯ ಉಪ್ಪಿನ ಸತ್ಯಾಗ್ರಹಕ್ಕೆ ತೊಂಬತ್ನಾಲ್ಕು ವರ್ಷ

ಭಾರತದ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ ಬಹು ವರ್ಣರಂಜಿತ. ಈ ಬೃಹತ್ ಚರಿತ್ರೆಯಲ್ಲಿ ಅಂಕೋಲೆಗೆ ಒಂದು ಪ್ರತ್ಯೇಕ ಅಧ್ಯಾಯವೇ ಇದೆ. ಈ ಅಧ್ಯಾಯ ಒದಗಿ ಬಂದದ್ದು ಇಡೀ...
- Advertisement -

More Articles Like This

- Advertisement -
close
error: Content is protected !!
Join WhatsApp Group