ಬೀದರ: ಗಡಿ ಜಿಲ್ಲೆ ಹುಮ್ನಾಬಾದ್ ತಾಲೂಕಿನ ಹಳ್ಳಿಖೇಡ(ಬಿ) ಪಟ್ಟಣದ ಹಿಬಾರೆ ಹೈಟೇಕ್ ಕಿಡ್ಸ್ ಪ್ಲೇ ಶಾಲೆಯಲ್ಲಿ ಬಕ್ರೀದ್ ಹಾಗೂ ಆಶಾಢ ಏಕಾದಶಿಯ ನಿಮಿತ್ತ ಬುಧವಾರ ಮಕ್ಕಳಿಗೆ ಅವರ ಸಂಪ್ರದಾಯದಂತೆ ಉಡುಪುಗಳನ್ನು ಧರಿಸುವುದರ ಮುಖಾಂತರ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂಬ ನುಡಿಮಾತು ಹೇಳುತ್ತಾ ಪುಟಾಣಿ ಮಕ್ಕಳಲ್ಲಿ ಸೌಹಾರ್ದತೆಯನ್ನು ಮೂಡಿಸಲಾಯಿತು.
ಇಂದಿನ ಪ್ರಜಾಪ್ರಭುತ್ವದಲ್ಲಿ ಇಂತಹ ಚಟುವಟಿಕೆ ಅವಶ್ಯಕವಾಗಿವೆ ಶಾಲೆ ಒಂದು ಕುಟುಂಬ ಇದ್ದ ಹಾಗೆ ಅದರಲ್ಲಿ ಕಲಿತ ವಿದ್ಯಾರ್ಥಿ ಎಲ್ಲವನ್ನು ಸಮಾಜದಲ್ಲಿ ಸಾರುತ್ತಾನೆ, ಸೌಹಾರ್ದತೆ ಸಾರಲು ಇಂತಹ ಪ್ರಯತ್ನ ನಡೆಸುತ್ತಿರುವ ಹಿಬಾರೆ ಹೈಟೆಕ್ ಕಿಡ್ಸ್ ಪ್ಲೆ ಶಿಕ್ಷಣ ಸಂಸ್ಥೆಗೆ ಅಭಿನಂದಿಸಬೇಕಾದ ವಿಷಯವಾಗಿದೆ.
ಮುಖ್ಯ ಗುರುಗಳು ಶ್ರೀಮತಿ ನಿಲಿಮಾ ಜೋಶಿ, ಶಿಕ್ಷಕರಾದ ಶ್ರೀಮತಿ ಮಹಾನಂದ ಸೋಮಶೆಟ್ಟಿ, ಶ್ರೀಮತಿ ಗೀತಾ,ಶ್ರೀಮತಿ ರೇಣುಕಾ,ಶ್ರೀಮತಿ ಪೂಜಾ,ಶ್ರೀಮತಿ ಪದ್ಮಿನಿ,ಕುಮಾರಿ ರೂಪಾ, ಕುಮಾರಿ ನೀಲಾಂಬಿಕಾ, ಕುಮಾರಿ ಕಲ್ಯಾಣಿ ಹಾಗೂ ಅನೇಕ ಪಾಲಕರು ಉಪಸ್ಥಿತರಿದ್ದು ಸಂತೋಷ ವ್ಯಕ್ತಪಡಿಸಿದರು.