- Advertisement -
ಬೀದರ – ತವರು ಮನೆಗೆ ಬಂದಿದ್ದ ವಿವಾಹಿತ ಮಹಿಳೆಯೊಬ್ಬಳ ಶವವು ಭಾಲ್ಕಿ ತಾಲೂಕಿನ ಸಯೈಗಾಂವ ಗ್ರಾಮದ ಹೊರವಲಯದಲ್ಲಿ ಸಿಕ್ಕಿದ್ದು ಆಕೆಯ ಕೊಲೆಯಾಗಿದೆ ಎನ್ನಲಾಗಿದೆ.
ಕೊಲೆಯಾದ ಮನಿಶಾಳನ್ನು ಜಮಖಂಡಿಯ ಸಂತೋಷ ಎನ್ನುವವರಿಗೆ ವಿವಾಹ ಮಾಡಿ ಕೊಡಲಾಗಿತ್ತು. ಈಗ ಮೂರು ತಿಂಗಳಿಂದ ಮನಿಶಾ ತವರು ಮನೆಯಾದ ಸಯೈಗಾಂವ ಗ್ರಾಮದಲ್ಲಿ ಇದ್ದು ಹೊರಗೆ ಹೋಗಿ ಬರುತ್ತೇನೆ ಎಂದು ಹೋದವರು ರಾತ್ರಿಯಾದರೂ ಮನೆಗೆ ಬಾರದ ಕಾರಣ ಅವರ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದಾಗ ಗ್ರಾಮದ ಹೊರವಲಯದಲ್ಲಿ ಮನಿಶಾ ಕೊಲೆಯಾಗಿದ್ದು ಕಂಡುಬಂದಿದೆ.
ಮೇಹಕರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಜಾರಿಯಲ್ಲಿ ಇದೆ
- Advertisement -
ವರದಿ : ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ