ಸ್ಪಟಿಕದೊಳಗಣ ರತ್ನ – ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ

Must Read

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...

ಅರುಣ ಕಿರಣ ಪ್ರತಿದಿನ

. . .🕉. . . . || ಶ್ರೀ ಗುರುಭ್ಯೋ ನಮಃ || || ಓ೦ ಗ೦ ಗಣಪತಯೇ ನಮಃ || 🙏ಶುಭೋದಯ🙏 16: 06: 2021 ಬುಧವಾರ ಕಲಿಯುಗಾಬ್ದ...

ಟೈಮ್ಸ್ ಆಫ್ ಕರ್ನಾಟಕ ವರದಿಗೆ ಸ್ಪಂದನೆ ; ಅಕ್ರಮ ಮರಳು ದಂಧೆಯ ಬಗ್ಗೆ ಸ್ಪಷ್ಟೀಕರಣ ನೀಡಿದ ಎಸಿ

ಸಿಂದಗಿ: "ಅಕ್ರಮ ಮರಳು ಸಾಗಾಟ ನಿರಂತರ ; ಜಾಣ ಕುರುಡರಾದ ಅಧಿಕಾರಿಗಳು " ಎಂಬ ಶೀರ್ಷಿಕೆಯಲ್ಲಿ ನಮ್ಮ ಟೈಮ್ಸ ಆಫ್ ಕರ್ನಾಟಕ ವೆಬ್ ಪತ್ರಿಕೆಯಲ್ಲಿ ದಿ....

ಒಂದು ದೀಪದಿಂದ ಇನ್ನೊಂದು ದೀಪವನ್ನು ಹಚ್ಚಿದರೆ ಇನ್ನಷ್ಟು ಬೆಳಕನ್ನು ನೀಡಿದ ಹಾಗೆ. ಅದೇ ರೀತಿ ಒಬ್ಬರು ಇನ್ನೊಬ್ಬರಿಗೆ ತಮ್ಮಲ್ಲಿರುವ ಜ್ಞಾನ ಧಾರೆಯೆರೆದರೆ ಇಬ್ಬರ ಜ್ಞಾನವೂ ವೃದ್ಧಿಗೊಳ್ಳುತ್ತದೆ. ನಾವು ಪ್ರತಿಯೊಬ್ಬರಿಂದ ಕಲಿಯಬೇಕಾದುದು ಬಹಳಷ್ಟಿದೆ. ಸ್ಪಟಿಕದೊಳಗಣ ರತ್ನವಡಗಿದಂತೆ, ನಮ್ಮ ವ್ಯಕ್ತಿತ್ವ ನಮ್ಮ ಮಾನದಂಡವಾಗಿರಬೇಕು. ಅಂತರಂಗದ ತುಡಿತ ಕಾರ್ಯರೂಪದಲ್ಲಿರಬೇಕು. ದರ್ಪಣಕ್ಕೆ ದರ್ಪಣ ತೋರಿದಂತೆ ನಮ್ಮ ಕೆಲಸ ಕಾರ್ಯವಿರಬೇಕು ಅಲ್ಲವೇ.

ಇಷ್ಟೆಲ್ಲ ಪೀಠಿಕೆ ಏಕೆ ಅಂತ ನಿಮಗೆ ಅನ್ನಿಸಿರಬೇಕು ನಿಜ. ಸುಮಾರು ಐದು ವರ್ಷಗಳಿಂದ ಕನ್ನಡದ ಚುಕ್ಕಾಣಿ ಹಿಡಿದು ಕನ್ನಡದ ರಥವನ್ನು ಎಳೆಯುತ್ತ ಕನ್ನಡದ ಡಿಂಡಿಮದ ಕಹಳೆಯು ಹಿಂದೆಂದಿಗಿಂತಲೂ ಹೆಚ್ಚು ನಿನಾದಮಯ ಮಾಡಲು ಶ್ರಮಿಸಿದ, ಪ್ರತಿ ಮನೆ ಮನೆಗಳಲ್ಲಿ ಕನ್ನಡದ ಕಿಚ್ಚನ್ನು ಜಾಗೃತಗೊಳಿಸಲು ಶ್ರಮಿಸಿದ ವ್ಯಕ್ತಿ ಅವರೆ ನಮ್ಮ ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರು.

ಶ್ರೀಮತಿ ಮಂಗಲಾ ಶ್ರೀಶೈಲ ಮೆಟಗುಡ್ಡ ಅವರ ತಂದೆ ಶ್ರೀ ರೇವಣಸಿದ್ದಯ್ಯ ಲಂಬಿ ತಾಯಿ ಶ್ರೀಮತಿ ಮೀನಾಕ್ಷಿ ಲಂಬಿ ಇವರ ಉದರದಲ್ಲಿ ಸೊಲ್ಲಾಪೂರದಲ್ಲಿ ಜನಿಸಿದರು. ಇವರ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸೊಲ್ಲಾಪೂರದಲ್ಲಿ ಪಡೆದರು. ಇವರಿಗೆ ಒಬ್ಬ ಸಹೋದರರು ಇಬ್ಬರು ಸಹೋದರಿಯರು. ಇವರ ಮನೆತನ ಸಿರಿತನ ಹಾಗೂ ಸಹಾಯಕ್ಕೆ ಹೆಸರಾದ ಮನೆತನ.

- Advertisement -

ಮದುವೆಯ ನಂತರ ಮಂಗಲಾ ಅವರು ಪತಿಯೊಂದಿಗೆ ಬೈಲಹೊಂಗಲ ಪಟ್ಟಣದಲ್ಲಿ ವಾಸಿಸುತ್ತಿದ್ದಾರೆ. ಪತಿ ಶ್ರೀ ಶ್ರೀಶೈಲ ಚನ್ನಪ್ಪ ಮೆಟಗುಡ್ಡ ಅವರು ಕೆ.ಎಲ್.ಇ. ಸಂಸ್ಥೆಯ ನಿರ್ದೇಶಕರು. ಮೂವರು ಮಕ್ಕಳು ವಿದ್ಯಾವಂತರು ಮೊದಲನೇಯ ಮಗ ಶ್ರೀ ವಿಜಯ ಶ್ರೀ ಮೆಟಗುಡ್ಡ ಬಿ.ಕಾಂ. ಪದವಿಧರ ಉದ್ದಿಮೇದಾರರು. ಎರಡನೇಯ ಮಗ ಶ್ರೀ ಜಯರಾಜ ಶ್ರೀ ಮೆಟಗುಡ್ಡ ಎಂ.ಸಿ.ಎ. ಪದವಿಧರ ಉದ್ದಿಮೆದಾರರು, ಮೂರನೇ ಮಗಳು ಡಾ. ತನ್ಮಯಿ ಶ್ರೀ ಮೆಟಗುಡ್ಡ ಎಮ್.ಡಿ. ಚಿಕ್ಕ ಮಕ್ಕಳ ತಜ್ಞರು. ಕನ್ನಡ, ಮರಾಠಿ, ಹಿಂದಿ, ಇಂಗ್ಲೀಷ್ ಭಾಷೆಗಳ ಬಲ್ಲ ಇವರು. ಸಮಾಜಸೇವೆ. ಶಿಕ್ಷಣ ಸಂಸ್ಥೆ ನಡೆಸುವರು. ಕವನ ರಚನೆಯ ಹವ್ಯಾಸ ಹೊಂದಿದ ಇವರು ಅನೇಕ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತ ಯಶಸ್ವಿಯಾಗಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದರೆ. ಅನೇಕ ಅಸಹಾಯಕ ಕುಟುಂಬಗಳಿಗೆ ಆಶ್ರಯ ನೀಡಿ ಅವರ ಬಾಳಿಗೆ ಬೆಳಕಾಗಿದ್ದಾರೆ.

ಇವರ ಸಾಹಿತ್ಯಿಕ ಪ್ರಕಟಣೆಗಳು ಪ್ರತಿಬಿಂಬ, ಕವನ ಸಂಕಲನ ಕಿರುಹೊತ್ತಿಗೆ ಕ್ರಾಂತಿಯೋಗಿಣಿ ಗಂಗಾಂಬಿಕಾ ಸಂಶೋಧನಾತ್ಮಕ ಲೇಖನ ಅಕ್ಕನ ಬಳಗಗಳು, ಕಿರುಹೊತ್ತಗೆ, ಸ್ವಾದ ಮತ್ತು ಹಳೇಬೇರು ಹೊಸಚಿಗುರು, ಸಣ್ಣ ಮಕ್ಕಳ ಕಥಾಕಮ್ಮಟ, ಕವನಗಳು, ಸಂಪಾದಿತ ಕೃತಿಗಳು, ಕ್ರಾಂತಿಯೋಗಿ ಬಸವಣ್ಣ, ರೂಪಿಣಿ ಪ್ರಮುಖವಾಗಿವೆ. ಇವರು ಅನೇಕ ರಾಷ್ಟ್ರೀಯ ಅಂತಾರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ವಿವಿಧ ದೇಶಗಳಲ್ಲಿ ಭಾಗವಹಿಸಿದ್ದಾರೆ. ಆರ್ಥಿಕ ಸಬಲೀಕರಣಕ್ಕೆ ಗೃಹ ಉದ್ಯೋಗಕ್ಕೆ ಆದ್ಯತೆ ನೀಡಿ ಸಹಾಯ ಒದಗಿಸಿದ್ದಾರೆ. ಬೈಲಹೊಂಗಲ ತಾಲೂಕಿನಾದ್ಯಂತ ಅಂಗವಿಕರ ಗೃಹ ಆಧಾರಿತ ಶಿಕ್ಷಣ ಕೇಂದ್ರ ಪರಿಹಾರ ಭೋದನೆ ಗುಡಿಸಲು ಶಾಲೆಗಳನ್ನು ಅನುಷ್ಠಾನಗೊಳಿಸಿದ್ದಾರೆ.

ಕನ್ನಡ ಸಕ್ಕರೆ ಸವಿಯ ಭಾಷೆ, ಇಂಗ್ಲೀಷ್, ಇತರೆ ಭಾಷೆಗಳ ವ್ಯಾವೋಹಕ್ಕೆ ಬಲಿಯಾಗಿ ಕನ್ನಡವನ್ನು ಕಡೆಗಣಿಸಿದ್ದೇವೆ. ಕನ್ನಡವನ್ನು ಹೆಚ್ಚು ಬಳಸುವುದು ಎಲ್ಲೇ ಇರಿ ಹೇಗೆ ಇರಿ ಎಷ್ಟೆ ವಿದ್ಯೆ ಸಂಪಾದಿಸಿ, ಹಣ ಸಂಪಾದಿಸಿ ಆದರೆ ಕನ್ನಡ ಮಾತನಾಡಿರಿ. ಪ್ರತಿ ಮನದಲ್ಲಿ ಕನ್ನಡ ಉಸಿರಾಗಿಸಿಕೊಳ್ಳಿ ಕನ್ನಡ ಸಾಹಿತ್ಯ ಬೆಳೆಯಬೇಕು. ಅತ್ಯಂತ ಪುರಾತನ ಭಾಷೆ ನಮ್ಮದು. ಪುರಾತನ ಭಾರತೀಯ ಸಂಸ್ಕೃತಿ ಶ್ರೇಷ್ಠ ಅನ್ನೊದನ್ನ ಮರೆಯಬಾರದು, ಎಂದು ಹೇಳುತ್ತ ತಮ್ಮ ಪ್ರತಿ ಕಾರ್ಯಕ್ರಮದಲ್ಲೂ ನಾಡ ಕಾಯುವ ಸೈನಿಕರಿಗೆ ಸಲಾಮು ನೀಡುವ ಮಂಗಲಕ್ಕೆ ಅವರದ್ದು, ಕನ್ನಡ ಉಳಿಸಿ ಬೆಳೆಸುವ ಕಾರ್ಯದಲ್ಲಿ ಒಂದು ವಿಶಿಷ್ಠ ಕಾಳಜಿ ಹೊಂದಿದ ಹೃದಯ ಎನ್ನುವುದು ಶತ ಸತ್ಯವಾದ ಮಾತು. ಇವರ ಚರವಾಣಿ : 9448372411

ವಿಜಯಲಕ್ಷ್ಮೀ ಮ. ಹೊಂಗಲ
ಶಿಕ್ಷಕಿ , ಯಕ್ಕುಂಡಿ

- Advertisement -
- Advertisement -

Latest News

ಅಧ್ಯಾತ್ಮ ವಿದ್ಯೆ ಮಕ್ಕಳ ಮೂಲ ಶಿಕ್ಷಣವಾಗಬೇಕು

ಭೂಮಿಯ ಮೇಲಿರುವ ಮಾಯೆ ಎಲ್ಲರಿಗೂ ಮಂಕು ಮಾಡುತ್ತದೆ ಎನ್ನುವುದಕ್ಕೆ ನಮ್ಮ ಅನುಭವವೇ ಸಾಕ್ಷಿ. ಇಲ್ಲಿ ಯಾರೋ ಹಿಂದೆ ಅನುಭವಿಸಿ, ಹೇಳಿ, ಬರೆದಿಟ್ಟ ಸತ್ಯವನ್ನು ನಾವು ಬಹಳ...
- Advertisement -

More Articles Like This

- Advertisement -
close
error: Content is protected !!