Bidar: ಮಳೆಗಾಗಿ ಗೊಂಬೆಗಳ ಮದುವೆ; ಮೂಢನಂಬಿಕೆ ಮೊರೆ ಹೋದ ಗಡಿ ಜಿಲ್ಲೆ ಗ್ರಾಮಸ್ಥರು

Must Read

ಬೀದರ: ಗಡಿ ಜಿಲ್ಲೆ ಹುಲಸೂರ ಪಟ್ಟಣದಲ್ಲಿ ಮಳೆಯಾದ ಕಾರಣ ಮಳೆಗಾಗಿ ಗೊಂಬೆಗಳಿಗೆ ಅರಿಷಿಣ ಎಣ್ಣೆ ಹಚ್ಚಿ ವಿಶೇಷ ಮದುವೆ ಮಾಡಿ ಮಕ್ಕಳು ಮಹಿಳೆಯರು ಸಂಭ್ರಮ ಪಟ್ಟರು.

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನಲ್ಲಿ ಮಳೆಗಾಗಿ ರೈತರಿಂದ ವಿಭಿನ್ನವಾದ ಸಂಪ್ರದಾಯವನ್ನು ನೋಡಬಹುದು.

ಬೀದರ ಜಿಲ್ಲೆಯಲ್ಲಿ ಸಕಾಲಕ್ಕೆ ಬಾರದ ಮಳೆರಾಯನ ಆಗಮನಕ್ಕೆ ಹುಲಸೂರ ಪಟ್ಟಣದಲ್ಲಿ ಸಕಾಲಕ್ಕೆ ಮೃಗಾ ನಕ್ಷತ್ರದಂದು ಮಳೆ ಬಾರದಿದ್ದರೆ  ಹುಲಸೂರು ಪಟ್ಟಣದ ಓಣಿಯ ಮಹಿಳೆಯರೆಲ್ಲ ಸೇರಿ ಗೊಂಬೆಗಳ ಮದುವೆ ಮಾಡಿ ಹರಕೆ ತೀರಿಸುವುದು ಬಹಳ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ.

ಪಂಚಾಳ ಎನ್ನುವರ ಮನೆಯ ಆವರಣದಲ್ಲಿ ನಡೆಯುವ  ಮದುವೆ ಸಮಾರಂಭಕ್ಕೆ ಓಣಿಯ ಮಹಿಳೆಯರು, ಬೀಗರು ,ನೆಂಟರ ರೂಪದಲ್ಲಿ ಮದುವೆ ಹಾಜರಾಗುವುದು ವಿಶೇಷ.

ತದನಂತರ ಹಾಡುಗಳನ್ನು ಹಾಡುವ ಮುಖಾಂತರ   ಗೊಂಬೆಗೆ ಅರಿಶಿಣ, ಎಣ್ಣೆಯನ್ನು ಹಚ್ಚಿ , ಸ್ನಾನ ಮಾಡಿಸಿ, ಪುರುಣಿತಿ ಓದುತ್ತಾ ಪಟ್ಟಣದ ಆರಾಧ್ಯದೈವ ಶ್ರೀ ವೀರಭದ್ರೇಶ್ವರ ದೇವಸ್ಥಾಕ್ಕೆ ತೆರಳಿ  ದೇವರ ದರ್ಶನ ಪಡೆದು,ಮದುವೆ ಮಂಟಪಕ್ಕೆ ಆಗಮಿಸಿ ಶ್ರಂಗಾರಗೊಳಿಸಿದ ಮಂಟಪದಲ್ಲಿ ಅಕ್ಷತೆಯ ಹಾಡು ಹಾಡುವ ಮುಖಾಂತರ ವಿಶೇಷ ಗೋಂಬೆಗಳ ಮದುವೆ ಮಾಡುತ್ತಾರೆ.

ನಂತರ ಬೀಗರಿಗೆ,ನೆಂಟರಿಗೆ ಮಹಿಳೆಯರಿಗೆ ವಿಶೇಷ ಪ್ರಸಾದ ವ್ಯವಸ್ಥೆ ಮಾಡಿರುತ್ತಾರೆ.

ಗೊಂಬೆಗಳ ಮದುವೆಯ ವಿಶೇಷತೆ ಏನಂದರೆ, ಈ ತರಹ ಗೊಂಬೆಗಳ ಮದುವೆ ಮಾಡಿಕೊಟ್ಟರೆ ಒಂದೇ ದಿನದಲ್ಲಿ ಮಳೆಯಾಗಿ ರೈತರು ಹೊಲದಲ್ಲಿ ಬಿತ್ತನೆ ಮಾಡಿ ಗ್ರಾಮ ಸುಭಿಕ್ಷವಾಗುತ್ತದೆ ಎಂಬ ನಂಬಿಕೆ.

ಇನ್ನೂ ಈ ಕಲಿಯುಗದಲ್ಲಿ ಮೂಢ ನಂಬಿಕೆ ಗಡಿ ಜಿಲ್ಲೆ ಬೀದರ್ ನಲ್ಲಿ ಜೀವಂತ ಉಳಿದು ಕೊಂಡಿದೆ ಎಂದು ಹೇಳಬಹುದು.

ವರದಿ : ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group