spot_img
spot_img

ಸ್ವಾರ್ಥ ರಾಜಕೀಯ ; ಆಯ್ಕೆಯಾದ ಮೇಲೆ ತಿರುಗಿ ನೋಡದ ಶಾಸಕ

Must Read

spot_img
- Advertisement -

ಬೀದರ – ಬಸವಣ್ಣನವರ ಕರ್ಮ ಭೂಮಿ ಬಸವಕಲ್ಯಾಣ ಉಪಚುಣಾವಣೆ ನಡೆದ ಸಂದರ್ಭದಲ್ಲಿ ತನ್ನ ಗೆಲುವಿಗಾಗಿ ದುಡಿದ ಪಕ್ಷದ ಕಾರ್ಯಕರ್ತರೇ ಕರೋನಾ ವೈರಸ್ ಬಲಿಯಾದವರ ಕುಟುಂಬಕ್ಕೆ ಸಾಂತ್ವನ ಹೇಳದ ಬಸವಕಲ್ಯಾಣ ಶಾಸಕ‌.

ಕ್ಷೇತ್ರದ ಇತರ ಜನರ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂಬ ಯಕ್ಷಪ್ರಶ್ನೆ ಜನರಲ್ಲಿ ಕಾಡುತ್ತಿದೆ.

ಕಳೆದ ವರ್ಷ ಕರೋನಾ ವೈರಸ್ ಹತೋಟಿಗೆ ದೇಶಾದ್ಯಂತ ಮಾಡಲಾದ ಲಾಕ್ ಡೌನ್ ನಿಂದ ನಮ್ಮ ಜನರು ಹಸಿವಿನಿಂದ ಬಳಲಬಾರದೆಂದು ಕ್ಷೇತ್ರದ ಪ್ರತಿಯೊಂದು ಹಳ್ಳಿಗೆ ತೆರಳಿ ವೈಯಕ್ತಿಕವಾಗಿ ಆಹಾರದ ಕಿಟ್ ಹಂಚಿ ಜನರ ಮನಸ್ಸು ಮತ್ತು ಕ್ಷೇತ್ರದ ಜನರ ಪಾಲಿಗೆ ದೇವರಾಗಿ ಕಾಣಿಸಿದ ಶರಣು ಸಲಗರರು ಯಾವದೆ ಅಧಿಕಾರ ಇಲ್ಲದೆ ನಮ್ಮ ಕಷ್ಟಕ್ಕೆ ಸ್ಪಂದಿಸಿದಾರೆ ಇಂತಹ ವ್ಯಕ್ತಿಯ ಕೈಗೆ ಅಧಿಕಾರ ಬಂದರೆ ಜನರಿಗೆ ಹೇಗೆ ನೋಡಿ ಕೊಳ್ಳ ಬಹುದು ಎಂದು ಭಾವಿಸಿ ಇತ್ತೀಚೆಗೆ ನಡೆದ ಬಸವಕಲ್ಯಾಣ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಸವಕಲ್ಯಾಣ ಜನರು ಸ್ಥಳೀಯ ನಾಯಕರನ್ನು ಬಿಟ್ಟು ಶರಣು ಸಲಗರ ಅವರಿಗೆ ತಮ್ಮ ಮತವನ್ನು ನೀಡುವ ಮೂಲಕ ಒಂದು ಕಾಲದಲ್ಲಿ ಶಾಸಕರ ಶಿಫಾರಸಿನ ಪತ್ರಕಾಗಿ ಅಲೆಯುತ್ತಿದ್ದ ಶರಣು ಸಲಗರ ಅವರನ್ನು ಶಾಸಕರನ್ನಾಗಿ ಆಯ್ಕೆಮಾಡಿದ ಬಸವಕಲ್ಯಾಣ ಜನತೆಯನ್ನು ಮರೆತಿದ್ದಾರೆ.

- Advertisement -
ಕಲಬುರಗಿ ವಿಭಾಗದ ಸಂಘಟನ ಕಾರ್ಯದರ್ಶಿ

ಉಪಚುಣಾವಣೆ ಸಂದರ್ಭದಲ್ಲಿ ತನ್ನ ಪಕ್ಷದ ಅಭ್ಯರ್ಥಿಯಾಗಿ ಹಗಲು ರಾತ್ರಿ ದುಡಿದು ಗೆಲುವು ಗಾಗಿ ದುಡಿದ ಕಾರ್ಯಕರ್ತರಾದ
ಕಿಸೆಂಜೆರ್ ಅಣ್ಣಾ ಜೀ,ಹಿರಾಲಾಲ್ ಅಣ್ಣಾ ಜೀ,ಕೋಡ್ಡಿಕರ್ ಅಣ್ಣಾ ಜೀ,ಮದನ್ ಗೌಳಿ ಅಣ್ಣಾ ಜೀ,ದತ್ತು ತುಗಾಂವಕರ್ ಅಣ್ಣಾ ಜೀ,ಮಾಡಿವಾಳೇಶ್ವರ್ ಅಣ್ಣಾ ಜೀ ಅವರು ಕರೋನಾ ಸೋಂಕಿಗೆ ಬಲಿಯಾಗಿ ನಮ್ಮನ್ನು ಬಿಟ್ಟು ಅಗಲಿದ್ದಾರೆ.

ಈವರೆಗೂ ತಮ್ಮ ಗೆಲುವಿಗಾಗಿ ಹಗಲು ಇರುಳು ಎನ್ನದೆ ಕ್ಷೇತ್ರದಾದ್ಯಂತ ತಿರುಗಾಡಿ ತಮ್ಮ ನಾಯಕನ ಗೆಲುವಿಗೋಸ್ಕರ ತಮ್ಮ ಜೀವವನ್ನೇ ತೆತ್ತ ಕಾರ್ಯಕರ್ತರ ಪರಿವಾರಕ್ಕೆ ಸರ್ಕಾರದ ಅನುದಾನ ನೀಡುವುದಾಗಲಿ ಸೌಜನ್ಯಕ್ಕಾಗಿಯಾದರು ಇವರ ಮನೆಗೆ ಹೋಗಿ ಯಾವುದೆ ರೀತಿಯ ಸಾಂತ್ವನ ಹೇಳುವುದಾಗಲಿ, ಇಲ್ಲಿಯವರೆಗೂ ಯಾವುದೆ ರೀತಿಯ ಚಟುವಟಿಕೆ ಆಗಿಲ್ಲ.

ಬಿಜೆಪಿ ಕಾರ್ಯಕರ್ತ ಕಿಸೆಂಜರ್, ಕೊರೋನಾಕ್ಕೆ ಬಲಿ

ಇದರಿಂದ ಬೇಸತ್ತ ಕ್ಷೇತ್ರದ ಜನರು ಇಂಥ ಶಾಸಕರು ಇತರ ಜನರ ಅಭಿವೃದ್ಧಿ ಮಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಮಾಡಿಕೊಂಡು ತಮ್ಮ ಬಗ್ಗೆ ತಾವೇ ಪಶ್ಚಾತ್ತಾತಪ ಪಟ್ಟು ಬಸವಕಲ್ಯಾಣ ಕ್ಷೇತ್ರದ ಜನರು ಮಾಧ್ಯಮದವರ ಮುಂದೆ ತಮ್ಮ ಅಳಲನ್ನು ತೋಡಿಕೊಂಡರು.

- Advertisement -

‘ಶಾಸಕ ಶರಣು ಸಲಗರ ಅವರೆ, ಈಗಲೂ ಕಾಲ ಮಿಂಚಿಲ್ಲ ನಿಮ್ಮ ಕ್ಷೇತ್ರದ ತಹಶಿಲ್ದಾರ ನಿಮ್ಮ ಧರ್ಮ ಪತ್ನಿ ಅವರೆ ಇದ್ದಾರೆ. ದಯವಿಟ್ಟು ಜನತೆಯ ಕಡೆ ಗಮನ ಹರಿಸಿ ಕ್ಷೇತ್ರದ ಜನರ ಶಾಪದಿಂದ ಮುಕ್ತಿ ಪಡೆಯುವ ಇರುವ ಅವಕಾಶಗಳನ್ನು ಬಳಸಿಕೊಳ್ಳಿ. ಅಧಿಕಾರ ಶಾಶ್ವತ ಅಲ್ಲ ಇಲ್ಲಿಯವರಗೆ ತಾವು ತಿಳಿದೊ ತಿಳಿಯದೆಯೋ ಮಾಡಿದ ತಪ್ಪನ್ನು ಸರಿಪಡಿಸಲು ಅವಕಾಶವಿದೆ ‘ ಎಂದು ಜನರು ಕೇಳಿಕೊಳ್ಳುತ್ತಿದ್ದು, ಈಗಲಾದರು ಶಾಸಕರಾದ ಶರಣು ಸಲಗರ ಅವರು ಕ್ಷೇತ್ರದ ಜನರ ಕಡೆಗಮನ ಹರಿಸಿ ತಮ್ಮ ತಪ್ಪನು ಸರಿಪಡಿಸಿಕೊಳ್ಳುವರೋ ಅಥವಾ ಕಲ್ಯಾಣ ಜನರ ಶಾಪಕ್ಕೆ ಗುರಿಯಾಗುವರೊ ಕಾದು ನೋಡಬೇಕು.

ವರದಿ : ನಂದಕುಮಾರ ಕರಂಜೆ,
ಟೈಮ್ಸ್ ಆಫ್ ಕರ್ನಾಟಕ, ಬೀದರ

- Advertisement -
- Advertisement -

Latest News

ಪಾಲಕರು ಮಕ್ಕಳಿಗೆ ಧಾರ್ಮಿಕ ಪ್ರಜ್ಞೆ ಮೂಡಿಸಬೇಕು: ವೀರೇಶ ಶಾಸ್ತ್ರಿಗಳು

ತಿಮ್ಮಾಪೂರ :- ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಚಿತ್ತರಗಿಯ ವಿಜಯ ಮಹಾಂತೇಶ್ವರ ಮೂಲಮಠದ ಪರಮತಪಸ್ವಿ ಲಿಂ. ಶ್ರೀ ವಿಜಯ ಮಹಾಂತೇಶ ಶಿವಯೋಗಿಗಳ ೧೩೩ ನೇ ಸ್ಮರಣೋತ್ಸವ ಹಾಗೂ...
- Advertisement -

More Articles Like This

- Advertisement -
close
error: Content is protected !!
Join WhatsApp Group