- Advertisement -
ಬೀದರ – ನಗರದ ಪ್ರಮುಖ ಪ್ರದೇಶದಲ್ಲಿ ಒಂದೇ ದಿನದಲ್ಲಿ ಐದು ಸರಗಳ್ಳತನ ನಡೆದಿದ್ದು 24ಗಂಟೆ ಒಳಗೆ ಇಬ್ಬರು ಸರಗಳ್ಳರನ್ನು ಗಾಂಧಿಗಂಜ್ ಪೊಲೀಸರು ಬಂಧಿಸಿ ಕೋಳ ತೊಡೆಸಿದ್ದಾರೆ.
ಬಂಧಿತರಿಂದ ಅಂದಾಜು ಐದು ಲಕ್ಷ ರೂ. ಕಿಮ್ಮತ್ತಿನ ನೂರು ಗ್ರಾಮ್ ಬಂಗಾರದ ಆಭರಣಗಳನ್ನ ಜಪ್ತಿ ಮಾಡಿದ್ದಾರೆ.
- Advertisement -
ಹೆಚ್ಚುವರಿ ಎಸ್ಪಿ ಮಹೇಶ್ ಮೆಗ್ಗಣ್ಣವರ್,ಡಿವೈಸ್ ಪಿ ಸತೀಶ, ಸಿಪಿಐ ಜಿ.ಎಸ್.ಬಿರಾದಾರ್ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಕಳ್ಳರನ್ನು ಬಂಧಿಸಿ ಆರೋಪಿಗಳನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಗರದಲ್ಲಿ ಸರಗಳ್ಳತನ ನಡೆದರೆ ಕೂಡಲೆ ಪೊಲೀಸರ ಗಮನಕ್ಕೆ ತರಲು ಹೆಚ್ಚುವರಿ ಎಸ್ಪಿ ಮಹೇಶ್ ಮೆಗ್ಗಣ್ಣನವರ್ ಮನವಿ ಮಾಡಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ