ಬಿಗ್ ಬಾಸ್ ಸೀಸನ್ ಎಂಟರಲ್ಲಿ ಈ ಹಿಂದೆ ಎಂದೂ ಯಾವ ಸೀಸನ್ ನಲ್ಲಿಯೂ ನಡೆಯದ ಘಟನೆ ನಡೆದಿದೆ.. ಹೌದು ಬಿಗ್ ಬಾಸ್ ಅವಕಾಶವನ್ನು ಬೇಡ ಎಂದವರೇ ಯಾರೂ ಇಲ್ಲವೆನ್ನಬಹುದು.. ಆದರೆ ನಿನ್ನೆ ಮಾತ್ರ ವೈಜಯಂತಿ ಅಡಿಗ ತೆಗೆದುಕೊಂಡ ನಿರ್ಧಾರ ಅಕ್ಷರಶಃ ಮನೆಯ ಇತರ ಸದಸ್ಯರನ್ನು ಆಶ್ಚರ್ಯಗೊಳಿಸಿದೆ.. ಅದೇ ವಿಚಾರ ಬಿಗ್ ಬಾಸ್ ಮನೆಯ ಸದಸ್ಯರ ನಡುವೆ ಇದೀಗ ಬಿಸಿಬಿಸಿ ಸುದ್ದಿಯಾಗಿದೆ.. ಆದರೆ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರ ಬರಲು ನಿಜವಾದ ಕಾರಣ ಬೇರೆಯೇ ಇದೆ..
ಹೌದು ವೈಜಯಂತಿ ಅಡಿಗ ಬಿಗ್ ಬಾಸ್ ಮನೆಗೆ ಎರಡನೇ ವೈಲ್ಡ್ ಕಾರ್ಣ್ ಎಂಟ್ರಿ ಮೂಲಕ ತೆರಳಿದ್ದರು.. ಮೊದಲ ದಿನ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದ ವೈಜಯಂತಿ ಅಡಿಗ ನೇರವಾಗಿಯೇ ಸ್ಪರ್ಧಿಗಳಿಗೆ ಟಕ್ಕರ್ ನೀಡುತ್ತಿದ್ದರು.. ಜೊತೆಗೆ ಚಕ್ರವರ್ತಿ ಚಂದ್ರಚೂಡ ಮತ್ತು ಪ್ರಶಾಂತ್ ಸಂಬರ್ಗಿ ಜೊತೆ ಬಹಳ ಆಪ್ತರಾದ ವೈಜಯಂತಿ ಅಡಿಗ ಮೂರೇ ದಿನಕ್ಕೆ ಮನೆಗೆ ಮರಳುವ ನಿರ್ಧಾರ ಮಾಡಿದ್ದರು.. ನಿನ್ನೆ ಬಿಗ್ ಬಾಸ್ ಸೀಸನ್ ಎಂಟರ ಆರನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಎಂದಿನಂತೆ ಪ್ರಾರಂಭವಾಗಿತ್ತು.. ಈ ವಾರ ಮನೆಯಿಂದ ಹೊರ ಹೋಗಲು ಶಮಂತ್ ರಾಜೀವ್ ಪ್ರಶಾಂತ್ ಸಂಬರ್ಗಿ ಅರವಿಂದ್ ಕೆಪಿ ಶುಭಾ ಪೂಂಜಾ ದಿವ್ಯಾ ಸುರೇಶ್ ನಿಧಿ ಸುಬ್ಬಯ್ಯ ನಾಮಿನೇಟ್ ಆಗಿದ್ದರು..
ಎಲಿಮಿನೇಷನ್ ಪ್ರಕ್ರಿಯೆ ಪ್ರಾರಂಭವಾಗುತ್ತಿದ್ದಂತೆ ಶುಭಾ ಪಜಾ ಅರವಿಂದ್ ಕೆಪಿ ನಿಧಿ ಸುಬ್ಬಯ್ಯ ರಾಜೀವ್ ಪ್ರಶಾಂತ್ ಸಂಬರ್ಗಿ ದಿವ್ಯಾ ಸುರೇಶ್ ಸೇಫ್ ಆದರು.. ಆರನೇ ವಾರದ ಎಲಿಮಿನೇಷನ್ ನಲ್ಲಿ ಶಮಂತ್ ಎಲಿಮಿನೇಟ್ ಆದರು.. ಆದರೆ ತಕ್ಷಣ ವೈಜಯಂತಿ ಅವರಿಗೆ ಮನೆಯಿಂದ ಹೊರ ಹೋಗುವುದಾದರೆ ಹೋಗಬಹುದು ಎಂದು ಕಿಚ್ಚ ಸುದೀಪ್ ಅವಕಾಶ ನೀಡಿದಾಗ.. ಆ ಅವಕಾಶವನ್ನು ಬಳಸಿಕೊಂಡು ನಾನು ಮನೆಯಿಂದ ಹೊರ ಹೋಗುವೆ ಎಂದರು.. ಅಲ್ಲಿಗೆ ಶಮಂತ್ ಮತ್ತೆ ಸೇಫ್ ಆದರು.. ಮನೆಯವರೆಲ್ಲಾ ಆಶ್ಚರ್ಯ ಪಟ್ಟರು.. ಆದರೆ ವೈಜಯಂತಿ ಹೊರ ಹೋಗುವೆ ಎನ್ನಲು ಅಸಲಿ ಕಾರಣ ಬೇರೆಯೇ ಇದೆ..
ಹೌದು ವೈಜಯಂತಿ ಮನೆಗೆ ಬಂದ ಎರಡನೇ ದಿನದಿಂದಲೂ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ನಿರ್ಧಾರ ಮಾಡಿದ್ದರು.. ನಾನು ಅಂದುಕೊಂಡದ್ದೇ ಒಂದು.. ಇಲ್ಲಿ ಆಗುತ್ತಿರುವುದೇ ಮತ್ತೊಂದು.. ನಾನು ಈ ರೇಸ್ ನಲ್ಲಿಲ್ಲ.. ಮೊದಲು ನಾನು ಹೊರಗೆ ಹೋಗಬೇಕು ಎನ್ನುತ್ತಿದ್ದರು.. ಅಷ್ಟೇ ಅಲ್ಲದೇ ನಾನು ಅಪ್ಪ ಅಮ್ಮ ಫಿಯಾನ್ಸಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಸಹ ಹೇಳುತ್ತಿದ್ದರು.. ವೈಜಯಂತಿ ಅವರಿಂದ ಮನರಂಜನೆ ಬದಲಿಗೆ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಮಾತುಗಳಷ್ಟೇ ಬರುತ್ತಿದ್ದವು.. ಪದೇ ಪದೇ ಇದನ್ನೇ ನೋಡುತ್ತಿದ್ದ ಬಿಗ್ ಬಾಸ್ ವೈಜಯಂತಿ ಅವರನ್ನು ಮನೆಯಿಂದ ಹೊರಗೆ ಕಳುಹಿಸುವ ನಿರ್ಧಾರ ಮಾಡಿದ್ದರು..
ಇನ್ನು ಮಾನಸಿಕವಾಗಿ ಕುಗ್ಗಿದ್ದ ವೈಜಯಂತಿ ಅಡಿಗ ಅವರನ್ನು ಕನ್ಫೆಷನ್ ರೂಮಿಗೆ ಕರೆಸಿ ಮಾತನಾಡಿ ಸಮಾಧಾನ ಪಡಿಸಿದ್ದರು.. ಆದರೂ ಸಹ ಬಿಗ್ ಬಾಸ್ ಮನೆಯಲ್ಲಿ ಮುಂದುವರೆಯಲು ವೈಜಯಂತಿ ಆಸಕ್ತಿ ತೋರದ ಕಾರಣ ಅವರನ್ನು ಮನೆಯಿಂದ ಹೊರ ಹೋಗಲು ಅವಕಾಶ ಕೊಟ್ಟು ಶಮಂತ್ ನನ್ನು ಉಳಿಸಲಾಯಿತು.. ಇನ್ನು ಇತ್ತ ಶಮಂತ್ ನದ್ದು ಒಂದು ರೀತಿ ಅದೃಷ್ಟ ಎನ್ನಬಹುದು.. ಮೊದಲ ಎರಡು ವಾರ ಕ್ಯಾಪ್ಟನ್ ಆಗುವ ಮೂಲಕ ಮೂರು ವಾರಗಳು ಮನೆಯಲ್ಲಿಯೇ ಉಳಿಯುವಂತಾಯಿತು.. ಇನ್ನೆರೆಡು ವಾರ ಸೇಫ್ ಆಗಿ ಈಗ ಮೂರನೇ ವಾರ ವೈಜಯಂತಿ ಮೂಲಕ ಮತ್ತೆ ಸೇಫ್ ಆದರು.. ಈಗಲಾದರು ಸಿಕ್ಕ ಅವಕಾಶವನ್ನಿ ಸರಿಯಾಗಿ ಉಪಯೋಗಿಸಿಕೊಳ್ಳಬೇಕಷ್ಟೇ..