ಬೀದರ – ಕಣ್ಣು ಮುಚ್ಚಿ ಹಾಲು ಕುಡಿದರೆ ಮನೆ ಮಾಲೀಕರಿಗೆ ಗೊತ್ತೇ ಆಗುವುದಿಲ್ಲ ಎಂದು ತಿಳಿದು ಕೊಂಡಿದ್ದ ಗ್ಯಾಂಗ್….ಆದರೆ ಬೀದರ ಪೊಲೀಸ್ ಕಣ್ಣು ತಪ್ಪಿಸಿ ಕೊಳ್ಳಲು ಸಾದ್ಯವಿಲ್ಲ ಎಂಬುದು ಐತಿಹಾಸಿಕ ಮಾತು ಇದೆ.
ಬೀದರ್ ನಲ್ಲಿ ಎಟಿಎಂ ಸಿಬ್ಬಂದಿಯ ಶೂಟೌಟ್, ಹತ್ಯೆ, ದರೋಡೆ ಪ್ರಕರಣದಲ್ಲಿ ಲೀಡ್ ಸಿಕ್ಕಿದೆ. ಹೈದ್ರಾಬಾದ್ ನಲ್ಲಿ ನಡೆದ ಶೂಟೌಟ್ ನಲ್ಲಿ ಬಿಹಾರ ಮೂಲದ ಮನಿಷ್ ಇರುವುದು ಖಚಿತವಾಗಿದೆ. ಇದೆಲ್ಲದರ ಹಿಂದೆ ಕುಖ್ಯಾತ ದರೋಡೆಕೊರ ಅಮಿತ್ ಗ್ಯಾಂಗ್ ಕೈವಾಡದ ಶಂಕೆ. ಎರಡು ದಿನವಾದರೂ ಆರೋಪಿಗಳು ಪೊಲೀಸರ ಕೈಯಿಂದ ದೂರವಾಗಿದ್ದಾರೆ. ಈ ಎಲ್ಲದರ ಕುರಿತ ಕಂಪ್ಲಿಟ್ ರಿಪೋರ್ಟ್ ಇಲ್ಲಿದೆ ನೋಡಿ.
ಬಾಲ್ಯದಿಂದಲೆ ಅಪರಾಧ ಮಾಡುತ್ತ ಗನ್ ಪಾಯಿಂಟ್ ಮೇಲೆ ವ್ಯಾಪಾರಿಗಳ ಅಂಗಡಿಯನ್ನೆ ದರೋಡೆ ಮಾಡುತ್ತ, ಪುಸ್ತಕ ಇಡುವ ಬ್ಯಾಗನಲ್ಲಿ ದೇಶಿ ಪಿಸ್ತೂಲ್ ಇಟ್ಟು ಅಟ್ಟಹಾಸ ಮೇರೆಯುವ ಬಿಹಾರದ ಜೀವಂತ ಸ್ಟೋರಿ ಆಧರಿತ ಬಾಲಿವುಡ್ ನ ಖ್ಯಾತ ನಿರ್ದೇಶಕ ಅನುರಾಗ ಕಶ್ಯಪ್ ನಿರ್ದೇಶನದ ಗ್ಯಾಂಗ್ ಆಫ್ ವಸೇಪೂರ್ ಫಿಲ್ಮ್. ಬಿಹಾರದ ಅಪರಾಧ ಜಗತ್ತು ದೇಶದಲ್ಲೆ ಕುಖ್ಯಾತಿ ಪಡೆದಿದೆ.
ಈಗ ಬೀದರ್ ಹಾಗೂ ಹೈದ್ರಾಬಾದ್ ನಲ್ಲಿ ಶೂಟೌಟ್ ಪ್ರಕರಣಕ್ಕೆ ಈ ಬಿಹಾರದ ಕ್ರಿಮಿನಲ್ ಗಳ ನಂಟು ಬೆಳಕಿಗೆ ಬರುತ್ತಿದೆ. ಬಿಹಾರದ ಕುಖ್ಯಾತ ದರೋಡೆಕೋರ ಅಮಿತಕುಮಾರ್ ಗ್ಯಾಂಗ್ ಬೀದರ್ ನಲ್ಲಿ ಎಟಿಎಂ ಗೆ ಹಣ ಸಾಗಿಸುತ್ತಿದ್ದ ವೇಳೆ ಸಿಎಂಎಸ್ ಸಂಸ್ಥೆಯ ಗಿರಿ ವೆಂಕಟೇಶ ಮೇಲೆ ತುಪಾಕಿ ಸಿಡಿಸಿ ಬರ್ಬರವಾಗಿ ಹತ್ಯೆಗೈದು ಮತ್ತೊಬ್ಬ ಸಿಬ್ಬಂದಿ ಶಿವಕುಮಾರ್ ಮೇಲೆ ಗುಂಡು ಹಾರಿಸಿ ಸಾವಿನ ದವಡೆಗೆ ಸಿಲುಕಿಸಿದ ಭಯಾನಕ ಖದೀಮರು ಬರೋಬ್ಬರಿ 93 ಲಕ್ಷ ರುಪಾಯಿ ಸಿನಿಮಾ ಸ್ಟೈಲ್ ನಲ್ಲಿ ದರೋಡೆ ಮಾಡಿದ್ದರು.
ನಂತರ ಹೈದ್ರಾಬಾದ್ ನಲ್ಲಿ ಜಹಾಂಗಿರ ಎಂಬ ಟ್ರಾವೆಲ್ ಎಜೆನ್ಸಿ ಸಹಾಯಕನ ಮೇಲೆ ಗುಂಡು ಹಾರಿಸಿ ಮಾಯವಾಗಿದ್ದರು.
ಹೈದ್ರಾಬಾದ್ ಶೂಟೌಟ್ ನಂತರ ನಗರದ ಹಲವು ಬೀದಿಗಳಲ್ಲಿ ಬಣ್ಣ ಬದಲಾಯಿಸಿ ಬಟ್ಟೆಗಳು ಹಾಕುತ್ತ ಸಿಸಿಟಿವಿ ಕಣ್ಗಾವಲಿನಿಂದ ತಪ್ಪಿಸಿಕೊಳ್ಳುತ್ತ ಸುತ್ತಾಡುತ್ತ ಚಲಿಸುತ್ತಿದ್ದ ಆಟೋದಲ್ಲೆ ಬಟ್ಟೆ ಬದಲಾಯಿಸಿ ರಸ್ತೆ ಪಕ್ಕ ಬಂದು ನಿಂತಿದ್ದಾರೆ.
ಅಲ್ಲದೆ ಬೀದರ್ ನಿಂದ ಲೂಟಿ ಮಾಡಿದ ಹಣ ಎರಡು ಟ್ರಾಲಿ ಬ್ಯಾಗ್ ನಲ್ಲಿ ಲೋಡ್ ಮಾಡಿಕೊಂಡು ಸಿಕಂದ್ರಾಬಾದ್ ರೈಲ್ವೆ ನಿಲ್ದಾಣದಿಂದ ಉತ್ತರ ಭಾರತದತ್ತ ಪ್ರಯಾಣ ಮಾಡಿರುವ ಮಾಹಿತಿಯನ್ನು ಪೊಲೀಸರು ಪಡೆದುಕೊಂಡಿದ್ದಾರೆ.
ಈ ಎಲ್ಲದರ ನಡುವೆ ಹೈದ್ರಾಬಾದ್ ನ ಹಿರಿಯ ಅಧಿಕಾರಿಯೊಬ್ಬರು ಬಿಹಾರದ ಅಮಿತಕುಮಾರ್ ಗ್ಯಾಂಗ್ ನ ಸಹಚರ ಮನಿಷ್ ಇರುವುದು ಮತ್ತು ಅವನ ವಿಳಾಸ ಪತ್ತೆಯಾಗಿದೆ. ಇನ್ನೊಬ್ಬ ಆರೋಪಿಯನ್ನು ಪತ್ತೆ ಹಚ್ಚುತ್ತೇವೆ ಈ ನಿಟ್ಟನಲ್ಲಿ ಬಿಹಾರಕ್ಕೆ ಪೊಲೀಸರ ತಂಡ ಹೋಗಿದೆ ಶೋಧ ನಡೆಯುತ್ತಿದೆ ಎಂದಿದ್ದಾರೆ.
ಒಟ್ಟಿನಲ್ಲಿ ಕೈಯಲ್ಲಿ ಪಿಸ್ತೂಲ್ ಹಿಡಿದು ಸಿಕ್ಕ ಸಿಕ್ಕವರ ಮೇಲೆ ಅಟ್ಯಾಕ್ ಮಾಡಿ ಮಾಯವಾಗುತ್ತಿರುವ ಈ ಬಿಹಾರದ ಖತರ್ನಾಕ್ ಖದೀಮರು ಅಂದರ್ ಆಗುವವರೆಗೆ ಖಾಕಿ ಪಡೆ ಸುಮ್ಮನಿರುವುದಿಲ್ಲ ಎಂದು ಖಚಿತವಾಗಿದೆ.
ವರದಿ : ನಂದಕುಮಾರ ಕರಂಜೆ, ಬೀದರ