Homeಸುದ್ದಿಗಳುವ್ಯಕ್ತಿಚಿತ್ರಣ: ಶತಾಯುಷಿ ನಿವೃತ್ತ ಶಿಕ್ಷಕ ಪಾಯಪ್ಪ ಹಂಚಿನಮನಿ

ವ್ಯಕ್ತಿಚಿತ್ರಣ: ಶತಾಯುಷಿ ನಿವೃತ್ತ ಶಿಕ್ಷಕ ಪಾಯಪ್ಪ ಹಂಚಿನಮನಿ

ಜನನ ಮತ್ತು ಬಾಲ್ಯ:

ರೈತ ಕುಟುಂಬದಲ್ಲಿ ಪಾಯಪ್ಪ ಹಂಚಿನಮನಿ ಅವರು 1925 ಏಪ್ರಿಲ್ 2ರಂದು ಬೆಳಗಾವಿ ಜಿಲ್ಲೆಯ ಚಿಕ್ಕಬಾಗೇವಾಡಿ ಗ್ರಾಮದಲ್ಲಿ ಜನಿಸಿದರು. ಬಾಲ್ಯದ ದಿನಗಳಲ್ಲಿ ಗುರುಪುತ್ರಪ್ಪ ಫಡೆಣ್ಣವರ, ನೇಗಿನಹಾಳ ಸರ್, ಹಿರೇಮಠ ಅವರೊಂದಿಗೆ ಆಟವಾಡಿ ಬೆಳೆದವರು. ಅವರ ಬಾಲ್ಯದ ಸ್ನೇಹಿತರೂ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದು, ಈ ಸ್ನೇಹವು ಕೇವಲ ಬಾಲ್ಯದಲ್ಲೇ ಅಲ್ಲ, ಅವರ ವೃತ್ತಿ ಜೀವನದಲ್ಲಿಯೂ ಮುಂದುವರೆದಿತ್ತು.

ವೃತ್ತಿಜೀವನ:
ತಮ್ಮ ಶಿಕ್ಷಕ ವೃತ್ತಿಯನ್ನು ಬೈಲಹೊಂಗಲ ತಾಲೂಕಿನ ನೇಗಿನಹಾಳ, ತಿಗಡೊಳ್ಳಿ, ತಿಗಡಿ ಶಾಲೆಗಳಲ್ಲಿ ಆರಂಭಿಸಿದರು. 55 ವರ್ಷಗಳ ಅವಧಿಯಲ್ಲಿ ಸೇವೆ ಸಲ್ಲಿಸಿ, ಅಪಾರ ಶಿಷ್ಯರನ್ನು ಶಿಕ್ಷಣದ ಮೂಲಕ ಬೆಳಕಿಗೆ ಕರೆತಂದಿದ್ದಾರೆ. ಅವರ ಶಿಷ್ಯರಲ್ಲಿ ಅನೇಕರು ಒಳ್ಳೆಯ ಬದುಕು ಕಂಡುಕೊಂಡಿದ್ದಾರೆ ಅವರ ಬದುಕುಕೇಂದ್ರೀತ ಜೀವನಮೌಲ್ಯಗಳನ್ನು ಮುಂದುವರಿಸಿದ್ದಾರೆ. 45 ವರ್ಷಗಳ ನಿವೃತ್ತಿ ಜೀವನವನ್ನೂ ಅತೀ ನಿಯಮಿತವಾಗಿ ನಡೆಸಿಕೊಂಡು ಬಂದಿದ್ದಾರೆ. ಅವರ ಸೇವೆಯನ್ನು ಗುರುತಿಸಿ ಪ್ರಶಸ್ತಿಗಳು ಬಂದಿವೆ.

ಶತಾಯುಷಿಯ ಸಂಭ್ರಮ:
2025 ಏಪ್ರಿಲ್ 2ರಂದು ಶತಮಾನ ಪೂರೈಸಿದ ಹಂಚಿನಮನಿ ಅವರ ಈ ಸಂಭ್ರಮವನ್ನು ಅವರ ಶಿಷ್ಯರು ಕಟುಂಬ ವರ್ಗ ದೊಡ್ಡ ಮಟ್ಟದಲ್ಲಿ ಆಚರಿಸಿದರು. ಶಿಕ್ಷಕರಾಗಿಯೂ, ಮಾರ್ಗದರ್ಶಕರಾಗಿ ಬದುಕು ಕಟ್ಟಿಕೊಂಡಿದ್ದು ಮಾದರಿಯಾಗಿದೆ. ಈ ವಿಶೇಷ ಕಾರ್ಯಕ್ರಮದಲ್ಲಿ ಕಿತ್ತೂರು ಶಾಸಕರಾದ ಬಾಬಾಸಾಹೇಬ ಪಾಟೀಲ್ ಭಾಗಿಯಾಗಿಯದರು ಜೊತೆಗೆ ಹಿರಿಯರು, ಕಿರಿಯರು, ಶಿಷ್ಯರು ಸನ್ಮಾನ ಮಾಡಿ ಆಶೀರ್ವಾದ ಪಡೆದುಕೊಂಡರು.

ಸರಳ ಜೀವನ ಆದರ್ಶ ವಿಚಾರ
ಅವರ ಜೀವನ ಶೈಲಿ ಶಿಸ್ತು ಬದ್ದ ಮತ್ತು ಸರಳ. ಅವರ. ಶಿಕ್ಷಕ ವೃತ್ತಿಯಲ್ಲೂ ಸರ್ಕಾರದ ಎಲ್ಲಾ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿದವರು, ತಮ್ಮ ವೈಯಕ್ತಿಕ ಜೀವನದಲ್ಲಿಯೂ ಅದೇ ಶಿಸ್ತನ್ನು ಮುಂದುವರಿಸಿದರು. ಅವರ ಆಚಾರವಿಚಾರಗಳು ಇಂದು ಯುವ ಪೀಳಿಗೆಗೆ ಮಾದರಿಯಾಗಿದೆ.

ಓದಿನ ಆಸಕ್ತಿ:
ಶತಾಯುಷಿ ವಯಸ್ಸಿನಲ್ಲಿಯೂ ಓದಿನ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಅವರು ರನ್ನ ಪೊನ್ನ ನಿಂದ ತೇಜಶ್ವಿವರೆಗೆ ಸಾಹಿತ್ಯ ಓದಿಕೊಂಡು ಕೃತಿ ವಿಮರ್ಶೆಗಳನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದರು, “ರತ್ನಾಕರ ಭರತೇಶ ವೈಭವ” ಇಷ್ಟದ ಕೃತಿ ಕೆಲವೇ ದಿನಗಳಲ್ಲಿ ಓದಿ ಮುಗಿಸುತ್ತಿದ್ದರು ಇಂದಿಗೂ ಸ್ಪಷ್ಟ ದೃಷ್ಟಿ ಹೊಂದಿರುವ ಅವರು, ನಿತ್ಯವೂ ವಾಕಿಂಗ್ ಮಾಡುತ್ತಾರೆ ಎಂಬುದು ವಿಶೇಷ.

ಸನ್ಮಾನ ಮತ್ತು ಗೌರವ:
ಅವರ ಶಿಷ್ಯರು, ಊರಿನ ಹಿರಿಯರು ಮತ್ತು ಶಿಕ್ಷಕರ ಸಮುದಾಯ ಅವರ ಸೇವೆಯನ್ನು ಗೌರವಿಸಿ, ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಪಾಯಪ್ಪ ಹಂಚಿನಮನಿ ಅವರು ತಾವು ಕಲಿಸಿದ ವಿದ್ಯಾರ್ಥಿಗಳನ್ನು ದೇಶ ಸೇವೆಗೆ ತೊಡಗಿಸಲು ಪ್ರೇರೇಪಿಸಿರುವುದು ಅವರ ದೊಡ್ಡ ಸಾಧನೆ.

ಶತಾಯುಷಿ ಪಾಯಪ್ಪ ಹಂಚಿನಮನಿ ಅವರ ಜೀವನವು ನಿಜಕ್ಕೂ ಮಾರ್ಗದರ್ಶಕವಾಗಿದೆ. ಅವರ ಶಿಕ್ಷಕ ವೃತ್ತಿ, ಶಿಷ್ಯರಿಗೆ ನೀಡಿದ ದಾರಿ ದೀಪ, ಮತ್ತು ಆಚಾರವಿಚಾರಗಳಲ್ಲಿ ಉಜ್ವಲತೆ ನಮ್ಮೆಲ್ಲರಿಗೂ ಮಾದರಿಯಾಗಿದೆ. ಇಂಥ ಶ್ರೇಷ್ಠ ಶಿಕ್ಷಕರು ನಮ್ಮ ಸಮಾಜದಲ್ಲಿ ಹೆಚ್ಚು ಹಬ್ಬಲಿ.

ಅಜ್ಜಪ್ಪ ಅಂಗಡಿ ಶಿಕ್ಷಕರು ಚಿಕ್ಕಬಾಗೇವಾಡಿ

RELATED ARTICLES

Most Popular

error: Content is protected !!
Join WhatsApp Group