spot_img
spot_img

ಅ.26 ರಿಂದ ಢವಳೇಶ್ವರದಲ್ಲಿ ಬೀರಸಿದ್ಧೇಶ್ವರ ಜಾತ್ರೆ

Must Read

ಮೂಡಲಗಿ: ತಾಲೂಕಿನ ಢವಳೇಶ್ವರ ಗ್ರಾಮದಲ್ಲಿ ಅ.26 ರಿಂದ 28 ರವರೆಗೆ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ  ಕಾರ್ಯಕ್ರಮಗಳೋಂದಿಗೆ ಶ್ರೀ ಬೀರಸಿದ್ಧೇಶ್ವರ ಜಾತ್ರಾಮಹೋತ್ಸವ ಜರುಗಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅ.26 ರಂದು ಜಾತ್ರಾಮಹೋತ್ಸವ ನಿಮಿತ್ತ ಮಧ್ಯಾಹ್ನ 2ಕ್ಕೆ ಸರಕಾರಿ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಾಲ್ಕು ಹಲ್ಲಿನ, ಎರಡು ಹಲ್ಲಿನ ಮತ್ತು ಹಾಲು ಹಲ್ಲಿನ ಟಗರಿನ ಕಾಳಗ ಸ್ಪರ್ಧೆಗಳು ಜರುಗಲಿವೆ. ಅಂದು ಸಂಜೆ 5ಕ್ಕೆ ವಿವಿಧ ಗ್ರಾಮಗಳ ದೇವರುಗಳ ಪಲ್ಲಕ್ಕಿಗಳು ಗ್ರಾಮಕ್ಕೆ ಆಗಮಿಸುವವು,  ರಾತ್ರಿ 8ಕ್ಕೆ ಮಹಾಪ್ರಸಾದ ಮತ್ತು 10ಕ್ಕೆ  ಹರದೇಶಿ ಮತ್ತು ನಾಗೇಶಿ ಡೊಳ್ಳಿನ ಪದಗಳು ಜರುಗಲಿವೆ.

ಅ.27 ರಂದು ಮುಂಜಾನೆ 9ಕ್ಕೆ ಡೊಳ್ಳು, ವಾದ್ಯಮೇಳ ಮತ್ತು ಮೆರವಣಿಗೆಯೊಂದಿಗೆ  ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಘಟಪ್ರಭಾ  ನದಿಗೆ ಹೋಗಿ ತಲುಪುತ್ತದೆ, ನಂತರ ಮುತೈದೆಯರಿಂದ ಗಂಗಾಮಾತೆಗೆ ಉಡಿ ತುಂಬುವ ಕಾರ್ಯಕ್ರಮ ಜರುಗುವುದು.  ಮಧ್ಯಾಹ್ನ 12ಕ್ಕೆ ಮಹಾಪ್ರಸಾದ ಜರುಗುವುದು. ಅಂದು ರಾತ್ರಿ 10ಕ್ಕೆ ಗ್ರಾಮ ಪಂಚಾಯತಿ ಗಂಗವ್ವ  ಸಾಮಾಜಿಕ ನಾಟಕ ಪ್ರದರ್ಶನಗೊಳ್ಳಲಿದೆ.

ಅ.28 ರಂದು ಮುಂಜಾನೆ 9ಕ್ಕೆ ಶ್ರೀ ಬೀರಸಿದ್ಧೇಶ್ವರ ದೇವರ ಪಲ್ಲಕ್ಕಿ ಉತ್ಸವ ಹಾಗೂ ಬಂಡಾರ ವಡೆಯುವ ಕಾರ್ಯಕ್ರಮ  ಜರುಗುವುದು ಎಂದು ರಂಗಪ್ಪ ಹೊನಕುಪ್ಪಿ ತಿಳಿಸಿದ್ದಾರೆ.

- Advertisement -
- Advertisement -

Latest News

ವಿರಾಟಪುರ ವಿರಾಗಿ ಚಿತ್ರದ ವಾಲ್ ಪೋಸ್ಟರ್ ಬಿಡುಗಡೆ

ಸಿಂದಗಿ: ಹಾನಗಲ್ಲ ಗುರುಕುಮಾರ ಮಹಾಸ್ವಾಮಿಗಳವರ ಉಸಿರೇ ಸಮಾಜವಾಗಿತ್ತು ತಮ್ಮ ಬಗ್ಗೆ ಕಿಂಚಿತ್ತೂ ವಿಚಾರ ಮಾಡಿದವರಲ್ಲ ಎಂದು ಡಾ. ಪ್ರಭುಸಾರಂಗದೇವ ಶಿವಾಚಾರ್ಯರು ಹೇಳಿದರು. ಪಟ್ಟಣದ ಸಾರಂಗಮಠದಲ್ಲಿ ಹಾನಗಲ್ಲ ಶ್ರೀ...
- Advertisement -

More Articles Like This

- Advertisement -
close
error: Content is protected !!