spot_img
spot_img

೨೪ ಸಾವಿರ ಸಸಿ ನೆಟ್ಟು ಸರ್ವೋತ್ತಮ ಜಾರಕಿಹೊಳಿ ೨೪ನೇ ಜನ್ಮ ದಿನಾಚರಣೆ

Must Read

- Advertisement -

೨೪ ಸಾವಿರ ಸಸಿ ನೆಡುವ ಕಾರ್ಯಕ್ಕೆ ವಿವಿಧ ಸ್ವಾಮಿಜಿಗಳಿಂದ ಚಾಲನೆ

ಮೂಡಲಗಿ: ಅರಭಾವಿ ಕ್ಷೇತ್ರದಲ್ಲಿ ಕಳೆದು ಮೂರ್ನಾಲ್ಕು ವರ್ಷಗಳಿಂದ ಜನ ಸಾಮಾನ್ಯರ ಜೊತೆ ಬೆರೆಯುತ್ತಿರುವ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರ ೨೪ನೇ ಜನ್ಮ ದಿನಾಚರಣೆ ನಿಮಿತ್ತ ೨೪ ಸಾವಿರ ಸಸಿ ನೆಡುವ ಕಾರ್ಯವನ್ನು ಹಮ್ಮಿಕೊಂಡಿರುವುದ ಶ್ಲಾಘನೀಯ ಎಂದು ಮುನ್ಯಾಳ-ರಂಗಾಪೂರ ಹಾಗೂ ಬಾಗೋಜಿಕೊಪ್ಪದ ಡಾ.ಶಿವಲಿಂಗ ಮುರಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಸೋಮವಾರದಂದು ತಾಲೂಕಿನ ಯಾದವಾಡ ಗ್ರಾಮದ ಹೊರವಲಯದಲ್ಲಿ ಮತ್ತು ದಾಲ್ಮಿಯಾ ಸಿಮೆಂಟ ಕಾರ್ಖಾನೆ ಹತ್ತಿರ ಯುವ ನಾಯಕ ಸರ್ವ್ತೇತ್ತಮ ಜಾರಕಿಹೊಳಿ ಅವರ ೨೪ ಜನ್ಮ ದಿನಾಚರಣೆ ನಿಮಿತ್ತ ಜಾರಕಿಹೊಳಿ ಅಭಿಮಾನಿಗಳು ಅರಭಾವಿ ಕ್ಷೇತ್ರದಲ್ಲಿ ಹಮ್ಮಿಕೊಂಡು ೨೪ ಸಾವಿರ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ, ಇಂದು ಗಿಡ-ಮರಗಳು ನಾಶವಾಗಿ ಸರಿಯಾದ ಸಮಯದಲ್ಲಿ ಮಳೆಯಾಗುತ್ತಿಲ, ಸರ್ವೋತ್ತಮ ಜಾರಕಿಹೊಳಿ ಜನ್ಮ ದಿನದ ನಿಮಿತ್ತ ಸಸಿ ನೆಡುವುದು ಮತ್ತು ವಿವಿಧ ಸಾಮಾಜಿಕ ಕಾರ್ಯ ಮಾಡುತ್ತಿರುವುದು ಬಹಳ ಸಂತಸದ ವಿಷಯ, ಸರ್ವೋತ್ತಮ ಜಾರಕಿಹೊಳಿ ಅವರ ಸರಳತೆ, ಸೌಜ್ಯನ ನೋಡಿದರೆ ಮುಂದೆ ಅರಭಾವಿ ಕ್ಷೇತ್ರದಲ್ಲಿ ದೊಡ್ಡ ನಾಯಕರಾಗಲಿಕ್ಕೆ ಯೋಗ್ಯ ವ್ಯಕ್ತಿಯ ಜನ್ಮ ದಿನಾಚರಣೆ ಮಾಡುತ್ತಿರುವುದು ಬಹಳ ಸೂಕ್ತವಾಗಿದೆ ಎಂದ ಅವರು ಸರ್ವೋತ್ತಮ ಜಾರಕಿಹೊಳಿ ಅವರಿಗೆ ಭಗವಂತನು ಆಯುರಾರೋಗ್ಯ ನೀಡಿ ಕರುಣಿಸಲಿ ಎಂದು ಶುಭ ಕೋರಿದರು

- Advertisement -

ಸುಣಧೋಳಿ ಜಡಿಸಿದ್ಧೇಶ್ವರ ಮಠದ ಪೀಠಾಧಿಪತಿ ಶ್ರೀ ಶಿವಾನಂದ ಮಾಹಾಸ್ವಾಮೀಜಿ ಮಾತನಾಡಿ, ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟು ಹಬ್ಬವನ್ನು ಅವರ ಅನುಪಸ್ಥಿತಿಯಲ್ಲಿ ೨೪ ಸಾವಿರ ಸಸಿ ನೆಟ್ಟು ಆಚರಣೆ ಮಾಡು ಕೆಲಸ ಮೆಚ್ಚುವಂತದ್ದು, ಇವತ್ತು ಗಿಡ-ಮರಗಳನ್ನು ಕಡಿದು ಕಾಡು ನಶಿಸುವ ಸಮಯದಲ್ಲಿ ಸರ್ವೋತ್ತಮ ಅವರ ಜನ್ಮ ದಿನದ ಪ್ರಯುಕ್ತ ದೊಡ್ಡ ಪ್ರಮಾಣದಲ್ಲಿ ಸಸಿ ನೆಡುವದರಿಂದ ಮುನ್ಯಷ್ಯನಿಗೆ ಆಮ್ಲಜನಕ ಕೊಡುವಂತಹ ವಿಸ್ಮಯ ಕಾರ್ಯಮಾಡುವ ಮುಖಾಂತರ ಸಮಾಜಮುಖಿ ಕಾರ್ಯ ಮಾಡುತ್ತಿರುವುದು ಇತರರಿಗೆ ಮಾದರಿಯಾಗಿದೆ ಎಂದು ನುಡಿದರು.

ಕಪ್ಪರಟ್ಟಿ-ಖಂಡ್ರಟ್ಟಿಯ ಬಸವರಾಜ ಹಿರೇಮಠ ಶ್ರೀಗಳು ಮಾತನಾಡಿ, ರಾಜಕಿಯ, ಶೈಕ್ಷಣಿಕ, ಪತ್ರಿಕಾರಂಗದಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ಗುರುತಿಸಿಕೊಂಡಿರುವ ಸರ್ವೋತ್ತಮ ಜಾರಕಿಹೊಳಿ ಅವರ ಹುಟ್ಟುಹಬ್ಬವನ್ನು ಆಡಂಬರವನ್ನು ಬಿಟ್ಟು ಸಮಾಜಕ್ಕೆ ಒಳ್ಳೆಯದಾಗುವ ಕೆಲಸವನ್ನು ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಅಭಿಮಾನಿಗಳು ಮಾಡುತ್ತಿರುವ ಕಾರ್ಯ ಸಮಾಜಕ್ಕೆ ಒಳ್ಳೆಯದು ಸರ್ವೋತ್ತಮ ಜಾರಕಿಹೊಳಿ ಅವರು ನೂರಾರು ಕಾಲ ಬಾಳಿ ಬದುಕಿ ಸಮಾಜಕ್ಕೆ ಒಳ್ಳೆಯ ಕಾರ್ಯ ಮಾಡಲ್ಲಿ ಎಂದು ಶುಭ ಕೋರಿದರು.

ಸಸಿ ನೆಡುವ ಕಾರ್ಯಕ್ರಮದಲ್ಲಿ ಯಾದವಾಡದ ಹುಬ್ಬಳಿ ಮುತ್ಯಾ, ಅರಭಾವಿ ಶಾಸಕ ಹಾಗೂ ಬೆಮ್ಯುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕರಾದ ನಿಂಗಪ್ಪ ಕುರಬೇಟ, ಅಬ್ದುಲ್ ಮಿರ್ಜಾನಾಯಕ., ಯಾದವಾಡ ಗ್ರಾ.ಪಂ ಅಧ್ಯಕ್ಷ ಬಸವರಾಜ ಭೂತಾಳಿ, ಕಾಮನಕಟ್ಟಿ ಗ್ರಾ.ಪಂ ಅಧ್ಯಕ್ಷ ಹನಮಂತ ಮಳ್ಳಿ, ಜಿ.ಪಂ ಮಾಜಿ ಸದಸ್ಯರಾದ ಗೋವಿಂದ ಕೊಪ್ಪದ, ರಂಗಪ್ಪ ಇಟ್ಟನವರ, ದಾಲ್ಮಿಯಾ ಸಿಮೆಂಟ ಕಾರ್ಖಾನೆಯ ಅಧಿಕಾರಿಗಳಾದ ಉಮೇಶ ದೇಸಾಯಿ, ವೀರಸಂಗಯ್ಯಾ ಬಾಗೋಜಿಮಠ, ರಾಮಣಗೌಡ ಬಿರಾದಾರ, ಮುಖಂಡರಾದ ಗೌಡಪ್ಪ ಗುರಡ್ಡಿ, ಮಲ್ಲಪ್ಪ ಚೆಕ್ಕೆನ್ನವರ, ರಾಜುಗೌಡ ಪಾಟೀಲ, ಮುನ್ನಾ ತಹಶೀಲ್ದಾರ, ನೂರಸಾಬ ಜಾರೆ, ಪರಶುರಾಮ ಸೂರ್ಯವಂಶಿ, ಅರಭಾವಿ ಬಜೆಪಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ ಬಸವರಾಜ ಬಾಗಿ, ಬಸು ಕೇರಿ, ಲಕ್ಷ್ಮಣ ಪಾಟೀಲ, ಸದಾಶಿವ ದುರಗನ್ನವರ, ರಮೇಶ ಉದಪುಡಿ, ಸತೀಶ ತೊಂಡಿಕಟ್ಟಿ, ಹಣಮಂತ ಮೆಣಸಿನಕಾಯಿ, ಶಂಕರಪ್ಪ ಕೌಜಲಗಿ, ಅಜೀತ ಪಾಟೀಲ ಮತ್ತು ಯಾದವಾಡ, ಕಾಮನಕಟ್ಟಿ ಗ್ರಾ.ಪಂ ಸದಸ್ಯರು, ಅರಣ್ಯ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮದ ಮುಖಂಡರು ಹಾಗೂ ಜಾರಕಿಹೊಳಿ ಅವರ ಅಭಿಮಾನಿಗಳು ಉಪಸ್ಥಿತರಿದ್ದರು.

- Advertisement -

LEAVE A REPLY

Please enter your comment!
Please enter your name here

- Advertisement -

Latest News

ಕವನಗಳು : ಶಶಿಕಾಂತ ಪಟ್ಟಣ

ನೀನು ನಾನು _________________ ನೀನು ನಾನು ನಾನು ನೀನು ದೈವ ಬೆಸೆದ ಜಾಲವು ಹೃದಯ ಭಾಷೆ ಅರಿವ ಮನಕೆ ಪ್ರೀತಿ ಬೆರಸಿದ ಭಾವವು ನೋವು ಮರೆತು ನಗುವ ಕಲೆಗೆ ಕಣ್ಣು ಬೆರೆತ ನೋಟವು ದೂರ ಗುರಿಯ ಹೆಜ್ಜೆ ಪಯಣದಿ ಕೂಡಿ ಹಾಡುವ ರಾಗವು ಕಷ್ಟ ಸುಖಕೆ ದಾರಿ ಹುಡುಕುವ ನಮ್ಮ ಬಾಳ ಬಟ್ಟೆಯು ಯಾರಿರದ ಹಾದಿಯಲಿ _____________________ ನಿನ್ನ ಮುಗುಳು...
- Advertisement -

More Articles Like This

- Advertisement -
close
error: Content is protected !!
Join WhatsApp Group