spot_img
spot_img

ಹಣ ಹಂಚಿದ ಬಿಜೆಪಿ ಮುಖಂಡ ಸಿದ್ದರಾಮ ಪಾಟೀಲ

Must Read

- Advertisement -

ಸಿಂದಗಿ: ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ರಾಜ್ಯದ ಜನತೆ ಯಾವುದೇ ಆಶೆ ಆಮಿಷಕ್ಕೊಳಗಾಗದೇ ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಬೇಕು.

ರಾಜ್ಯ ಚುನಾವಣೆ ಆಯೋಗ ಕಟ್ಟುನಿಟ್ಟಿನ ನಿಯಮ ಜಾರಿಗೆ ತಂದಿದೆ ಆದರೆ ಅದಕ್ಕೆ ಕ್ಯಾರೆ ಎನ್ನದೇ ಬಿಜೆಪಿ ಮುಖಂಡ ಸಿದ್ದರಾಮ ಪಾಟೀಲ ಹೂನಳ್ಳಿ ಅವರು ಹಣ ಹಂಚುವ ಮೂಲಕ ಆಯೋಗಕ್ಕೆ ವಿರುದ್ಧವಾಗಿ ತಾಲೂಕಿನ ಮದರಿ ಗ್ರಾಮದಲ್ಲಿ ಘಟನೆ ನಡೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಜಗಜ್ಜಾಹೀರಾಗಿದೆ.

ಹೌದು, ಚುನಾವಣೆ ಪಾರದರ್ಶಕವಾಗಿರಬೇಕು ಮತ್ತು ಸಾರ್ವಜನಿಕರು ಯಾವುದೇ ಆತಂಕಕ್ಕೆ  ಒಳಗಾಗದೆ ತಮ್ಮ ಹಕ್ಕು ಚಲಾಯಿಸಬೇಕು ಎಂದು ವೃದ್ಧರು, ಅಂಗವಿಕಲರು ಅವರು ಇದ್ದ ಸ್ಥಳಕ್ಕೆ ಹೋಗಿ ಮತದಾನ ಮಾಡಿಕೊಳ್ಳುತ್ತಿದೆ. ಸೇವೆಯಲ್ಲಿರುವ ಪತ್ರಕರ್ತರು, ಸರಕಾರಿ ನೌಕರರು ಇದ್ದ ಸ್ಥಳದಿಂದಲೇ ಅಂಚೆಯ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಿಕೊಟ್ಟು ಬೇರೆ ಸ್ಥಳಗಳಿಂದ ಬರುವ ವಾಹನಗಳಲ್ಲಿ ಹಣ ಸರಬರಾಜ ಆಗಬಾರದು ಎಂದು ಮೋರಟಗಿ, ದೇವಣಗಾಂವ, ಕನ್ನೋಳ್ಳಿ ಸೇರಿದಂತೆ ವಿವಿಧ ಮುಖ್ಯ ರಸ್ತೆಗಳಲ್ಲಿ ಚೆಕ್ ಪೋಸ್ಟಗಳನ್ನು ನಿರ್ಮಿಸಿ ಜಾಗೃತಿ ಮಾಡುತ್ತಿದೆ ಆದಾಗ್ಯೂ ಚುನಾವಣಾ ಇಲಾಖೆಯನ್ನು ಯಾಮಾರಿಸುವಂಥ ಕಾರ್ಯಕ್ಕೆ ಮುಂದಾಗಿರುವ ಆಡಳಿತ ಬಿಜೆಪಿ ಸರಕಾರದ ಮುಖಂಡ ಸಿದ್ದರಾಮ ಪಾಟೀಲ ಹೂನಳ್ಳಿ ಅವರು ಗ್ರಾಮೀಣ ಭಾಗಗಳಲ್ಲಿ ಹಣ ಹಂಚುತ್ತಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದನ್ನು ಸಾರ್ವಜನಿಕರು ಚುನಾವಣಾ ಇಲಾಖೆಗೆ ಪ್ರಶ್ನೆ ಮಾಡುವಂತಾಗಿದೆ.


- Advertisement -

ತಾಲೂಕಿನ ಮದರಿ ಗ್ರಾಮದಲ್ಲಿ ಹಣದ ಆಮಿಷ ಒಡ್ಡುತ್ತಿರುವದು ನನ್ನ ಗಮನಕ್ಕೆ ಬಂದಿದೆ ಕೂಡಲೇ ಚುನಾವಣಾ ಇಲಾಖಾ ಸಿಬ್ಬಂದಿಗಳನ್ನು ಕಳುಹಿಸಿ ಕ್ರಮ ಜರುಗಿಸುತ್ತೇನೆ ಮತ್ತು ಪ್ರಕರಣ ದಾಖಲಿಸಿಕೊಳ್ಳಲಾಗುವುದು.                                     

ಸಿದ್ದರಾಮ ಮಾರಿಹಾಳ

33 ವಿಧಾನ ಸಭಾ ಚುನಾವಣಾಧಿಕಾರಿಗಳು ಸಿಂದಗಿ.

- Advertisement -
- Advertisement -

Latest News

ಗುರ್ಲಾಪೂರ ಗ್ರಾಮಕ್ಕೆ ಸಂಸದೆ ಮಂಗಳಾ ಅಂಗಡಿ ಭೇಟಿ

ಗುರ್ಲಾಪೂರ- ಮೂಡಲಗಿ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗುರ್ಲಾಪೂರ ಗ್ರಾಮಕ್ಕೆ ಇತ್ತಿಚೆಗೆ ಬೆಳಗಾವಿಯ ಲೋಕಸಭಾ ಸದಸ್ಯರಾದ ಶ್ರೀಮತಿ ಮಂಗಳಾ ಸುರೇಶ ಅಂಗಡಿ ಇವರು ಪ್ರಥಮ ಬಾರಿಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group