ಬಿಜೆಪಿ ಮಂಡಲ ನೂತನ ಪದಾಧಿಕಾರಿಗಳಿಗೆ ಸನ್ಮಾನ

Must Read

ಸಿಂದಗಿ: ಪಟ್ಟಣದ ವೈಷ್ಣವಿ ಹೋಟೆಲಿನಲ್ಲಿ ಸಿದ್ದು ಗೌಡ ಪಾಟೀಲ್ ಇವರ ಪರಿವಾರ ವತಿಯಿಂದ ಬಿಜೆಪಿ ಮಂಡಲದ ನೂತನ ಪದಾಧಿಕಾರಿಗಳಿಗೆ  ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು. 

ಈ ಸಂದರ್ಭದಲ್ಲಿ ಮಾಜಿ ಶಾಸಕ ರಮೇಶ ಭೂಸನೂರ  ಮಾತನಾಡಿ, ಮಂಡಲ ಪದಾಧಿಕಾರಿಗಳಿಗೆ ಹೆಚ್ಚಿನ ಜವಾಬ್ದಾರಿ ಇರುವುದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾದ ರಮೇಶ ಜಿಗಜಿನಗಿಯವರ ಗೆಲುವಿಗೆ ಸಿಂದಗಿಯಿಂದ ಅತಿ ಹೆಚ್ಚು ಮತಗಳನ್ನು ಕೊಡುವುದರ ಮೂಲಕ ಮತ್ತೊಮ್ಮೆ ನರೇಂದ್ರ ಮೋದಿಯವರ ಕೈ  ಬಲಪಡಿಸುವ ಮೂಲಕ  ಅಧಿಕಾರಕ್ಕೆ ತರೋಣ ಎಂದರು. 

ನೂತನ ಮಂಡಲ ಅಧ್ಯಕ್ಷ ಸಂತೋಷ ಪಾಟೀಲ್ ಡಂಬಳ ಅವರು ನೂತನ ಮಂಡಲ ಅಧ್ಯಕ್ಷ ಆದ ನಂತರ ಜವಾಬ್ದಾರಿ ಹೆಚ್ಚಾಗಿದೆ ನಾವೆಲ್ಲ ಪದಾಧಿಕಾರಿಗಳು ಕೂಡಿಕೊಂಡು ಪ್ರತಿ ಭೂತ್ ಗಳಿಗೆ ಹೋಗಿ ಲೋಕಸಭೆಯ ಚುನಾವಣೆಯ ಮತಗಳನ್ನು ಕೇಳುವದರ ಮೂಲಕ  ಗೆಲ್ಲಿಸೋಣ ಎಂದರು.                                      

ಈ ಸಂದರ್ಭದಲ್ಲಿ ಸಿದ್ದು ಪಾಟೀಲ ಹೂವಿನಹಳ್ಳಿ ಮತ್ತು ಅವರ ಚಿರಂಜೀವಿ ಶಿವರಾಜ ಪಾಟೀಲ, ಮಲ್ಲು ಸಾವಳ ಸಂಘ, ಶ್ರೀಕಾಂತ್ ಬಿಜಾಪುರ, ಶಿಲ್ಪಾ ಕುದರಗುಂಡ, ಸಂತೋಷ ಮಣಗಿರಿ, ಬಂಗಾರಪ್ಪ ಗೌಡ ಬಿರಾದರ್ವಿ, ವಿಠ್ಠಲ ನಾಯ್ಕೋಡಿ, ಪ್ರಶಾಂತ ಕದ್ದರಕಿ ಶಿವಕುಮಾರ ಬಿರಾದಾರ,  ಶ್ರೀಶೈಲ ಚಳ್ಳಗಿ, ನೀಲಮ್ಮ ಯಡ್ರಾಮಿ ಸಿದ್ದರಾಮ ಅನಗೊಂಡ, ಸಿದ್ದಲಿಂಗಯ್ಯ ಹಿರೇಮಠ, ಅನುಸೂಬಾಯಿ ಪರಗೊಂಡ, ಸಮಿ ಬಿಜಾಪುರ ಸೇರಿದಂತೆ ಹಲವಾರು ಪದಾಧಿಕಾರಿಗಳು ಹಾಜರಿದ್ದರು.

Latest News

ಸ್ವರ ಗಾರುಡಿಗ ಸಿದ್ಧರಾಮ ಜಂಬಲದಿನ್ನಿ

ಹೈದ್ರಾಬಾದ ಕರ್ನಾಟಕದ ಇನ್ನೊಂದು ಅಪೂರ್ವದ ಕಲಾವಿದ ಶ್ರೇಷ್ಠ ಗಾಯಕ ಸಿದ್ಧರಾಮ ಜಂಬಲದಿನ್ನಿ ನಾಡು ನುಡಿ ಸಂಸ್ಕೃತಿಯ ಹಿರಿಯ ರಾಯಭಾರಿ . ರಾಯಚೂರಿನ ಬಿಸಿಲು ಬೇಗೆಯಲ್ಲಿ ಹಿಂದುಸ್ತಾನ್...

More Articles Like This

error: Content is protected !!
Join WhatsApp Group