ಬಿಜೆಪಿ ಅಲ್ಪಸಂಖ್ಯಾತ ಮುಖಂಡ ಬಾಬು ಕೋತಂಬರಿ ಕಾಂಗ್ರೆಸ್ ಸೇರ್ಪಡೆ

0
458

ಸಿಂದಗಿ: ಸತತ ಆರು ವರ್ಷಗಳಿಂದ ಬಿಜೆಪಿ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತನಾಗಿ ಕಳೆದ ಪಟ್ಟಣ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿಯಿಂದ ತಮ್ಮ ತಾಯಿಯಾದ ಖುರ್ಷಿದಾಬಾನು ಕೋತಂಬರಿ ಇವರನ್ನು ಕಣಕ್ಕೆ ಇಳಿಸಿ ಗೆಲವು ಸಾಧಿಸುವ ಮೂಲಕ ಅಲ್ಪಸಂಖ್ಯಾತ ಸಮುದಾಯದ ಮುಂಂಡನಾಗಿದ್ದ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಗತಿಪರ ರೈತ ಬಾಬು ಕೋತಂಬರಿ, ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಆಲಮೇಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ ದೇವರಮನಿ ಇವರ ನೇತ್ರತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಕಾಂಗ್ರೆಸ್ ಮುಖಂಡ ಅಬ್ದುಲ ಹಮೀದ್ ಮುಶ್ರೀಫ್, ತಾಲೂಕ ಕುರುಬ ಸಮಾಜದ ಅಧ್ಯಕ್ಷ ರಮೇಶ ಭಂಟನೂರ, ಡಾ.ಮುತ್ತುರಾಜ ಮನಗೂಳಿ ಅಂಜುಮನ್ ಕಮಿಟಿಯ ಉಪಾಧ್ಯಕ್ಷ ರಿಯಾಜ ಬಿಳವಾರ, ಗುತ್ತಿಗೆದಾರ ಫಾರೂಕ ಮೇಲಿನಮನಿ, ಅಯೂಬ ಕೋತಂಬರಿ ಸಿದ್ದಪ್ಪಗೌಡ ನಾವದಗಿ, ಕಾಮಣ್ಣಾ ಕಲ್ಲೂರ ಹಾಗೂ ಕಾಂಗ್ರೆಸ್ ಮುಖಂಡರು ಇದ್ದರು.